ಸೋಮವಾರ, ಜೂನ್ 16, 2025
HomeCinemaShilpa Shetty Kundra Workout : ಕಾಲು ಮುರಿದ್ರೂ ಕೈಯಲ್ಲೇ ವರ್ಕೌಟ್: ಕರಾವಳಿ ಬೆಡಗಿಯ ಹೊಸ...

Shilpa Shetty Kundra Workout : ಕಾಲು ಮುರಿದ್ರೂ ಕೈಯಲ್ಲೇ ವರ್ಕೌಟ್: ಕರಾವಳಿ ಬೆಡಗಿಯ ಹೊಸ video viral

- Advertisement -

Shilpa Shetty Kundra Workout : ಸಾಮಾನ್ಯವಾಗಿ ಸೆಲೆಬ್ರೆಟಿಗಳು ವರ್ಕೌಟ್ ಮತ್ತು ಯೋಗಾಭ್ಯಾಸ ಹಾಗೂ ಜಿಮ್ ಗಳಲ್ಲಿ ಬೆವರಿಳಿಸೋದು ಕಾಮನ್. ಅದರಲ್ಲೂ ಬಾಲಿವುಡ್ ಬೆಡಗಿ ಶಿಲ್ಪಾ ಶೆಟ್ಟಿ ನಲ್ವತ್ತರ ಹರೆಯದಲ್ಲೂ 16 ರ ಬೆಡಗಿಯಂತೆ ತಮ್ಮ ಸೌಂದರ್ಯದಿಂದ ಅಭಿಮಾನಿಗಳ ಮನಗೆದ್ದಿದ್ದಾರೆ. ಯೋಗ, ವರ್ಕೌಟ್ ನ ಟಿಪ್ಸ್ ಜೊತೆ ಯುವಜನತೆಯ ಮನಗೆದ್ದ ಶಿಲ್ಪಾ ಶೆಟ್ಟಿ ಕಾಲು ಮುರಿದುಕೊಂಡರೂ ವರ್ಕೌಟ್ ಬಿಟ್ಟಿಲ್ಲ. ಈ ವಿಡಿಯೋ ಈಗ ಸಖತ್ ವೈರಲ್ (Shilpa Shetty video viral) ಆಗಿದೆ.

ಇತ್ತೀಚಿಗೆ ಸಿನಿಮಾ ಶೂಟಿಂಗ್ ವೊಂದರ ವೇಳೆ ನಟಿ ಶಿಲ್ಪಾ ಶೆಟ್ಟಿ ಕಾಲು ಮುರಿದುಕೊಂಡಿದ್ದಾರೆ. ಕನಿಷ್ಟ ಆರು ವಾರಗಳ ಕಾಲ ಕಾಲನ್ನು ಅಲುಗಾಡಿಸದೇ ಇಡುವಂತೆ ಶಿಲ್ಪಾ ಶೆಟ್ಟಿಗೆ ವೈದ್ಯರು ಸೂಚಿಸಿದ್ದಾರಂತೆ. ಹೀಗಾಗಿ ಸದ್ಯ ಶಿಲ್ಪಾ ಶೆಟ್ಟಿ ಕಾಲನ್ನು ಅಲುಗಾಡಿಸದಂತೆ ಇಟ್ಟುಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಆದರೆ ಕಾಲು ಏಟು ಮಾಡಿಕೊಂಡಿದ್ದರೂ ನಟಿ ಶಿಲ್ಪಾ ಶೆಟ್ಟಿ ತಮ್ಮ ಪ್ರೀತಿಯ ವರ್ಕೌಟ್ ನ್ನು ಮಾತ್ರ ಬಿಟ್ಟಿಲ್ಲ.

ವೀಲ್ಹ್ ಚೇರ್ ಮೇಲೆ ಕೂತಿದ್ದರೂ ಶಿಲ್ಪಾ ಶೆಟ್ಟಿ ಫಿಟನೆಸ್ ಮಂತ್ರ ಬಿಟ್ಟಿಲ್ಲ. ವೀಲ್ಹ್ ಚೇರ್ ಮೇಲೆ ಕೂತ ಶಿಲ್ಪಾ ಶೆಟ್ಟಿ ವೇಟ್ ಡಂಬೆಲ್ಸ್ ಜೊತೆ ಎಕ್ಸಸೈಸ್ ಮಾಡಿದ್ದಾರೆ. ಇದಕ್ಕೆ ಟಿಪ್ಸ್ ಕೂಡ ನೀಡಿರೋ ಶಿಲ್ಪಾ ಶೆಟ್ಟಿ, ಸದ್ಯ ನಾನು ಕಾಲನ್ನಂತೂ ಅಲುಗಾಡಿಸುವಂತಿಲ್ಲ. ಆದರೆ ಅದಕ್ಕಾಗಿ ವರ್ಕೌಟ್ ಬಿಡೋದಕ್ಕಂತೂ ಸಾಧ್ಯವಿಲ್ಲ. ಅದಕ್ಕಾಗಿ ನಾನು ದೇಹದ ಮೇಲ್ಭಾಗದ ವ್ಯಾಯಾಮಗಳನ್ನು ಮಾಡುತ್ತಿದ್ದೇನೆ ಎಂದಿದ್ದಾರೆ.

ಅಷ್ಟೇ ಅಲ್ಲ ವರ್ಕೌಟ್ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.ಶಿಲ್ಪಾ ಶೆಟ್ಟಿ ಹಂಚಿಕೊಂಡ ಈ ವರ್ಕೌಟ್ ವಿಡಿಯೋಗೆ ಸಖತ್ ಲೈಕ್ಸ್ ಹರಿದುಬಂದಿದ್ದು, ಅಭಿಮಾನಿಗಳು ಕಮೆಂಟ್ ಕೂಡ ಮಾಡಿ ಶಿಲ್ಪಾ ಸಾಹಸವನ್ನು ಸಪೋರ್ಟ್ ಮಾಡಿದ್ದಾರೆ. ಬಾಲಿವುಡ್ ಸಿನಿಮಾಗಳ ಜೊತೆ ರಿಯಾಲಿಟಿ ಶೋಗಳಲ್ಲೂ ಮಿಂಚುತ್ತಿರುವ ಶಿಲ್ಪಾ ಶೆಟ್ಟಿ ಪ್ರತಿನಿತ್ಯ ಯೋಗ ಮತ್ತು ವರ್ಕೌಟ್ ವಿಡಿಯೋ ಶೇರ್ ಮಾಡುತ್ತಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರೋ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ನೀಲಿಚಿತ್ರ ವಿವಾದದಲ್ಲಿ ಜೈಲು ಸೇರಿದಾಗಲೂ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿಯೇ ಇದ್ದರು. ಕಾಲು ಪೆಟ್ಟಾಗಿದ್ದರೂ ಕೇವಲ ಯೋಗ, ವ್ಯಾಯಾಮ ಮಾತ್ರವಲ್ಲ ವೀಲ್ಹ್ ಚೇರ್ ಮೇಲೇ ಕೂತು ರಿಯಾಲಿಟಿ ಶೋದಲ್ಲೂ ಪಾಲ್ಗೊಂಡು ತಮ್ಮ ಜೀವನೋತ್ಸಾಹ ತೋರಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದರು.

ಇದನ್ನೂ ಓದಿ : Miss England :ಮುಖಕ್ಕೆ ಒಂದಿಂಚೂ ಮೇಕಪ್​ ಧರಿಸದೇ ಮಿಸ್​ ಇಂಗ್ಲೆಂಡ್​ ಸ್ಫರ್ಧೆಯಲ್ಲಿ ಫೈನಲ್​ ಪ್ರವೇಶಿಸಿ ಇತಿಹಾಸ ಬರೆದಿದ್ದಾರೆ ಈ ಮಾಡೆಲ್​

ಇದನ್ನೂ ಓದಿ : Vijay Deverakonda : ವಿರಾಟ್​ ಕೊಹ್ಲಿ ಜೀವನಾಧಾರಿತ ಸಿನಿಮಾದಲ್ಲಿ ನಟಿಸುವ ಆಸೆ ವ್ಯಕ್ತಪಡಿಸಿದ ವಿಜಯ್​ ದೇವರಕೊಂಡ

broken leg still workout with hands: Shilpa Shetty Kundra Workout new video viral

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular