ಮಂಗಳವಾರ, ಜೂನ್ 17, 2025
HomeCinemaನಟ ಶಿವರಾಜ್‌ಕುಮಾರ್‌ ಅಭಿನಯದ "ವೇದ" ಸಿನಿಮಾ ಶೀಘ್ರದಲ್ಲೇ ಓಟಿಟಿಗೆ ಲಗ್ಗೆ ಇಡುತ್ತಾ ?

ನಟ ಶಿವರಾಜ್‌ಕುಮಾರ್‌ ಅಭಿನಯದ “ವೇದ” ಸಿನಿಮಾ ಶೀಘ್ರದಲ್ಲೇ ಓಟಿಟಿಗೆ ಲಗ್ಗೆ ಇಡುತ್ತಾ ?

- Advertisement -

ಸ್ಯಾಂಡಲ್‌ವುಡ್ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ (Century Star Shivarajkumar) ಈಗಲೂ ಸಹ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿ ಇದ್ದಾರೆ. ಯುವ ನಟರೇ ಈ ರೀತಿ ಎನರ್ಜಿ ಇಂದ ಇರಲು ನಮ್ಮಿಂದ ಆಗುವುದಿಲ್ಲವಲ್ಲ ಎಂದುಕೊಳ್ಳುವಂತೆ ಮಾಡುತ್ತಿರುವ ನಟ ಎಂದರೆ ಅದು ಶಿವಣ್ಣ. ಹಳ್ಳಿಯ ಟೆಂಟ್‌ಗಳಲ್ಲಿ ಗಾಂಧಿ ಕ್ಲಾಸ್ ಟಿಕೆಟ್ ಲಭ್ಯವಾಗುತ್ತಿದ್ದ ನಮ್ಮ ಹಿರಿಯರ ಕಾಲದಿಂದ ಓಟಿಟಿ ಯುಗದವರೆಗೂ ಬಾಕ್ಸ್ ಆಫೀಸ್ ಅನ್ನು ಆಳುತ್ತಾ ಬಂದಿರುವ ಶಿವ ರಾಜ್‌ಕುಮಾರ್ ಇಂದಿಗೂ ಗಲ್ಲಾಪೆಟ್ಟಿಗೆ ಲೂಟಿ ಮಾಡುವಂತಹ ಸಿನಿಮಾಗಳನ್ನು ನೀಡುತ್ತಿದ್ದಾರೆ. ಕಳೆದ ವರ್ಷದ ಡಿಸೆಂಬರ್ ತಿಂಗಳ ಅಂತಿಮ ವಾರದಲ್ಲಿ ಬಿಡುಗಡೆಗೊಂಡ ವೇದ ಸಿನಿಮಾದ ಮೂಲಕ ಸಕ್ಸಸ್ ಕಂಡು ಗೆಲುವಿನ ಹಾದಿಗೆ ಮರಳಿದ್ದ ಶಿವ ರಾಜ್‌ಕುಮಾರ್ ಸದ್ಯ ಘೋಸ್ಟ್ ಎಂಬ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ಬಳಿಕ ಯೋಗರಾಜ್ ಭಟ್ ನಿರ್ದೇಶನದ ಕರಟಕ ದಮನಕ ಹಾಗೂ ಅರ್ಜುನ್ ಜನ್ಯಾ ನಿರ್ದೇಶನದ 45 ಎಂಬ ಸಿನಿಮಾಗಳನ್ನು ಶಿವ ರಾಜ್‌ಕುಮಾರ್ ಒಪ್ಪಿಕೊಂಡಿದ್ದಾರೆ.

ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಶಿವರಾಜ್‌ಕುಮಾರ್ ಅಭಿನಯದ ಕೊನೆಯ ಸಿನಿಮಾವಾದ ವೇದ ಸಿನಿಮಾವನ್ನು ಇದೀಗ ತೆಲುಗು ಭಾಷೆಗೆ ಡಬ್ ಮಾಡಿ ಬಿಡುಗಡೆ ಮಾಡಲು ನಿರ್ಧರಿಸಿದೆ ಸಿನಿತಂಡ. ಹೌದು, ವೇದ ಸಿನಿಮಾವನ್ನು ಶಿವ ವೇದ ಎಂಬ ಶೀರ್ಷಿಕೆ ಅಡಿಯಲ್ಲಿ ತೆಲುಗಿಗೆ ಡಬ್ ಮಾಡಿ ಬಿಡುಗಡೆ ಮಾಡಲಾಗುತ್ತಿದೆ. ಅದ್ದೂರಿಯಾಗಿ ಪ್ರಿ ರಿಲೀಸ್ ಇವೆಂಟ್ ಮಾಡಿ ಸಿನಿಮಂದಿರಗಳಲ್ಲಿ ಈ ಸಿನಿಮಾವನ್ನು ಬಿಡುಗಡೆ ಮಾಡಲು ಸಿನಿತಂಡವೇನೋ ಮುಂದಾಗಿದ್ದು, ಈ ಸಿನಿಮಾದ ಓಟಿಟಿ ರಿಲೀಸ್ ಘೋಷಣೆ ಸಿನಿ ರಸಿಕರನ್ನು ಗೊಂದಲಕ್ಕೆ ತಳ್ಳಿದೆ. ಅಷ್ಟಕ್ಕೂ ವೇದ ತೆಲುಗು ಬಿಡುಗಡೆಯಿಂದ ಹಾಗೂ ಓಟಿಟಿ ಬಿಡುಗಡೆ ಘೋಷಣೆಯಿಂದ ಸಿನಿ ರಸಿಕರಲ್ಲಿ ಉಂಟಾಗಿರುವ ಗೊಂದಲವೇನು ಎನ್ನುವುದನ್ನು ತಿಳಿಸಲಾಗಿದೆ.

Century Star Shivarajkumar 2

ಸದ್ಯ ವೇದ ಸಿನಿಮಾದ ತೆಲುಗು ವರ್ಷನ್ ಶಿವ ವೇದ ಸಿನಿಮಾ ಇದೇ ಗುರುವಾರ ( ಫೆಬ್ರವರಿ 9 ) ಬಿಡುಗಡೆಯಾಗಲಿದೆ ಎಂದು ಸಿನಿತಂಡ ಘೋಷಣೆ ಮಾಡಿದ್ದು, ಸಿನಿಮಾದ ಬಿಡುಗಡೆಗೆ ಸಾಲು ಸಾಲು ಪೋಸ್ಟ್‌ಗಳನ್ನು ಮಾಡಿ ಭರ್ಜರಿ ತಯಾರಿ ನಡೆಸಿ ಪ್ರಮೋಟ್ ಮಾಡುತ್ತಿದೆ. ಆದರೆ ವೇದ ಸಿನಿಮಾ ಓಟಿಟಿಯಲ್ಲಿ ಇದೇ ಶುಕ್ರವಾರ ( ಫೆಬ್ರವರಿ 10 ) ಜೀ 5 ಓಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂಬುದು ಸಿನಿ ರಸಿಕರನ್ನು ಗೊಂದಲಕ್ಕೆ ದೂಡಿದೆ.ಹೀಗೆ ವೇದ ತೆಲುಗು ವರ್ಷನ್ ಬಿಡುಗಡೆಯಾದ ನಾಳೆಯೇ ಓಟಿಟಿಯಲ್ಲಿ ಬಿಡುಗಡೆಯಾಗಲಿರುವ ಸುದ್ದಿ ಗೊಂದಲ ಮೂಡಿಸಲು ಕಾರಣ ಜೀ 5 ಹಂಚಿಕೊಂಡಿರುವ ವಿಡಿಯೊ. ಈ ವಿಡಿಯೊದಲ್ಲಿ ವೇದ ಫೆಬ್ರವರಿ 10ಕ್ಕೆ ಓಟಿಟಿಯಲ್ಲಿ ಬಿಡುಗಡೆಯಾಗಲಿದೆ ಎಂದು ತಿಳಿಸಲಾಗಿದೆ.

Century Star Shivarajkumar 3

ಓಟಿಟಿಯಲ್ಲಿ ಕನ್ನಡ, ಹಿಂದಿ, ಮಲಯಾಳಂ, ತಮಿಳು ಹಾಗೂ ತೆಲುಗಿನಲ್ಲೂ ಸಿನಿಮಾ ಲಭ್ಯವಿರಲಿದೆ ಎಂದು ತಿಳಿಸಿದೆ. ಹೀಗೆ ತೆಲುಗಿನಲ್ಲಿಯೂ ಓಟಿಟಿ ಬಿಡುಗಡೆ ಮಾಡುವುದಾದರೆ ವೇದ ಸಿನಿಮಾದ ತೆಲುಗು ವರ್ಷನ್ ಅನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಸಿನಿಮಂದಿರದಲ್ಲಿ ಬಿಡುಗಡೆ ಮಾಡುವ ಅವಶ್ಯಕತೆ ಏನಿತ್ತು, ಒಂದು ದಿನದ ಪ್ರದರ್ಶನಕ್ಕಾಗಿ ಎಷ್ಟೆಲ್ಲಾ ಯಾಕೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ವೇದ ಸಿನಿಮಾದ ತೆಲುಗು ವರ್ಷನ್ ಶಿವ ವೇದ ಬಿಡುಗಡೆಗೆ ದೊಡ್ಡದಾಗಿ ಪ್ರಿ ರಿಲೀಸ್ ಇವೆಂಟ್ ಅನ್ನೂ ಸಹ ಆಯೋಜಿಸಲಾಗಿದೆ.

ಇದನ್ನೂ ಓದಿ : Meghana Raj : ಶೂಟಿಂಗ್ , ಡಬ್ಬಿಂಗ್ ಮಧ್ಯೆ ಮೇಘನಾ ರಾಜ್ ಔಟಿಂಗ್: ವೈರಲ್ ಆಯ್ತು ಕುಟ್ಟಿಮಾ ಪೋಸ್ಟ್

ಇದನ್ನೂ ಓದಿ : 12 ಕಿ.ಮೀ ರಸ್ತೆಗೆ ನಟ ಪುನೀತ್‌ ಹೆಸರು : ಅದ್ಧೂರಿ ಕಾರ್ಯಕ್ರಮ ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್

ಇದನ್ನೂ ಓದಿ : ಟೈಟಾನಿಕ್ ಸಿನಿಮಾ : 25 ವರ್ಷಗಳ ಬಳಿಕ ನಾಯಕನ ಸಾವಿನ ಗುಟ್ಟು ಬಿಚ್ಚಿಟ್ಟ ನಿರ್ದೇಶಕ ಜೇಮ್ಸ್ ಕ್ಯಾಮರನ್

ಇಂದು ( ಫೆಬ್ರವರಿ 7 ) ಸಂಜೆ ಆರು ಗಂಟೆಗೆ ಹೈದರಾಬಾದ್‌ನ ದಾಸ್ಪಲ್ಲದಲ್ಲಿ ಶಿವ ವೇದ ಸಿನಿ,ಆದ ಪ್ರಿ ರಿಲೀಸ್ ಕಾರ್ಯಕ್ರಮ ಜರುಗಲಿದ್ದು, ಈ ಕಾರ್ಯಕ್ರಮಕ್ಕೆ ನಂದಮೂರಿ ಬಾಲಕೃಷ್ಣ ಮುಖ್ಯ ಅತಿಥಿಯಾಗಿದ್ದಾರೆ. ಇನ್ನು ಇದನ್ನೆಲ್ಲಾ ಗಮನಿಸಿದ ಸಿನಿ ರಸಿಕರು ವೇದ ಓಟಿಟಿ ಬಿಡುಗಡೆಯನ್ನು ಸ್ವಲ್ಪ ದಿನಗಳ ಕಾಲ ಮುಂದೂಡಿ ಒಂದು ದಿನದ ಅಂತರದಲ್ಲಿ ಈ ರೀತಿ ಬಿಡುಗಡೆ ಮಾಡಿದರೆ ಸಿನಿಮಂದಿರದಲ್ಲಿ ಸಿನಿಮಾವನ್ನು ಯಾರು ನೋಡ್ತಾರೆ ಎಂದು ಬೇಸರ ಹೊರಹಾಕಿದ್ದಾರೆ.

Century Star Shivarajkumar starrer “Veda” soon to release on OTT?

RELATED ARTICLES

Most Popular