ಕೊರೋನಾ ಸಂಕಷ್ಟದಿಂದ ಕಂಗೆಟ್ಟಿರುವ ಜನರಿಗೆ ಸ್ಯಾಂಡಲ್ ವುಡ್ ನಟ-ನಟಿಯರು ಸಹಾಯ ಮಾಡುತ್ತ ಮಾನವೀಯತೆ ಮೆರೆಯುತ್ತಿ ದ್ದಾರೆ.ಈ ಸಂಕಷ್ಟದ ಸಮಯದಲ್ಲಿ ಕವಿರಾಜ್ ಹಾಗೂ ತಂಡ ಆರಂಭಿಸಿರುವ ಉಸಿರು ಸೇವೆಗೆ ದಚ್ಚು ಬೆಂಬಲ ನೀಡಿದ್ದಾರೆ.
ಬೆಂಗಳೂರಿನಾದ್ಯಂತ ಉಸಿರಾಟದ ತೊಂದರೆ ಎದುರಿಸುತ್ತಿರುವ ಕೊರೋನಾ ಪೀಡಿತರಿಗೆ ಆಕ್ಸಿಜನ್ ಕಾನ್ಸಟ್ರೇಟರ್ ಗಳನ್ನು ಒದಗಿಸುವ ಕೆಲಸದಲ್ಲಿ ಉಸಿರು ತಂಡ ನಿರತವಾಗಿದೆ.

ಸಂಗೀತ ನಿರ್ದೇಶಕ ಸಾಧುಕೋಕಿಲ ಹಾಗೂ ನೀತು ಶೆಟ್ಟಿ, ದಿನಕರ ತೂಗುದೀಪ ಸೇರಿದಂತೆ ಹಲವು ಚಿತ್ರರಂಗದ ಗಣ್ಯರು ಈ ತಂಡ ದೊಂದಿಗೆ ಕೈಜೋಡಿಸಿದ್ದಾರೆ.
10 ಲಕ್ಷ ರೂಪಾಯಿ ವೆಚ್ಚದಲ್ಲಿ ಆಮ್ಲಜನಕ ಸಾಂದ್ರಕ ಯಂತ್ರಗಳನ್ನು ಉಸಿರು ತಂಡ ಖರೀದಿಸಿದೆ. ಈ ತಂಡ ಅಗತ್ಯವುಳ್ಳವರು ಸಂಪರ್ಕಿ ಸುತ್ತಿದ್ದಂತೆ ಅವರ ಮನೆಗಳಿಗೆ ತೆರಳಿ ಆಮ್ಲಜನಕ ಕಾನ್ಸಟ್ರೇಟರ್ ಗಳನ್ನು ಒದಗಿಸುತ್ತದೆ. ಬೆಂಗಳೂರಿನ ಸಾಕಷ್ಟು ರೋಗಿಗಳು ಈ ತಂಡದಿಂದ ಸಹಾಯ ಪಡೆದುಕೊಂಡಿದ್ದಾರೆ.
ಇರುವ ಸಂಪನ್ಮೂಲದಲ್ಲೇ ರೋಗಿಗಳ ಸಹಾಯಕ್ಕೆ ಧಾವಿಸಿರುವ ಉಸಿರು ತಂಡಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನೆರವು ನೀಡಿದ್ದು ತಮ್ಮ ಬೆಂಬಲವನ್ನು ಸೂಚಿಸಿದ್ದಾರೆ.
ಅಲ್ಲದೇ ಉಸಿರು ತಂಡಕ್ಕೆ ಅಗತ್ಯ ಸಹಾಯ ನೀಡುವುದಾಗಿ ಘೋಷಿಸಿದ್ದಾರಂತೆ. ಈ ವಿಚಾರವನ್ನು ಸ್ವತಃ ಕವಿರಾಜ್ ಪೇಸ್ ಬುಕ್ ನಲ್ಲಿ ಹಂಚಿಕೊಂಡಿ ದ್ದಾರೆ.
ಅಲ್ಲದೇ ಲಾಕ್ ಡೌನ್ ಘೋಷಣೆಯಾದಾಗಿನಿಂದ ಮೈಸೂರಿನಲ್ಲೇ ಇರುವ ದರ್ಶನ್ ಈ ಉಸಿರು ತಂಡದ ಕಾರ್ಯವನ್ನು ಮೈಸೂರಿಗೂ ವಿಸ್ತರಿಸಲು ಕೋರಿದ್ದು ಅಲ್ಲಿಯೂ ಉಸಿರು ತಂಡ ಜನರಿಗೆ ಜೀವನಾ ವಶ್ಯಕ ಎನ್ನಿಸಿರುವ ಆಮ್ಲಜನಕ ಪೊರೈಸಲು ನೆರವಾಗಲಿದೆಯಂತೆ.
