ಜೆನಿಲಿಯಾ ದೇಶಮುಖ್ ಬಹುಬಾಷ ನಟಿ. ಸ್ವಲ್ಪ ಸಮಯಗಳಿಂದ ನಟನೆಯಿಂದ ದೂರ ಉಳಿದಿದ್ದರೂ ಕೂಡ ಜೆನಿಲಿಯಾ ಸೋಶಿಯಲ್ ಮಿಡಿಯಾದಲ್ಲಿ ತುಂಬಾ ಆಕ್ಟೀವ್ ಆಗಿದ್ದಾರೆ. ಜೆನಿಲಿಯಾ ಸೋಶಿಯಲ್ ಮಿಡಿಯಾದಲ್ಲಿ ತಮ್ಮ ಫೋಟೊ ಹಾಗೂ ವಿಡಿಯೋ ವನ್ನು ಅಗಾಗೇ ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಇವರನ್ನು ಈಗ ಟ್ರೋಲಸ್ರ್ ಸಮಸ್ಯೆ ಕಾಡುತ್ತಿದೆ. ಟ್ರೋಲಿಗನೊಬ್ಬ ಕೆಟ್ಟದಾಗಿ ಕಾಮೆಂಟ್ ಮಾಡಿ ಜೆನಿಲಿಯಾ ದೇಶಮುಖ್ ಪತಿ ರಿತೇಶ್ ದೇಶಮುಖ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ತನ್ನನ್ನು ಟ್ರೋಲ್ ಮಾಡಿದವರಿಗೆ ಜೆನಿಲಿಯಾ ಸೈಲೆಂಟ್ ಆಗಿಯೇ ಉತ್ತರ ನೀಡಿದ್ದಾರೆ. ಜೆನಿಲಿಯಾ ಮಾತ್ರವಲ್ಲದೇ ಪತಿ ರಿತೇಶ್ ದೇಶಮುಖ್ ಸಹ ಟ್ರೋಲಿಗರಿಗೆ ಸರಿಯಾದ ಉತ್ತರ ನೀಡಿದ್ದಾರೆ. ನೆಟ್ಟಿಗನೊಬ್ಬ ಜೆನಿಲಿಯಾಗೆ ಓವರ್ ಆಕ್ಟಿಂಗ್, ಅಶ್ಲೀಲ ಆಂಟಿ, ನಾಚಿಕೆ ಆಗಬೇಕು ನಿಮಗೆ ಎಂಬ ಹಲವು ಕಮೆಂಟ್ ಗಳನ್ನು ಮಾಡಿದ್ದರು. ಅಷ್ಟೇ ಅಲ್ಲ ನಿಮಗೆ ವಯಸ್ಸಾಗಿದೆ, ಇಬ್ಬರು ಮಕ್ಕಳಿದ್ದಾರೆ. ನಿಮ್ಮ ಅವತಾರ ನೋಡಿ ಮಕ್ಕಳು ಕೂಡ ಶಾಕ್ ಆಗಬಹುದು” ಎಂದು ಟ್ರೋಲಿಗನೊಬ್ಬ ಕೆಟ್ಟದಾಗಿ ಕಾಮೆಂಟ್ ಮಾಡಿದ್ದ.
ಇದನ್ನೂ ಓದಿ: ಮದುವೆಗೂ ಮುನ್ನ ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಟೆಂಪಲ್ ರನ್
ಇದಕ್ಕೆ ಉತ್ತರ ನೀಡಿದ್ದ ಜೆನಿಲಿಯಾ “ಬಹುಶಃ ಕಾಮೆಂಟ್ ಮಾಡಿದ ವ್ಯಕ್ತಿಯ ದಿನ ಕೆಟ್ಟದಾಗಿತ್ತು ಅನಿಸುತ್ತದೆ. ಈ ಕಾರಣಕ್ಕೆ ಅವರು ಆ ರೀತಿ ಕಾಮೆಂಟ್ ಹಾಕಿರಬಹುದು. ಅವರ ಮನೆಯಲ್ಲಿ ಎಲ್ಲವೂ ಸರಿಯಾಗಲಿದೆ ಎಂದು ನಾನು ಭಾವಿಸಿದ್ದೇನೆ” ಎಂದು ಪ್ರತಿಕ್ರಿಯೆ ನೀಡಿದ್ದರು. ಇದೀಗ ನಟ, ಪತಿ ರಿತೇಶ್ ದೇಶಮುಖ್ ಕೂಡ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ಕೆಟ್ಟದಾಗಿ ಕಾಮೆಂಟ್ ಮಾಡಿದ ವ್ಯಕ್ತಿ ಯಾರೆಂದು ತಿಳಿದು ರಿತೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಕಾಮೆಂಟ್ ಮಾಡಿದ್ದ ವ್ಯಕ್ತಿಯ ಪ್ರೋಫೈಲ್ ಹೆಸರು ಯೋಗ ಎಂದಿದೆ. ಹಾಗಾಗಿ ರಿತೇಶ್ ಕೆಟ್ಟದಾಗಿ ಕಾಮೆಂಟ್ ಮಾಡಿದ ವ್ಯಕ್ತಿ ಮೊದಲು ಯೋಗವನ್ನು ಸರಿಯಾಗಿ ಮಾಡಲಿ ಎಂದು ಹೇಳಿದ್ದಾರೆ. “ನೀವು ಇದನ್ನ ಸರಿಯಾಗಿ ಮಾಡಬೇಕು. ಅದರಲ್ಲೂ ಶವಾಸನ ಮತ್ತು ಕಪಾಲಭಾತಿಯನ್ನು ನಿಖರವಾಗಿ ಮಾಡಿ” ಎಂದು ರಿತೇಶ್ ದೇಶಮುಖ್ ಪ್ರತಿಕ್ರಿಯೆ ನೀಡಿದ್ದಾರೆ.