ಮಂಗಳವಾರ, ಏಪ್ರಿಲ್ 29, 2025
HomeCinemaಚೈತ್ರಾ ಹಳ್ಳಿಕೇರಿ 25 ಕೋಟಿ ಪರಿಹಾರಕ್ಕಾಗಿ ಸುಳ್ಳು ಆರೋಪ : ನಟಿ ಪತಿ ಬಾಲಾಜಿ ಪ್ರತ್ಯಾರೋಪ

ಚೈತ್ರಾ ಹಳ್ಳಿಕೇರಿ 25 ಕೋಟಿ ಪರಿಹಾರಕ್ಕಾಗಿ ಸುಳ್ಳು ಆರೋಪ : ನಟಿ ಪತಿ ಬಾಲಾಜಿ ಪ್ರತ್ಯಾರೋಪ

- Advertisement -

ಬೆಂಗಳೂರು : ಪತಿಯಿಂದ ಹಲ್ಲೆ, ದೌರ್ಜನ್ಯ ಹಾಗೂ ವಂಚನೆ ಆರೋಪ ಮಾಡಿದ್ದ ಸ್ಯಾಂಡಲ್ ವುಡ್ ನಟಿ ಚೈತ್ರಾ ಹಳ್ಳಿಕೇರಿ (Chaitra Hallikeri ) ಆರೋಪಗಳಿಗೆ ನಟಿಮಣಿಯ ಪತಿ ಬಾಲಾಜಿ ಪೋತರಾಜ್ (Chaitra Hallikeri Husband Balaji) ತಿರುಗೇಟು ನೀಡಿದ್ದು, ಚೈತ್ರಾ ಇದನ್ನೆಲ್ಲ ಹಣಕ್ಕಾಗಿ ಮಾಡ್ತಿದ್ದಾರೆ ಹಾಗೂ ಅವರು ಹೀಗೆಲ್ಲ ಆಡೋದಿಕ್ಕೆ ಕಾರಣ ಯಾರೋ ಅವರನ್ನು ಯಾರೋ ಪ್ರವೋಕ್ ಮಾಡ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ನಿನ್ನೆಯಷ್ಟೇ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ನಟಿ ಚೈತ್ರಾ ಹಳ್ಳಿಕೇರಿ (Chaitra Hallikeri ) , ತಮ್ಮ ಪತಿ ಬಾಲಾಜಿ ಪೋತರಾಜ್ (Chaitra Hallikeri Husband Balaji) ಹಾಗೂ ಮಾವ ಎಂ.ಕೆ.ಪೋತರಾಜ್ ನನ್ನ ಸಹಿಯನ್ನು ಪೋರ್ಜರಿ ಮಾಡಿದ್ದಾರೆ. ಅಲ್ಲದೇ ಮದುವೆ ಸಂದರ್ಭದಲ್ಲಿ ನೀಡಲಾದ ಒಡವೆ ಸೇರಿದಂತೆ ಎಲ್ಲ ಚಿನ್ನಾಭರಣವನ್ನು ಇಟ್ಟು ಮಾವ ಹಾಗೂ ಪತಿ ನನ್ನ ಹೆಸರಿನಲ್ಲಿ ಬ್ಯಾಂಕ್ ನಲ್ಲಿ ಸಾಲ ಪಡೆದಿದ್ದಾರೆ. ನನಗೆ ಪತಿ ಹಾಗೂ ಅವರ ಕುಟುಂಬದವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ಆರೋಪಗಳಿಗೆ ಸ್ಪಷ್ಟನೆ ನೀಡಿರೋ ನಟಿ ಚೈತ್ರಾ ಪತಿ ಬಾಲಾಜಿ, ನಿನ್ನೆ ಚೈತ್ರ ಅವ್ರು ನನ್ನ ಮೇಲೆ ಆರೋಪ ಮಾಡಿದ್ದೆಲ್ಲವೂ ಸುಳ್ಳುನನಗೆ ಸ್ವತಂತ್ರವಾಗಿ ಇರಲು ಬಿಡಿ ಅಂದಿದ್ರು. ನಂತರ ಆಯ್ತು ಅಂತ ನಾನು ಸುಮ್ಮನಾಗಿದ್ದೆ.ಐದು ಕೋಟಿ ಮನೆ,ಕಾರು ಒಂದು ಕೋಟಿ ಹಣ ಕೊಟ್ಟಿದ್ದೇ‌ನೆ. ಆದರೂ ಅವರ ಧನದಾಹ ಮುಗಿದಿಲ್ಲ.

ನಮ್ಮ ನಡುವೆ ಹೊಂದಾಣಿಕೆ ಇಲ್ಲದ ಕಾರಣಕ್ಕೆ ದೂರಾಗಲೂ ಚಿಂತಿಸಿದ್ವಿ. ಆಗ ಅತಿ‌ ಹೆಚ್ಚು ಹಣ ಡಿಮ್ಯಾಂಡ್ ಮಾಡಿದ್ರು. ಆಗ ನಾನೆ ಡೈವರ್ಸ್ ಕೇಸ್ ಹಾಕಿದೆ. 25 ಕೋಟಿ ಅಂತ ಚೈತ್ರ ಡಿಮ್ಯಾಂಡ್ ಮಾಡಿದ್ರು. ಪ್ರತಿ ಭಾರಿ ಡಿವೋರ್ಸ್ ಮಾತುಕತೆ ನಡೆದಾಗಲೂ ಚೈತ್ರಾ ಕೇಳುವ ಹಣದ ಪ್ರಮಾಣ ಹೆಚ್ಚುತ್ತಲೇ‌ಇದೆ. ಇದನ್ನು ಚೈತ್ರಾ ಮಾಡುತ್ತಿಲ್ಲ. ಅವರನ್ನು ಯಾರೋ ದುರ್ಬಳಕೆ ಮಾಡಿಕೊಂಡು ಈ ರೀತಿ ಮಾಡಲು ಪ್ರೇರೇಪಿಸುತ್ತಿದ್ದಾರೆ‌.

ಮದುವೆಯಾದ ಆರಂಭದಲ್ಲಿ ಚೆನ್ನಾಗಿದ್ದರು. ಬಳಿಕ ನನಗೆ ಐಡೆಂಟಿಟಿ ಬೇಕು ಎಂಬುದು ಸೇರಿದಂತೆ ಹಲವು ಕಿರಿ ಕಿರಿ ಆರಂಭವಾಯಿತು. ನಾನು ಮೊದ ಮೊದಲು ಎಲ್ಲವನ್ನು ಸಹಿಸಿಕೊಂಡೆ ಆದರೆ ಕೊನೆಗೆ ಅವರು ಸ್ವತಂತ್ರವಾಗಿ ಇರಲು ಬಯಸಿದ್ದರಿಂದ ದೂರ ಉಳಿದಿದ್ದೇನೆ. ಇಬ್ಬರು ಮಕ್ಕಳಿದ್ದಾರೆ. ಇಬ್ಬರನ್ನು ನಾನು ಒಳ್ಳೆಯ ಸ್ಕೂಲ್ ನಲ್ಲಿ ಓದಿಸುತ್ತಿದ್ದೇನೆ. ಮಕ್ಕಳನ್ನು‌ಚೈತ್ರಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ನನ್ನ ತಂದೆ ಮೈಸೂರಿನಲ್ಲಿ ಗಣ್ಯ ವ್ಯಕ್ತಿ. ಸಾಕಷ್ಟು ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. 80 ವರ್ಷದ ಅಂತಹ ದೊಡ್ಡ ವ್ಯಕ್ತಿಯ ಬಗ್ಗೆಯೂ ಚೈತ್ರಾ ಕೆಟ್ಟದಾಗಿ ಮಾತನಾಡಿದ್ದನ್ನು ಸಹಿಸಲಾಗಲಿಲ್ಲ. ಹೀಗಾಗಿ ನಾನು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದೇನೆ ಎಂದರು. ಒಟ್ಟಿನಲ್ಲಿ ಸ್ಯಾಂಡಲ್ ವುಡ್ ನಟಿಮಣಿ ಚೈತ್ರಾ ಹಳ್ಳಿಕೇರಿ ದಾಂಪತ್ಯ ವಿವಾದ ಈಗ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದ್ದು, ಐಷಾರಾಮಿ ಬದುಕಿನ ಆಸೆಗೆ ಬಿದ್ದ ಚೈತ್ರಾ ಸಂಸಾರದ ವಿಚಾರವನ್ನು ಬೀದಿ ರಂಪ ಮಾಡ್ತಿದ್ದಾರೆ ಎಂದು ಅವರ ಪತಿ ಆರೋಪಿಸಿದ್ದಾರೆ.

ಇದನ್ನೂ ಓದಿ : Samantha and Vijay : ಸಾಹಸ ಚಿತ್ರೀಕರಣದ ವೇಳೆ ಗಾಯಗೊಂಡ ಸಮಂತಾ ಮತ್ತು ವಿಜಯ ದೇವರಕೊಂಡ

ಇದನ್ನೂ ಓದಿ : Chaitra Hallikeri : ಗುನ್ನ ನಟಿಯ ಬಾಳಲ್ಲಿ ಬಿರುಗಾಳಿ : ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋದ ನಟಿ ಚೈತ್ರಾ ಹಳ್ಳಿಕೇರಿ

Chaitra Hallikeri Husband Balaji Press Meet

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular