ಮಂಗಳವಾರ, ಏಪ್ರಿಲ್ 29, 2025
HomeCinemaGovinda : ಹೀರೋ ನಂ1 ಮನೆಜಗಳ‌ ಬೀದಿಗೆ : ಬದುಕಿರೋವರೆಗೂ ಮುಖ ನೋಡಲ್ಲ ಅಂದ್ರು ಗೋವಿಂದ...

Govinda : ಹೀರೋ ನಂ1 ಮನೆಜಗಳ‌ ಬೀದಿಗೆ : ಬದುಕಿರೋವರೆಗೂ ಮುಖ ನೋಡಲ್ಲ ಅಂದ್ರು ಗೋವಿಂದ ಪತ್ನಿ

- Advertisement -

ಬಾಲಿವುಡ್ ನಟ ಗೋವಿಂದಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಭಾರಿ ನಟನೆಯ ಬದಲು ಜಗಳದ ಕಾರಣಕ್ಕೆ ಗೋವಿಂದಾ ಸುದ್ದಿಯಾಗಿದ್ದು ನಟ ಗೋವಿಂದಾ ಹಾಗೂ ಅವರ ಸೋದರಳಿಯ ನಟ ಕೃಷ್ಣ ಅಭಿಷೇಕ್ ನಡುವಿನ ಜಗಳ ಬೀದಿಗೆ ಬಿದ್ದಿದೆ.

ಹಾಸ್ಯ ನಟ ಕೃಷ್ಣ ಅಭಿಷೇಕ್ ಮತ್ತು ಗೋವಿಂದಾ ಕುಟುಂಬದ ನಡುವೆ ಕಳೆದ ಐದು ವರ್ಷಗಳಿಂದ ಕಲಹ ನಡೆದಿದ್ದು ಎರಡು ಕುಟುಂಬಗಳು ಒಬ್ಬರ ಮುಖ ಒಬ್ಬರು ನೋಡಲು ಬಯಸುತ್ತಿಲ್ಲ.

ಮೊನ್ನೆಯಷ್ಟೇ ನಟ ಗೋವಿಂದಾ ಕುಟುಂಬ ದಿ ಕಪಿಲ್ ಶರ್ಮಾ ಶೋಗೆ ಬಂದಿತ್ತು. ಈ ವೇಳೆ ನಟ ಕೃಷ್ಣ ಅಭಿಷೇಕ ಇಲ್ಲದಿದ್ದರೆ ಮಾತ್ರ ಶೋಗೆ ಬರೋದಾಗಿ ಗೋವಿಂದಾ ಪತ್ನಿ ಸುನೀತಾ ಅಹುಜಾ ಬಹಿರಂಗವಾಗಿಯೇ ಹೇಳಿದ್ದರು ಎನ್ನಲಾಗಿದೆ.

ಹೀಗಾಗಿ ಗೋವಿಂದಾ ಕುಟುಂಬಸ್ಥರು ಪಾಲ್ಗೊಂಡ ಶೋದಲ್ಲಿ ನಟ ಕೃಷ್ಣ ಅಭಿಷೇಕ ಇರಲಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕೃಷ್ಣ ಪತ್ನಿ ಕಶ್ಮೇರಾ, ಕಳೆದ ಐದು ವರ್ಷಗಳಿಂದ ಅವರ ಕುಟುಂಬದ ಜೊತೆ ಸಂಬಂಧ ಕಡಿದುಕೊಂಡಿದ್ದೇನೆ. ನನಗೆ ಅವರ ಜಗಳದ ಬಗ್ಗೆ ಯಾವುದೇ ಆಸಕ್ತಿ ಇಲ್ಲ ಎಂದಿದ್ದಾರೆ.

ಈ ಮಧ್ಯೆ ನಮ್ಮ ಹಾಗೂ ಕೃಷ್ಣ ನಡುವೆ ಇರುವ ಸಮಸ್ಯೆ ಎಂದಿಗೂ ಬಗೆಹರಿಯುವುದಿಲ್ಲ. ನಾವು ಎಂದಿಗೂ ಅವನ ಮುಖನೋಡಲು ಬಯಸುವುದಿಲ್ಲ ಎಂದು ಗೋವಿಂದಾ ಪತ್ನಿ ಹೇಳಿದ್ದಾರೆ. ಆದರೆ ನಟ ಗೋವಿಂದಾ ಹಾಗೂ ಕೃಷ್ಣ ಅಭಿಷೇಕ ನಡುವಿನ‌ ಭಿನ್ನಾಭಿಪ್ರಾಯವೇನು? ಅದಕ್ಕೆ ಕಾರಣವೇನು ಎಂಬುದು ಮಾತ್ರ ಸ್ಪಷ್ಟವಾಗಿಲ್ಲ.

ಇದನ್ನೂ ಓದಿ : ಟ್ವೀಟರ್ ನಿಂದ ದಿನಕ್ಕೆ 200 FIR ದಾಖಲಾಗ್ತಿತ್ತು: ಕೊನೆಗೂ ಸತ್ಯ ಹೇಳಿದ ಕಂಗನಾ

ಇದನ್ನೂ ಓದಿ : ನಿರ್ಮಾಪಕಿಯಾದ್ರು ನಟಿ ಅನಿತಾ ಭಟ್‌ : ‘ಸಮುದ್ರಂ’ ಗೆ ಸಾಥ್‌ ಕೊಟ್ಟ ಶ್ರೀ ಮುರುಳಿ

( Actor Govinda’s family dispute : wife Sunitha Ahuja was not seen until she was alive )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular