ಸೋಮವಾರ, ಜೂನ್ 16, 2025
HomeCinemaAryana Khan : ಬಾಲಿವುಡ್ ನಟ ಶಾರೂಕ್ ಖಾನ್ ಗೆ ಬಿಗ್ ಶಾಕ್ : ಪುತ್ರ...

Aryana Khan : ಬಾಲಿವುಡ್ ನಟ ಶಾರೂಕ್ ಖಾನ್ ಗೆ ಬಿಗ್ ಶಾಕ್ : ಪುತ್ರ ಆರ್ಯನ್‌ ಖಾನ್ ಚರಸ್ ಸೇವನೆ ಮಾಡಿರುವುದು ದೃಢ

- Advertisement -

ಮುಂಬೈ : ಬಾಲಿವುಡ್ ನಟ ಶಾರೂಕ್ ಖಾನ್ ಪುತ್ರ ಆರ್ಯನ್‍ಖಾನ್ ಡ್ರಗ್‌ ಪ್ರಕರಣದಲ್ಲಿ ಸಿಲುಕಿ ಬಂಧನದಲ್ಲಿದ್ದಾರೆ. ನ್ಯಾಯಾಲಯ ಜಾಮೀನು ಅರ್ಜಿ ತಿರಸ್ಕರಿಸಿದ ಬೆನ್ನಲ್ಲೇ ಶಾರೂಕ್ ಖಾನ್ ಪುತ್ರ ಆರ್ಯನ್‍ಖಾನ್ ಚರಸ್ ಸೇವನೆ ಮಾಡಿರುವುದು ದೃಢಪಟ್ಟಿದೆ. ಆರ್ಯನ್ ಸ್ನೇಹಿತ ಅರ್ಬಾಜ್ ಮರ್ಚೆಂಟ್ ಧರಿಸಿದ್ದ ಶೂನಲ್ಲಿ 6 ಗ್ರಾಂ ಚರಸ್ ಸಿಕ್ಕಿದೆ ಎಂದು ಎನ್‍ಸಿಬಿ ಮೂಲಗಳು ತಿಳಿಸಿವೆ.

ಅರಬ್ಬಿ ಸಮದ್ರದಲ್ಲಿ ನಡೆದಿರುವ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತರ ಎನ್‍ಸಿಬಿ ಅಕಾರಿಗಳು ನಡೆಸಿದ ಪಂಚನಾಮೆ ಸಂದರ್ಭದಲ್ಲಿ ಆರ್ಯನ್ ನಿಷೇಧಿತ ಚರಸ್ ಸೇವನೆ ಮಾಡಿರುವುದು ಪತ್ತೆಯಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: Raveena Tandon :ಆರ್ಯನ್ ಬಂಧನ ‘ನಾಚಿಕೆಗೇಡಿನ ರಾಜಕೀಯʼ ಎಂದ ನಟಿ ರವೀನಾ ಟಂಡನ್

ಆರ್ಯನ್ ಸ್ನೇಹಿತ ಅರ್ಬಾಜ್ ಧರಿಸಿದ್ದ ಶೂ ಒಳಗೆ ನಿಷೇತ ಚರಸ್ ಪ್ಯಾಕೆಟ್ ಸಿಕ್ಕಿದೆ. ಹೀಗಾಗಿ ರೇವ್ ಪಾರ್ಟಿ ಸಂದರ್ಭದಲ್ಲಿ ಆರ್ಯನ್ ಡ್ರಗ್ ಸೇವನೆ ಮಾಡಿರುವುದು ಸಾಬೀತಾಗಿದೆ ಎಂದು ಎನ್‍ಸಿಬಿ ಅಕಾರಿ ಆಶೀಶ್ ರಾಜನ್ ಪ್ರಸಾದ್ ತಿಳಿಸಿದ್ದಾರೆ.

ಇದನ್ನೂ ಓದಿ :Aryan Khan : ಆರ್ಯನ್‌ ಖಾನ್‌ಗೆ ಇಲ್ಲ ಬಿಡುಗಡೆ ಭಾಗ್ಯ : ಅ.9 ರ ವರೆಗೆ ಎನ್‌ಸಿಬಿ ಕಸ್ಟಡಿ

(The Aryan Khan Charas is consuming)

RELATED ARTICLES

Most Popular