ಬಾಲಿವುಡ್‌ನ ಖ್ಯಾತ ಹಿರಿಯ ನಟಿ ಫಾರೂಕ್ ಜಾಫರ್ ವಿಧಿವಶರಾಗಿದ್ದಾರೆ. ಮಿದುಳಿನ ಪಾರ್ಶ್ವವಾಯು ಸಮಸ್ಯೆಯಿಂದ ಬಳಲುತ್ತಿದ್ದ ಅವರು ಗೋಮತಿ ನಗರದ ನಿವಾಸದಲ್ಲಿ ನಿಧನರಾಗಿದ್ದಾರೆ. ಆಕೆಯ ಅಂತಿಮ ಸಂಸ್ಕಾರ ಶನಿವಾರ ಐಶ್‌ಬಾಗ್ ಕಬ್ರಿಸ್ತಾನದಲ್ಲಿ ನಡೆಯಲಿದೆ.

ಅಮಿತಾಬ್ ಬಚ್ಚನ್ ಅಭಿನಯದ ಗುಲಾಬೊ ಸೀತಾಬೊ ಚಿತ್ರದಲ್ಲಿ ಜಾಫರ್ ಫಾತಿಮಾ ಬೇಗಂ ಪಾತ್ರದ ಮೂಲಕ ಬಹು ಖ್ಯಾತಿಯನ್ನು ಗಳಿಸಿದ್ದರು. 1981 ರಲ್ಲಿ ಬಾಲಿವುಡ್ ಚಲನಚಿತ್ರ ಉಮರಾವ್ ಜಾನ್ ಮೂಲಕ ಜಾಫರ್ ತನ್ನ ನಟನಾ ವೃತ್ತಿಯನ್ನು ಆರಂಭಿಸಿದರು, ಹಿರಿಯ ನಟಿ ರೇಖಾ ಅವರ ತಾಯಿಯ ಪಾತ್ರವನ್ನು ಫಾರೂಕ್ ಜಾಫರ್ ನಿರ್ವಹಿಸುದ್ದರು.

ಜೌನ್ಪುರ್ ಜಿಲ್ಲೆಯ ಶಹಗಂಜ್ ಪ್ರದೇಶದ ಚಕೇಸರ್ ಗ್ರಾಮದಲ್ಲಿ ಜನಿಸಿದ್ದ ಫಾರೂಕ್ ಜಾಫರ್ ಅವರು, ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಪಡೆದುಕೊಂಡಿದ್ದರು, ನಂತರದಲ್ಲಿ ಅವರು ಲಕ್ನೋಗೆ ಬಂದು ನೆಲೆಸಿದ್ದರು. ಇನ್ನು ಜಿ ಎಂಎಲ್‌ಸಿ ಮತ್ತು ಮಾಜಿ ಯುಪಿ ಕಾಂಗ್ರೆಸ್ ಮುಖ್ಯಸ್ಥ ಎಸ್ ಎಂ ಜಾಫರ್ ಅವರನ್ನು ವಿವಾಹವಾದರು. ಅವರು ಪೀಪ್ಲಿ ಲೈವ್, ಸ್ವಡೆಸ್, ಸುಲ್ತಾನ್ ಮತ್ತು ಸೀಕ್ರೆಟ್ ಸೂಪರ್‌ಸ್ಟಾರ್ ಸೇರಿದಂತೆ ಬಾಲಿವುಡ್‌ನ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.
ಇದನ್ನೂ ಓದಿ :
ಸಿನಿಮಾ ರಿಲೀಸ್ ಬೆನ್ನಲ್ಲೇ ಕಿಚ್ಚನ ಆ ಒಂದು ಟ್ವೀಟ್‌ಗೆ ಅಭಿಮಾನಿಗಳು ಫಿದಾ
ಸಿಂಹಕ್ಕೆ ಕೈಯಾರೆ ಮಾಂಸ ಉಣಿಸಿದ ರಾಕಿಂಗ್ ಸ್ಟಾರ್: ವಿಡಿಯೋ ವೈರಲ್
( Famous Bollywood Actress Farrukh Jaffar dies )