ಮಂಗಳವಾರ, ಜೂನ್ 17, 2025
HomeCinemaKerala Photo shoot : ರಸ್ತೆ ಗುಂಡಿ ಮಧ್ಯೆ ನಿಂತ ವಧು : ಕೇರಳ ವಧುವಿನ...

Kerala Photo shoot : ರಸ್ತೆ ಗುಂಡಿ ಮಧ್ಯೆ ನಿಂತ ವಧು : ಕೇರಳ ವಧುವಿನ ಪೋಟೋಶೂಟ್ ವೈರಲ್

- Advertisement -

Kerala Photo shoot : ಫ್ರೀ ವೆಡ್ಡಿಂಗ್ ಶೂಟ್ ಇಂದಿನ ಯುವಜನತೆಯ ಹೊಸ ಟ್ರೆಂಡ್.‌ ಮದುವೆಗೂ ಮುನ್ನ ಸಂಗಾತಿಯ ಜೊತೆ ತಮಗಿಷ್ಟವಾದ ಉಡುಗೆಯಲ್ಲಿ ತಮಗಿಷ್ಟವಾದ ಸ್ಥಳದಲ್ಲಿ ಪೋಟೋ ಶೂಟ್ ಮಾಡಿಸಿಕೊಳ್ಳೋದು ಇತ್ತೀಚಿಗೆ ಕಾಮನ್ ಆಗಿದೆ. ಆದರೆ ಇಲ್ಲೊಂದು ಜೋಡಿ ಮಾತ್ರ ಫ್ರೀ ವೆಡ್ಡಿಂಗ್ ಶೂಟ್ ಹೆಸರಿನಲ್ಲಿ ಸಾಮಾಜಿಕ ಸಮಸ್ಯೆಯೊಂದನ್ನು ಬೆಳಕಿಗೆ ತಂದಿದ್ದು,ರಸ್ತೆ ಗುಂಡಿ ಮಧ್ಯೆ ಪೋಟೋಗೆ ಪೋಸ್ ನೀಡೋ ಮೂಲಕ ಜನರ ಮನಗೆದ್ದಿದೆ.

ಕರ್ನಾಟಕದಲ್ಲಿ ಫ್ರೀ ವೆಡ್ಡಿಂಗ್ ಪೋಟೋಶೂಟ್ ಟ್ರೆಂಡ್ ಆರಂಭವಾಗಿದೆ. ಆದರೆ ಕೇರಳದಷ್ಟು ಗಾಡವಾಗಿ ಇನ್ನೂ ನೆಲೆಯೂರಿಲ್ಲ. ಕೇರಳದಲ್ಲಿ ಹಾಟ್ ಹಾಟ್ ಫ್ರೀ ವೆಡ್ಡಿಂಗ್ ಶೂಟ್ ನಿಂದ ಆರಂಭಿಸಿ ಎಲ್ಲ ರೀತಿಯ ಪೋಟೋಶೂಟ್ ಗಳು ಸಖತ್ ಫೇಮಸ್. ಈಗ ಕೇರಳದ ವಧುವೊಬ್ಬರು ತಮ್ಮ ಮದುವೆಗೂ ಮುನ್ನ ನಡೆಸಿದ ಫ್ರೀ ವೆಡ್ಡಿಂಗ್ ಪೋಟೋಶೂಟ್ ನಿಂದಾಗಿ ಸದ್ದು ಮಾಡಿದ್ದಾರೆ. ಬಂಗಾರದ ಆಭರಣಗಳು, ರೇಷ್ಮೆ ಸೀರೆ ಉಟ್ಟ ವಧು ಕೇರಳದ ಗುಂಡಿ ತುಂಬಿದ ರಸ್ತೆಯೊಂದರಲ್ಲಿ ನಾಜೂಕಾಗಿ ನಡೆಯುತ್ತಿರುವ ರೀತಿ ಪೋಟೋಗೆ ಪೋಸ್ ನೀಡಿದ್ದಾರೆ.

ಇದನ್ನೂ ಓದಿ : ಎಲೆಯಲ್ಲೇ ಮಾನಮುಚ್ಚಿಕೊಂಡ ಜೋಡಿ….! ಇದು ನೀವೆಂದೂ ನೋಡಿರದ ಪೋಟೋಶೂಟ್…!!

ಕೇರಳದಲ್ಲೂ ಈ ಭಾರಿ ಅತ್ಯಂತ ಹೆಚ್ಚು ಮಳೆ ಸುರಿದಿದ್ದು, ಪರಿಣಾಮವಾಗಿ ಸಾಮಾನ್ಯ ಸ್ಥಿತಿಯಲ್ಲಿದ್ದ ರಸ್ತೆಗಳು ಕಳಪೆ ಕಾಮಗಾರಿಯಿಂದಾಗಿ ಬಣ್ಣ ಕಳೆದುಕೊಂಡು ಹೊಂಡ-ಗುಂಡಿಮಯವಾಗಿ ವಾಹನ ಸವಾರರ ಪ್ರಾಣಹಿಂಡುತ್ತಿದೆ. ಇದನ್ನೇ ಗುರಿಯಾಗಿಸಿಕೊಂಡು ಈ ನವಜೋಡಿ ಪೋಟೋ ಶೂಟ್ ಮಾಡಿಸಿದೆ. ಆದರೆ ಹೀಗೆ ರಸ್ತೆ ಗುಂಡಿ ಮಧ್ಯೆ ಪೋಸ್ ನೀಡಿದ ವಧು ಯಾರು ಎಂಬುದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಆದರೆ ಪೋಟೋಗ್ರಾಫರ್ ಮಾತ್ರ ಸುಂದರವಾದ ವಧುವಿನ ಜೊತೆ ಬಲಿ ಕಾಯುತ್ತಿರೋ ಗುಂಡಿಗಳ ಪೋಟೋವನ್ನು ಅಷ್ಟೇ ಸಮರ್ಥವಾಗಿ ತೆಗೆದುಕೊಟ್ಟಿದ್ದಾರೆ.

.ಅರೋ ವೆಡ್ಡಿಂಗ್ ಕಂಪನಿ ತನ್ನ ಟ್ವೀಟರ್ ಅಕೌಂಟ್ ನಲ್ಲಿ ಈ ವಿಡಿಯೋವನ್ನು ಸಪ್ಟೆಂಬರ್ 11 ರಂದು ಹಂಚಿಕೊಂಡಿದೆ. ಈ ವಿಡಿಯೋ ಗೆ ಇದುವರೆಗೂ ಮೂರು ಲಕ್ಷ ಲೈಕ್ಸ್ ಬಂದಿದ್ದು, 4.3 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಇನ್ನು ವಧುವಿನ ಈ ಪೋಟೋಶೂಟ್ ಸಾಕಷ್ಟು ಕಮೆಂಟ್ ಗಳು ಹರಿದು ಬಂದಿದ್ದು ಹಲವರು ರಸ್ತೆಯಲ್ಲ ಕೊಳ ಇದು‌. ಕೊಳದಲ್ಲಿ ವಧು ಎಂದು ವ್ಯಂಗ್ಯವಾಡಿದ್ದಾರೆ. ಈ ಮಧ್ಯೆ ರಸ್ತೆ ಗುಂಡಿಗೆ ಇತ್ತೀಚಿಗೆ ಒಬ್ಬರು ಬಿದ್ದು ಸಾವನ್ನಪ್ಪಿದ್ದು ಇದಾದ ಬಳಿಕ ಕೇರಳ ಹೈಕೋರ್ಟ್ ರಸ್ತೆ ಗುಂಡಿಗಳನ್ನು ರಕ್ಷಣ ನಿರ್ವಹಣೆ ಮಾಡುವಂತೆ ಆದೇಶ ನೀಡಿದೆ.

ಇದನ್ನೂ ಓದಿ :‌ ಅರ್ಧಬಿಚ್ಚಿದ ಸೀರೆ, ಜೊತೆಗೊಂದು ಝೀನ್ಸ್ ಚಡ್ಡಿ….! ವಿವಾದಕ್ಕೆ ಗುರಿಯಾಯ್ತು ಮತ್ತೊಂದು ಪೋಟೋಶೂಟ್…!!

Bride standing in the middle of pothole Photo shoot of Kerala bride goes viral

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular