ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿ ಹರಿಕೃಷ್ಣ (Challenging Star Darshan – V Harikrishna) ಕಾಂಬಿನೇಶನ್‌ನ ಎರಡನೇ ಸಿನಿಮಾ ಕ್ರಾಂತಿ ಬಿಡುಗಡೆಗೆ ಕ್ಷಣಗಣನೆ ಆರಂಭಗೊಂಡಿದೆ. ಸುಮಾರು 22 ತಿಂಗಳುಗಳ ನಂತರ ಬರುತ್ತಿರುವ ತಮ್ಮ ನೆಚ್ಚಿನ ನಟನ ಸಿನಿಮಾವನ್ನು ಬೆಳ್ಳಿ ತೆರೆ ಮೇಲೆ ವೀಕ್ಷಿಸಲು ದರ್ಶನ್ ಅಭಿಮಾನಿಗಳು ಕಾತರರಾಗಿದ್ದಾರೆ. ಇನ್ನು ಸಿನಿಮಾದ ಬುಕಿಂಗ್ ಮೂರು ನಾಲ್ಕು ದಿನಗಳ ಹಿಂದೆಯೇ ಆರಂಭಗೊಂಡಿದ್ದು, ಟಿಕೆಟ್ ಖರೀದಿಗಾಗಿ ಅಭಿಮಾನಿಗಳು ಮುಗಿಬಿದ್ದಿದ್ದಾರೆ.
ಇನ್ನು ಕ್ರಾಂತಿ ಸಿನಿತಂಡಕ್ಕೆ ಹಿಂದಿನಿಂದಲೂ ಒಂದಲ್ಲ ಒಂದು ತೊಡಕುಗಳು ಹಾಗೂ ವಿರೋಧಗಳು ಎದುರಾಗುತ್ತಲೇ ಇದ್ದು, ಸಿನಿಮಾದ ವಿರುದ್ಧ ಹಲವರು ಪಿತೂರಿ ನಡೆಸುತ್ತಿದ್ದಾರೆ ಎಂದು ಸಿನಿತಂಡದ ಸದಸ್ಯರು ಕೆಲ ಸಂದರ್ಶನಗಳಲ್ಲಿಯೂ ಮಾತನಾಡಿದ್ದಾರೆ. ಹೀಗೆ ಈಗಾಗಲೇ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವ ಕ್ರಾಂತಿ ಸಿನಿಮಾಕ್ಕೆ ಬಿಡುಗಡೆಯಾದ ನಂತರ ಪೈರಸಿ ಕಾಟ ತಪ್ಪಿದ್ದಲ್ಲ.
ಈ ಒಂದು ಸಿನಿಮಾ ಮಾತ್ರವಲ್ಲದೇ ಇತ್ತೀಚೆಗೆ ಬಿಡುಗಡೆಗೊಳ್ಳುತ್ತಿರುವ ಬಹುತೇಕ ಎಲ್ಲಾ ಸಿನಿಮಾಗಳೂ ಸಹ ಪೈರಸಿ ಸಮಸ್ಯೆಯನ್ನು ಎದುರಿಸುತ್ತಲೇ ಇವೆ. ಬಿಡುಗಡೆ ದಿನದ ಮೊದಲ ಶೋ ಮುಕ್ತಾಯಗೊಂಡ ಬೆನ್ನಲ್ಲೇ ತಮಿಳು ಎಂವಿ, ಐ ಬೊಮ್ಮ ಹಾಗೂ ಇತರೆ ವೆಬ್‌ತಾಣಗಳಲ್ಲಿ ಸಿನಿಮಾಗಳ ಥಿಯೇಟರ್ ಪ್ರಿಂಟ್‌ಗಳು ಲಭ್ಯವಿರುತ್ತವೆ. ಇನ್ನು ಇಷ್ಟು ಮಾತ್ರವಲ್ಲದೆ ಟೆಲಿಗ್ರಾಮ್ ಅಪ್ಲಿಕೇಶನ್‌ಗಳಲ್ಲಿಯೂ ಸಿನಿಮಾಗಳ ಪೈರಸಿ ಲಿಂಕ್‌ಗಳು ಹರಿದಾಡಲಿವೆ.
ಇನ್ನು ಸಿನಿಮಾವೆಂದರೆ ದ್ವೇಷ ಕಾರುವ ಕಿಡಿಗೇಡಿಗಳು ಈ ಲಿಂಕ್‌ಗಳನ್ನು ಶೇರ್ ಮಾಡಲಿದ್ದು ಹಾಗೂ ಸಿನಿಮಾದ ಪ್ರಮುಖ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಮತ್ತು ಯುಟ್ಯೂಬ್‌ನಲ್ಲಿ ಹಂಚಿಕೊಳ್ಳಲಿದ್ದು, ಈ ಹಿನ್ನಡೆಯನ್ನು ತಡೆಗಟ್ಟಲು ಕ್ರಾಂತಿ ಸಿನಿತಂಡವೂ ಎಲ್ಲಾ ಸಿನಿತಂಡಗಳ ಹಾಗೆ ಪೈರಸಿ ವಿರುದ್ಧ ಯುದ್ಧ ಸಾರಿದೆ. ಕ್ರಾಂತಿ ಸಿನಿಮಾ ಯಾವುದೇ ಪೈರಸಿ ಲಿಂಕ್ ಹಾಗೂ ವಿಡಿಯೊ ತುಣುಕುಗಳು ಸಿಕ್ಕರೆ ಅವುಗಳನ್ನು copyright@massbunkantipiracy.comಗೆ ಮೇಲ್ ಮಾಡಿ ಅಥವಾ 8056244694 ಈ ನಂಬರ್‌ಗೆ ವಾಟ್ಸಪ್ ಮಾಡಿ.
ಇದನ್ನೂ ಓದಿ : ಟಾಲಿವುಡ್ ಪ್ರಭಾಸ್ ಬಾಲಿವುಡ್ ಸೂಪರ್ ಸ್ಟಾರ್ ಹೃತಿಕ್ ರೋಷನ್ ಕಾಂಬಿಷೇಷನ್ ನಲ್ಲಿ ಆನಂದ್ ಸಿನಿಮಾ
ಇದನ್ನೂ ಓದಿ : ಟಾಲಿವುಡ್ ನಟ ವಿಕ್ಟರಿ ವೆಂಕಟೇಶ್ 75ನೇ ಸಿನಿಮಾದ ಫಸ್ಟ್ ಲುಕ್ ಟೀಸರ್ ರಿಲೀಸ್
ಇದನ್ನೂ ಓದಿ : ಅಡ್ವಾನ್ಸ್ ಬುಕಿಂಗ್‌ನಲ್ಲಿ ಕೆಜಿಎಫ್ ಚಾಪ್ಟರ್ 2 ದಾಖಲೆ ಮುರಿದ ಶಾರುಖ್ ಖಾನ್ “ಪಠಾಣ್”
ಇದರಿಂದ ಅಂತಹ ತಂಡದ ಲಿಂಕ್ ಹಾಗೂ ತುಣುಕುಗಳನ್ನು ತೆಗೆದುಹಾಕಲಿದೆ. ವಿ. ಹರಿಕೃಷ್ಣ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಕ್ರಾಂತಿ ಸಿನಿಮಾದಲ್ಲಿ ಶೈಲಜಾ ನಾಗ್ ಮತ್ತು ಬಿ ಸುರೇಶ ಅವರ ಮೀಡಿಯಾ ಹೌಸ್ ಸ್ಟುಡಿಯೋಸ್ ನಿರ್ಮಿಸಿರುವ ಕ್ರಾಂತಿಯಲ್ಲಿ ರಚಿತಾ ರಾಮ್, ರವಿಚಂದ್ರನ್, ರವಿಶಂಕರ್, ಸಂಯುಕ್ತ ಹೊರ್ನಾಡ್, ಮತ್ತು ನಿಮಿಕಾ ರತ್ನಾಕರ್ ನಟಿಸಿದ್ದಾರೆ.
Challenging Star Darshan – V Harikrishna : The piracy of Kranti movie is not wrong