ಬಾಲಿವುಡ್ ನ ಶಾಕಿಂಗ್ ಬೆಳವಣಿಯೊಂದರಲ್ಲಿ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಪೋರ್ನ್ ವಿಡಿಯೋ,ಸಿನಿಮಾ ತಯಾರಿಕೆ ಆರೋಪದಡಿ ಬಂಧನಕ್ಕೊಳಗಾಗಿದ್ದಾರೆ. ರಾಜ್ ಬಂಧನವಾಗುತ್ತಿದ್ದಂತೆ ನಟಿ ಹಾಗೂ ಮಾಡೆಲ್ ಸಾಗರಿಕಾ ರಾಜ್ ಕುಂದ್ರಾ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ತಮಗಾದ ಕೆಟ್ಟ ಅನುಭವದ ವಿಡಿಯೋ ರಿಲೀಸ್ ಮಾಡಿರುವ ನಟಿ ಸಾಗರಿಕಾ ಶೋನಮ್, ನನಗೆ ರಾಜ್ ಕುಂದ್ರಾ ನಿರ್ಮಾಣದ ವೆಬ್ ಸೀರಿಸ್ ನಲ್ಲಿ ನಟಿಸುವಂತೆ ಆಫರ್ ನೀಡಲಾಗಿತ್ತು. ಈ ವೇಳೆ ನಗ್ನವಾಗಿ ಆಡಿಷನ್ ಕೊಡುವಂತೆ ರಾಜ್ ಕುಂದ್ರಾ ಒತ್ತಾಯಿಸಿದ್ದರು ಎಂದಿದ್ದಾರೆ.

2020 ರ ಅಗಸ್ಟ್ ನಲ್ಲಿ ರಾಜ್ ಕುಂದ್ರಾ ಜೊತೆ ಕೆಲಸ ಮಾಡುವ ಉಮೇಶ್ ಕಾಮತ್ ನನಗೆ ಪೋನ್ ಮಾಡಿದ್ದರು. ರಾಜ್ ಕುಂದ್ರಾ ನಿರ್ಮಾಣದ ವೆಬ್ ಸೀರಿಸ್ ನಲ್ಲಿ ನಟಿಸುವಂತೆ ನನಗೆ ಆಫರ್ ನೀಡಿದ್ದರು. ರಾಜ್ ಕುಂದ್ರಾ ಬಗ್ಗೆ ಕೇಳಿದಾಗ ಅವರು ಶಿಲ್ಪಾ ಶೆಟ್ಟಿ ಪತಿ ಎಂದು ಹೇಳಿದ್ದರು.

ರಾಜ್ ಕುಂದ್ರಾ ನಿರ್ಮಾಣ ಸಂಸ್ಥೆ ಸೇರಿಕೊಂಡರೇ ಒಂದಾದ ಮೇಲೊಂದು ಅವಕಾಶ ಸಿಗಲಿದೆ. ಎತ್ತರಕ್ಕೆ ಬೆಳೆಯಬಹುದು ಎಂದು ಉಮೇಶ್ ಕಾಮತ್ ಹೇಳಿದ್ದರು. ಆಡಿಷನ್ ವಿಡಿಯೋ ಕಾಲ್ ಮೂಲಕ ನೀಡುವಂತೆ ಹೇಳಿದ್ದರು.

ನಾನು ವಿಡಿಯೋ ಕಾಲ್ ಮೂಲಕ ಆಡಿಷನ್ ಗೆ ಜಾಯಿನ್ ಆದಾಗ ಅದರಲ್ಲಿ ಒಬ್ಬರು ಮುಖವನ್ನು ಕವರ್ ಮಾಡಿಕೊಂಡಿದ್ದರು. ಅವರು ರಾಜ್ ಕುಂದ್ರಾ ಇರಬೇಕು.ಅವರು ನನಗೆ ನಗ್ನವಾಗಿ ನಟಿಸಿ ಆಡಿಷನ್ ಕೊಡುವಂತೆ ಹೇಳಿದರು.

ನನಗೆ ಶಾಕ್ ಆಯ್ತು ಮತ್ತು ನಾನು ಆಡಿಷನ್ ಕೊಡದೇ ಕಾಲ್ ಕಟ್ ಮಾಡಿದೆ ಎಂದು ತಮ್ಮಗಾದ ಕಹಿಅನುಭವವನ್ನು ಸಾಗರಿಕಾ ಶೇರ್ ಮಾಡಿದ್ದಾರೆ. ಈ ಮಧ್ಯೆ ಸಾಗರಿಕಾ ಉಲ್ಲೇಖಿಸಿದ ಉಮೇಶ್ ಕಾಮತ್ ಹಲವು ವರ್ಷಗಳಿಂದ ಕುಂದ್ರಾ ಜೊತೆ ಕೆಲಸ ಮಾಡುತ್ತಿದ್ದು, ಆತನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ನೀಲಿ ಚಿತ್ರಗಳನ್ನು ನಿರ್ಮಿಸಿ ಪ್ರಸಾರ ಮಾಡುತ್ತಿರುವ ಈ ಪ್ರಕರಣದಲ್ಲಿ ಗೆಹನಾ ವಶಿಷ್ಠ, ಉಮೇಶ್ ಕಾಮತ್ ಸೇರಿದಂತೆ ಹಲವರ ಬಂಧನವಾಗಿದ್ದು, ಪ್ರಮುಖ ಆರೋಪಿ ರಾಜ್ ಕುಂದ್ರಾ ಎಂದು ಮುಂಬೈ ಕ್ರೈಂ ಬ್ರ್ಯಾಂಚ್ ಮಾಹಿತಿ ನೀಡಿದೆ.