ಅಕ್ಷಯ್ ಕುಮಾರ್ ಮತ್ತು ಕತ್ರಿನಾ ಕೈಫ್ ಅಭಿನಯದ “ಸೂರ್ಯವಂಶಿ” ಚಿತ್ರ ನವೆಂಬರ್ 5 ರಂದು ಬಿಡುಗಡೆ ಆಗಿದೆ. ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಬಂಪರ್ ಓಪನಿಂಗ್ ಪಡೆದುಕೊಂಡಿದೆ. ರೋಹಿತ್ ಶೆಟ್ಟಿ ನಿರ್ದೇಶನದ ಈ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ದೊರೆಯುವುದರ ಜೊತೆಗೆ ಮೊದಲ ದಿನದಂದೇ ಅಂದಾಜು 26 ಕೋಟಿ ರೂ. ಸಂಪಾದಿಸಿದೆ.

ಅಕ್ಷಯ್ ಕುಮಾರ್, ಕತ್ರಿನಾ ಕೈಫ್ ನಟಿಸಿರುವ ಸೂರ್ಯವಂಶಿ, ಉತ್ತಮ ಆರಂಭದೊಂದಿಗೆ ಚಿತ್ರಮಂದಿರಗಳಿಗೆ ಭರವಸೆಯ ಆಶಾ ಕಿರಣವನ್ನು ತಂದಿದೆ. ಚಲನಚಿತ್ರ ವಿಮರ್ಶಕರು ಮತ್ತು ಸಿನಿಪ್ರಿಯರಿಂದ ಒಳ್ಳೆಯ ವಿಮರ್ಶೆಯನ್ನೂ ಸಹ ಪಡೆದುಕೊಂಡಿದೆ. ಅಲ್ಲದೇ ಈ ಚಿತ್ರವು ಹಾಲಿವುಡ್ ಚಿತ್ರ ಎಟರ್ನಲ್ಸ್ ನೊಂದಿಗೆ ಸ್ಪರ್ಧಿಸಿ ಜನರ ಮನಸ್ಸನ್ನು ಗೆದ್ದಿದೆ.

ಬಾಕ್ಸ್ ಆಫೀಸ್ ನಲ್ಲಿ 26 ಕೋಟಿ ರೂ.ಗೆ ತೆರೆಕಾಣುವುದರ ಜೊತೆಗೆ ಭಾರತದಲ್ಲಿ 3,500 ಕ್ಕೂ ಹೆಚ್ಚು ಸಿನಿಮಾ ಟಿಯೇಟರ್ ಗಳಲ್ಲಿ ಹಾಗೂ ವಿದೇಶಗಳಲ್ಲಿ 1,300 ಟಿಯೇಟರ್ ಗಳಲ್ಲಿ ಸೂರ್ಯವಂಶಿ ಬಿಡುಗಡೆಯಾಗಿದೆ. ಈ ಚಿತ್ರವು ಕೋವಿಡ್ ಸಾಂಕ್ರಾಮಿಕ ರೋಗದ ನಂತರ ಬಾಲಿವುಡ್‌ನಲ್ಲಿ ಹೊಸ ಭರವಸೆಯನ್ನು ಹುಟ್ಟುಹಾಕಿದೆ.

“ಸೂರ್ಯವಂಶಿ” ಚಿತ್ರ ತೆರೆ ಕಂಡ ಎಲ್ಲಾ ಕಡೆಗಳಲ್ಲಿಯೂ ಉತ್ತಮ ರೆಸ್ಪಾನ್ಸ್ ವ್ಯಕ್ತವಾಗಿದ್ದು, ಚಿತ್ರದ ಬಗೆಗಿನ ನಿರೀಕ್ಷೆ ಹೆಚ್ಚುತ್ತಿದೆ. ಸಿನಿಮಾ ಅಭಿಮಾನಿಗಳ ಮನಗೆದ್ದಿದ್ದು ಹೆಚ್ಚಿನ ಎಲ್ಲಾ ಸಿನಿಮಾ ಟಿಯೇಟರ್ ಗಳು ಹೌಸ್ ಫುಲ್ ಪ್ರದರ್ಶನವನ್ನು ಕಾಣುತ್ತಿದೆ. ಆರಂಭದಲ್ಲಿ ಅಬ್ಬರಿಸುತ್ತಿರುವ ಸೂರ್ಯವಂಶಿ ಮುಂದಿನ ದಿನಗಳಲ್ಲಿ ಜನರು ಯಾವ ರೀತಿ ರೆಸ್‌ಫೋನ್ಸ್ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಷ್ಟೇ.
ಇದನ್ನೂ ಓದಿ: Anushka Sharma : ನಮ್ಮ ಫೋಟೋ, ಜೀವನಕ್ಕೆ ಯಾವುದೇ ಫಿಲ್ಟರ್ ಅಗತ್ಯವಿಲ್ಲ ಎಂದ ಅನುಷ್ಕಾ ಶರ್ಮಾ
(Akshay Kumar’s 1-day collection of “Suryavanshi” is 26 crores!)