ಭಾನುವಾರ, ಏಪ್ರಿಲ್ 27, 2025
HomeCinemaಆಹಾರ ಮತ್ತು ಸೆಕ್ಸ್: ಇವುಗಳಲ್ಲಿ ನಟಿ ಶ್ರುತಿ ಹಾಸನ್ ಆಯ್ಕೆ ಯಾವುದು ಗೊತ್ತಾ?

ಆಹಾರ ಮತ್ತು ಸೆಕ್ಸ್: ಇವುಗಳಲ್ಲಿ ನಟಿ ಶ್ರುತಿ ಹಾಸನ್ ಆಯ್ಕೆ ಯಾವುದು ಗೊತ್ತಾ?

- Advertisement -

ಮುಂಬೈ: ಬ್ಯೂಟಿ ಜೊತೆ ಟ್ಯಾಲೆಂಟ್ ಅಂತಾನೇ ಫೇಮಸ್ ಆಗಿರೋ ಬಹುಭಾಷಾ ನಟ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಸದ್ಯ ಸುದ್ದಿಯಲ್ಲಿದ್ದಾರೆ. ಶೋವೊಂದರಲ್ಲಿ ಆಹಾರ ಮತ್ತು ಸೆಕ್ಸ್ ನಡುವೆ ನಿಮ್ಮ ಆಯ್ಕೆ ಯಾವುದು ಎಂಬ ಪ್ರಶ್ನೆಗೆ ಶ್ರುತಿ ಜಬರ್ದಸ್ತ್ ಉತ್ತರ ನೀಡಿದ್ದಾರೆ.

ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಬ್ಯುಸಿಯಾಗಿರೋ ಶ್ರುತಿ ಹಾಸನ್ ಇತ್ತೀಚಿಗೆ ವಾಹಿನಿಯೊಂದಕ್ಕೆ ಇಂಟರವ್ಯೂ ನೀಡಿದ್ದರು. ಈ ವೇಳೆ ಸಂದರ್ಶಕರು ಆಹಾರ ಮತ್ತು ಸೆಕ್ಸ್ ಇವೆರಡರಲ್ಲಿ ಯಾವುದು ಮುಖ್ಯ? ನಿಮ್ಮ ಆಯ್ಕೆ ಯಾವುದು ಎಂದು ಪ್ರಶ್ನಿಸಿದ್ದರು.

ಈ ಬೋಲ್ಡ್ ಪ್ರಶ್ನೆಗೆ ಅಷ್ಟೇ ಬೋಲ್ಡಾಗಿ ಉತ್ತರಿಸಿದ ಶ್ರುತಿ ಹಾಸನ್, ನಾವು ಆಹಾರ ಇಲ್ಲದೇ ಬದುಕಲೇ ಸಾಧ್ಯವಿಲ್ಲ. ಸೆಕ್ಸ್ ಇಲ್ಲದೆ ಬದುಕಬಹುದು ಎಂದಿದ್ದಾರೆ.

ಫಟಾಫಟ್ ಪ್ರಶ್ನೆಗಳ ಸುತ್ತಿನಲ್ಲಿ ಕೇಳಲಾದ ಪ್ರಶ್ನೆಗೆ ಮರು ಪ್ರಶ್ನೆ ಹಾಕಿದ ಶ್ರುತಿ ಸೆಕ್ಸ್ ಮತ್ತು ಆಹಾರದ ನಡುವೆ ಹೋಲಿಕೆ ಮಾಡಬಹುದೇ ಎಂದು ಕೇಳಿದ್ದಾರೆ.ವಕೀಲ್ ಸಾಬ್ ಸಿನಿಮಾದ ಬಳಿಕ ಸದ್ಯ ಶ್ರುತಿ ಪ್ರಭಾಸ್ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ ಸಲಾರ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.  

Actress shruti hassan bold talk about food and sex

RELATED ARTICLES

Most Popular