ಸೋಮವಾರ, ಏಪ್ರಿಲ್ 28, 2025
HomeCinema83 Trailer : ಬುರ್ಜಾ ಖಲೀಫಾದಲ್ಲಿ 83 ಟ್ರೇಲರ್ ಅನಾವರಣ : ಸಂಭ್ರಮಕ್ಕೆ ಸಾಕ್ಷಿಯಾದ ದೀಪಿಕಾ-...

83 Trailer : ಬುರ್ಜಾ ಖಲೀಫಾದಲ್ಲಿ 83 ಟ್ರೇಲರ್ ಅನಾವರಣ : ಸಂಭ್ರಮಕ್ಕೆ ಸಾಕ್ಷಿಯಾದ ದೀಪಿಕಾ- ರಣವೀರ್‌

- Advertisement -

ಬಿಡುಗಡೆಗೂ ಮುನ್ನವೇ ವಿವಾದ ಸೃಷ್ಟಿಸಿದ್ದ ಸಿನಿಮಾ 83 ಸದ್ಯ ಒಂದೊಳ್ಳೆ‌ ಕಾರಣಕ್ಕೆ ಸುದ್ದಿಯಲ್ಲಿದೆ. ಸಿನಿಮಾ ರಿಲೀಸ್ ಗೆ ಮುಹೂರ್ತ ಫಿಕ್ಸ್ ಆಗಿದೆ. ಇದರ ಜೊತೆ ಚಿತ್ರದ ಪ್ರಸಿದ್ಧಿಗಾಗಿ ಸಿನಿಮಾದ ಟ್ರೇಲರ್ ರನ್ನು ವಿಶ್ವದ ಅತಿ ಎತ್ತರದ ಕಟ್ಟಡ ಖ್ಯಾತಿಯ (83 Trailer Burj Khalifa )ಬುರ್ಜಾ ಖಲೀಫಾದಲ್ಲಿ ಬಿಡುಗಡೆ ಮಾಡಲಾಗಿದೆ. ಬುರ್ಜಾ ಖಲೀಫಾದಲ್ಲಿ ಟ್ರೇಲರ್ ನ್ನು ಬಿಡುಗಡೆ ಮಾಡಲಾಗಿದ್ದು, ಈ ಸಂದರ್ಭಕ್ಕೆ ಚಿತ್ರದ ನಿರ್ದೇಶಕ ಕಬೀರ್ ಖಾನ್, ನಟಿ ದೀಪಿಕಾ ಪಡುಕೋಣೆ ಹಾಗೂ ಚಿತ್ರದ ನಾಯಕ ರಣವೀರ್‌ ಸಿಂಗ್‌ (Ranveer Singh Deepika Padukone) ಸಾಕ್ಷಿಯಾದ್ರು. ಇದೇ ತಿಂಗಳ 24 ರಂದು 83 ಸಿನಿಮಾ ವಿಶ್ವದಾದ್ಯಂತ ತೆರೆ ಕಾಣಲಿದ್ದು ಕ್ರಿಕೆಟ್ ಪ್ರೇಮಿಗಳು ಸಿನಿಮಾ ವೀಕ್ಷಿಸಲು ಕುತೂಹಲದಿಂದ ಕಾಯ್ತಿದ್ದಾರೆ.

ಕಣ್ಣು ಕೊರೈಸುವ ಬೆಳಕಿನಲ್ಲಿ ಅತಿ ಎತ್ತರದ ಕಟ್ಟಡ ಬುರ್ಝಾ ಖಲೀಫಾ ದಲ್ಲಿ ತಮ್ಮ ಬಹುನೀರಿಕ್ಷಿತ ಸಿನಿಮಾದ ಟ್ರೇಲರ್ ರಿಲೀಸ್ ನೋಡಿ ರಣವೀರ್‌ ಸಿಂಗ್‌ ಫುಲ್ ಖುಷಿಯಾಗಿ ದ್ದಾರೆ. ದೀಪಿಕಾ ಪಡುಕೋಣೆ ಕಣ್ಣು‌ಮಿಟುಕಿಸದೇ ದೃಶ್ಯವನ್ನು ಕಣ್ತುಂಬಿಕೊಂಡರು. ಇದಕ್ಕೂ ಮುನ್ನ ದುಬೈನಲ್ಲಿ 83 ಸಿನಿಮಾ ತಂಡ ಅದ್ದೂರಿ ಪ್ರಚಾರ ಕಾರ್ಯ ನಡೆಸಿತು. ಸೌದಿ ಅರೇಬಿಯಾದ ಜೆದಾಹ್ ನ ರೆಡ್ ಸೀ ಚಲನಚಿತ್ರೋತ್ಸವದಲ್ಲಿ ದೀಪಿಕಾ ಹಾಗೂ ರಣ್ಬೀರ್ ದಂಪತಿಗಳಿಗೆ ರೆಡ್ ಕಾರ್ಪೆಟ್ ಸ್ವಾಗತ ನೀಡಲಾಗಿತ್ತು.

ಬಟರ್ ಫ್ಲೈಡಿಸೈನ್ ನಲ್ಲಿ ವಿನ್ಯಾಸಗೊಳಿಸಿದ ಡ್ರೆಸ್ ನಲ್ಲಿ ನಟಿ ದೀಪಿಕಾ ಪಡುಕೋಣೆ ಮಿಂಚಿದರು. 1983 ರಲ್ಲಿ ಇಂಗ್ಲೆಂಡ್ ನ ಲಾರ್ಡ್ಸ್ ನಲ್ಲಿ‌ ನಡೆದ ಪಂದ್ಯದಲ್ಲಿ ಭಾರತ ತಂಡವೂ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ ವಿಶ್ವಕಪ್ ಮುಡಿಗೇರಿಸಿಕೊಂಡಿತ್ತು. ಈ ಸಿನಿಮಾದಲ್ಲಿ ಕಪಿಲ್ ದೇವ್ ಪಾತ್ರವನ್ನು ರಣವೀರ್‌ ಸಿಂಗ್‌ ನಿರ್ವಹಿಸಿದ್ದು, ಪತ್ನಿ ರೋಮಿ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಹಾಗೂ ಕೋಚ್ ಪಾತ್ರದಲ್ಲಿ ಪಂಕಜ್ ತ್ರಿಪಾಠಿ ನಟಿಸಿದ್ದಾರೆ. ಡಿಸೆಂಬರ್ 24 ರಂದು ಸಿನಿಮಾ ಕನ್ನಡ, ಹಿಂದಿ, ಮಲೆಯಾಳಂ, ತೆಲುಗು ಹಾಗೂ ತಮಿಳಿನಲ್ಲಿ ತ್ರಿಡಿಯಲ್ಲಿ ತೆರೆ ಕಾಣಲಿದೆ.

ಕನ್ನಡದಲ್ಲಿ ಸಿನಿಮಾವನ್ನು ಫ್ಯಾಂಟಮ್ ಫಿಲ್ಮ್ಸ್ ಅಡಿಯಲ್ಲಿ ಜ್ಯಾಕ್ ಮಂಜು ವಿತರಣೆ ಮಾಡಲಿದ್ದಾರೆ. ನಟ ಸುದೀಪ್ ಸೇರಿದಂತೆ ಹಲವರು ಈ ಸಿನಿಮಾಗಾಗಿ ಕಾಯುತ್ತಿರುವುದಾಗಿ ಟ್ವೀಟ್ ಮಾಡಿದ್ದಾರೆ. ಈಗಾಗಲೇ ಕನ್ನಡದಲ್ಲಿ ಟ್ರೇಲರ್ ಕೂಡ ರಿಲೀಸ್ ಆಗಿದೆ. ಬುರ್ಝಾ ಖಲಿಫಾದಲ್ಲಿ ಕೆಲ ತಿಂಗಳ ಹಿಂದೆ ಸುದೀಪ್ ನಟನೆಯ ಕನ್ನಡದ ವಿಕ್ರಾಂತ್ ರೋಣಾ ಲೋಗೋ ಅನಾವರಣಗೊಂಡಿತ್ತು. ಈಗ 83 ಸಿನಿಮಾದ ಟ್ರೇಲರ್ ಅನಾವರಣಗೊಂಡು ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.

ಇದನ್ನೂ ಓದಿ : Pushpa Movie Review : ಪುಷ್ಪಕ್ಕೆ ಸಿಗಲಿಲ್ಲ ಫುಲ್ ಮಾರ್ಕ್ಸ್: ಹೀರೋ ಬಿಲ್ಡಪ್ ಗೆ ಸೋತ ಪ್ರೇಕ್ಷಕ

ಇದನ್ನೂ ಓದಿ : Rashmika Mandanna Forbes : ಫೋರ್ಬ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ಕಿರಿಕ್ ಬೆಡಗಿ : ಅಭಿಮಾನಿಗಳ ಪ್ರೀತಿಗೆ ರಶ್ಮಿಕಾ ಧನ್ಯವಾದ

( Ranveer Singh holds on to wife Deepika Padukone as Burj Khalifa lights up with 83 Movie trailer)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular