ಬುಧವಾರ, ಏಪ್ರಿಲ್ 30, 2025
HomeCinemaGeeta Bhatt : ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದ ಗುಂಡಮ್ಮ: ಹಿರೋಯಿನ್ ಸ್ಥಾನಕ್ಕೆ ಭಡ್ತಿ ಪಡೆದ ಗೀತಾ...

Geeta Bhatt : ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದ ಗುಂಡಮ್ಮ: ಹಿರೋಯಿನ್ ಸ್ಥಾನಕ್ಕೆ ಭಡ್ತಿ ಪಡೆದ ಗೀತಾ ಭಟ್

- Advertisement -

Geeta Bhatt : ಒಂದು ಕಾಲದಲ್ಲಿ ತಮ್ಮ ಅತಿಯಾದ ತೂಕದ ಮೂಲಕವೇ ಸುದ್ದಿಯಾಗಿದ್ದ ಕಿರುತೆರೆ ಹಾಗೂ ಹಿರಿತೆರೆ ನಟಿ ಗೀತಾಭಾರತಿ ಭಟ್ ಅಲಿಯಾಸ್ ಬ್ರಹ್ಮಗಂಟು (Bramhagantu Kannada Serial)ಖ್ಯಾತಿಯ ಗುಂಡಮ್ಮ ಗೀತಾ ಈಗ ತಮ್ಮ ದೇಹದ ತೂಕ ಇಳಿಸಿಕೊಳ್ಳುವ ವರ್ಕೌಟ್ ಮೂಲಕವೇ ಗಮನ ಸೆಳೆದಿದ್ದರು. ಈಗ ಇನ್ನೊಂದು ಹೆಜ್ಜೆ ಮುಂದೇ ಹೋಗಿರೋ ಗುಂಡಮ್ಮ ಅಲಿಯಾಸ್ ಗೀತಾ ಸಿನಿಮಾದ ನಾಯಕಿಯಾಗೋ ಮೂಲಕ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ.

ಗೀತಾಭಾರತಿ ಭಟ್ ಎಂದರೇ ಯಾರಿಗೂ ಗೊತ್ತಾಗಲ್ಲ. ಆದರೇ ಬ್ರಹ್ಮಗಂಟು ಖ್ಯಾತಿಯ ಗೀತಾ ಎಂದರೇ ಎಲ್ಲರಿಗೂ ಗೊತ್ತು ಎನ್ನುವಷ್ಟರ ಮಟ್ಟಿಗೆ ಕಿರುತೆರೆಯಲ್ಲಿ ಚಿರಪರಿಚಿತವಾದ ಹೆಸರು ಗೀತಾ ಎಲ್ಲರೂ ತಮ್ಮ ದೇಹದ ತೂಕ ಹೆಚ್ಚಾದರೇ ಕೀಳರಿಮೆಯಿಂದ ಹಿಂದಕ್ಕೆ ಸರಿಯುತ್ತಾರೆ. ಆದರೆ ಗೀತಾ ಮಾತ್ರ ತಮ್ಮ ದೇಹದ ತೂಕವನ್ನೇ ಬಂಡವಾಳ ಮಾಡಿಕೊಂಡು ಸೀರಿಯಲ್, ರಿಯಾಲಿಟಿ ಶೋ ಹಾಗೂ ಸಿನಿಮಾಗಳಲ್ಲೂ ಮಿಂಚಿದರು.

ಇದಾದ ಬಳಿಕ ಗೀತಾ ತಮ್ಮ ದೇಹದ ತೂಕವನ್ನು ಕಳೆದುಕೊಳ್ಳೋ ಜರ್ನಿ ಆರಂಭಿಸಿದರು. ಎಂತವರೂ ನಡುಗುವಂತಹ ಕಠಿಣ ವರ್ಕೌಟ್ ಗಳ ಮೂಲಕ ಗೀತಾ ಬಹುತೇಕ 13 ರಿಂದ 17 ಕೆಜಿ ತೂಕ‌ ಕಳೆದುಕೊಂಡಿದ್ದಾರೆ. ಇದೆಲ್ಲದರ ಬಳಿಕ ಈಗ ಗೀತಾ ಮತ್ತೊಂದು ಸಿಹಿಸುದ್ದಿ ಕೊಟ್ಟಿದ್ದಾರೆ. ಹೌದು ಗೀತಾ ಸೋಲೋ ಹಿರೋಯಿನ್ ಆಗಿ ಭಡ್ತಿ ಪಡೆದಿದ್ದಾರೆ. ವಿಧಾತಾ, ಹೋಂ ಸ್ಟೇಯಂತಹ ಸಿನಿಮಾಗಳನ್ನು ಕನ್ನಡಕ್ಕೆ‌ ಕೊಡುಗೆಯಾಗಿ ನೀಡಿದ ಸುಳ್ಯ ಮೂಲದ ನಿರ್ದೇಶಕ ಸಂತೋಷ್ ಕೊಡಂಕಿರಿ ನಿರ್ದೇಶನದ ಹೊಸ ಸಿನಿಮಾಗೆ ಗೀತಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಹಳ್ಳಿ ಹುಡುಗಿಯೊಬ್ಬಳು ಸುಂದರವಾದ ಹುಡುಗನನ್ನು ಮದುವೆಯಾಗುವುದಕ್ಕಾಗಿ ಅರಸುವುದು, ಬಳಿಕ ಒಂದು ಎನ್ ಆರ್ ಆಯ್ ಸಂಬಂಧ ಆಕೆಗೆ ಸಿಗೋದು ಮತ್ತು ಆ ಸಂಬಂಧದಿಂದಾಗಿ ಅನುಭವಿಸುವ ಏರಿಳಿತಗಳನ್ನು ಒಳಗೊಂಡು ತೆಳು ಹಾಸ್ಯ ದಲ್ಲಿ ಈ ಸಿನಿಮಾ ತೆರೆಗೆ ಬರಲಿದೆಯಂತೆ. ಈ ಸಿನಿಮಾಕ್ಕೆ ನಿರ್ದೇಶಕ ಸಂತೋಷ್ ಪತ್ನಿ ಪಾವನಾ ಸ್ಕ್ಟಿಪ್ಟ್ ಬರೆದಿದ್ದು, ಸ್ಯಾಂಡಲ್ ವುಡ್ ನ ಎವರ್ ಗ್ರೀನ್ ಸುಂದರಿ ಸುಮನ್ ನಗರಕರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದಲ್ಲದೇ ಪದ್ಮಜಾ ರಾವ್ ಸೇರಿದಂತೆ ಹಲವು ಹಿರಿಯರು ಜೊತೆಯಾಗಲಿದ್ದಾರೆ. ಕರಾವಳಿ ಭಾಗದಲ್ಲಿ ಸಿನಿಮಾ ಶೂಟಿಂಗ್ ನಡೆಯಲಿದ್ದು, ಗೀತಾ ಸಿನಿಮಾಗಾಗಿ ಭರ್ಜರಿ ಪೋಟೋ ಶೂಟ್ ಕೂಡ ನಡೆಸಿದ್ದಾರಂತೆ. ಒಟ್ಟಿನಲ್ಲಿ ಗೀತಾ ಕೂಡ ನಾಯಕಿಯಾಗಿ ಪ್ರಮೋಶನ್ ಪಡೆದಿದ್ದಾರೆ.

ಇದನ್ನೂ ಓದಿ : ಮುಹೂರ್ತ ಆಚರಿಸಿಕೊಂಡ ‘Case of ಕೊಂಡಾಣ : ದೇವಿಪ್ರಸಾದ್ ಶೆಟ್ಟಿ ಜೊತೆಗೆ ವಿಜಯ್ ರಾಘವೇಂದ್ರ

ಇದನ್ನೂ ಓದಿ : Puneeth Rajkumar : ತಂದೆಯ ಸಿನಿಮಾವನ್ನು ರಿಕ್ರಿಯೇಟ್​ ಮಾಡಲು ಬಯಸಿದ್ದರಂತೆ ಪುನೀತ್​ ರಾಜ್​ಕುಮಾರ್​​

Bramhagantu Kannada Serial Actress Geeta Bhatt promoted to heroine

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular