Bigg Boss Season 9 Kannada : ಬಿಗ್ಬಾಸ್ ಒಟಿಟಿ ಸೀಸನ್ 1 ಅಂತಿಮ ಹಂತದಲ್ಲಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ಬಾಸ್ ಸೀಸನ್ 9 ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ. ಒಟಿಟಿ ವೇದಿಕೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಸ್ಪರ್ಧಿಗಳು ಬಿಗ್ಬಾಸ್ ಸೀಸನ್ 9ಗೆ ಎಂಟ್ರಿ ನೀಡ್ತಾರೆ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರ. ಇವರ ಜೊತೆಯಲ್ಲಿ ಒಂದಷ್ಟು ಹೊಸ ಸ್ಪರ್ಧಿಗಳೂ ಸಹ ಬಿಗ್ಬಾಸ್ ಮನೆ ಸೇರಲಿದ್ದಾರೆ. ಆದರೆ ಇದೆಲ್ಲದರ ಜೊತೆಯಲ್ಲಿ ಇದೀಗ ಮತ್ತೊಂದು ಟ್ವಿಸ್ಟ್ನ್ನು ಬಿಗ್ ಬಾಸ್ ಸೀಸನ್ 9 ವೀಕ್ಷಕರಿಗೆ ನೀಡಿದೆ.
ಕಲರ್ಸ್ ಕನ್ನಡದ ಅಧಿಕೃತ ಸೋಶಿಯಲ್ ಮೀಡಿಯಾ ಪೇಜ್ಗಳಲ್ಲಿ ಬಿಗ್ಬಾಸ್ ಸೀಸನ್ 9ನ ಹೊಸ ಪ್ರೊಮೋವನ್ನು ಹರಿಬಿಡಲಾಗಿದೆ. ಈ ಪ್ರೊಮೋದಲ್ಲಿ ಬಿಗ್ಬಾಸ್ ಹಳೆಯ ಸೀಸನ್ಗಳ ಸ್ಪರ್ಧಿಗಳಾದ ಅನುಪಮಾ ಗೌಡ, ವೈಷ್ಣವಿ , ದೀಪಿಕಾ ದಾಸ್ ಹಾಗೂ ಪ್ರಶಾಂತ್ ಸಂಬರಗಿ ಕಾಣಿಸಿಕೊಂಡಿದ್ದಾರೆ. ಇವರೆಲ್ಲರಿಗೂ ಬಿಗ್ಬಾಸ್ ಸೂಚನೆಗಳನ್ನು ನೀಡಿದ್ದು ಬಳಿಕ ಇವರೆಲ್ಲ ಬ್ಯಾಗ್ ಪ್ಯಾಕ್ ಮಾಡಿಕೊಂಡು ಹೊರಟ ರೀತಿಯಲ್ಲಿ ಪ್ರೊಮೋವನ್ನು ಚಿತ್ರಿಸಲಾಗಿದೆ. ಈ ಪ್ರೊಮೋದಲ್ಲಿ ಸುದೀಪ್ ಕೂಡ ಇದ್ದಾರೆ. ಹೀಗಾಗಿ ಬಿಗ್ಬಾಸ್ ಸೀಸನ್ 9ನಲ್ಲಿ ಅನುಪಮಾ ಗೌಡ, ದೀಪಿಕಾ ದಾಸ್, ವೈಷ್ಣವಿ ಹಾಗೂ ಪ್ರಶಾಂತ್ ಸಂಬರಗಿ ಕೂಡ ಇರಲಿದ್ದಾರಾ ಎಂಬ ಸುಳಿವು ಪ್ರೇಕ್ಷಕರಿಗೆ ಸಿಕ್ಕಂತಿದೆ.
ಬಿಗ್ಬಾಸ್ ಕನ್ನಡ ಒಟಿಸಿ ಸೀಸನ್ 1ನಲ್ಲಿ ಸದ್ಯ ಸಾನ್ಯಾ ಅಯ್ಯರ್, ರೂಪೇಶ್ ಶೆಟ್ಟಿ, ಸೋಮಣ್ಣ ಮಾಚಿಮಾಡ, ಆರ್ಯವರ್ದನ್ ಗುರೂಜಿ, ಸೋನುಗೌಡ, ಜಯಶ್ರೀ ಹಾಗೂ ಜಶ್ವಂತ್ ಕಣದಲ್ಲಿದ್ದಾರೆ. ಇವರಲ್ಲಿ ಒಬ್ಬರು ವಿನ್ನರ್ ಆಗಿ ಹೊರಹೊಮ್ಮಲಿದ್ದಾರೆ. ಹಾಗೂ ಇವರಲ್ಲಿ ಅದ್ಭುತ ಪ್ರದರ್ಶನ ತೋರಿದವರನ್ನು ಬಿಗ್ಬಾಸ್ ಸೀಸನ್ 9ಗೆ ಕಳುಹಿಸಿಕೊಡಲಾಗುತ್ತದೆ.
ಯಾವಾಗಲು ಹೊಸ ಹೊಸ ಸ್ಪರ್ಧಿಗಳು ಮಾತ್ರ ಬಿಗ್ಬಾಸ್ ಮನೆಗೆ ಎಂಟ್ರಿ ನೀಡುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ನವೀನರ ಜೊತೆ ಪ್ರವೀಣರು ಎಂಬಂತೆ ಹೊಸ – ಹಳೆಯ ಸ್ಪರ್ಧಿಗಳ ಸಮಾಗಮ ಇರಲಿದೆ. ಹೀಗಾಗಿ ಬಿಗ್ಬಾಸ್ ಸೀಸನ್ 9 ಆರಂಭಕ್ಕೂ ಮುನ್ನವೇ ಸಾಕಷ್ಟು ಕುತೂಹಲಗಳನ್ನು ಪ್ರೇಕ್ಷಕರ ಮುಂದೆ ಕಟ್ಟಿಕೊಡುತ್ತಿದ್ದು ಸೆಪ್ಟೆಂಬರ್ 24ರಿಂದ ರಾತ್ರಿ 9:30 ರಿಂದ 11 ಗಂಟೆಯವರೆಗೆ ಪ್ರಸಾರವಾಗಲಿದೆ. ಪ್ರತಿಬಾರಿಯ ಸೀಸನ್ನಂತೆ ಶನಿವಾರ ಹಾಗೂ ಭಾನುವಾರದ ವೀಕೆಂಡ್ ಪ್ರೋಗ್ರಾಂಗಳನ್ನು ಕಿಚ್ಚ ಸುದೀಪ ನಡೆಸಿ ಕೊಡಲಿದ್ದಾರೆ.
ಇದನ್ನು ಓದಿ : Gobhi Pepper Fry : ಗೋಬಿಯ ಈ ಸ್ನ್ಯಾಕ್ಸ್ ಸವಿದಿದ್ದೀರಾ; ಗೋಬಿ–ಪೆಪ್ಪರ್ ಫ್ರೈ ಹೀಗೆ ಮಾಡಿ
ಇದನ್ನೂ ಓದಿ : BREAKING : ಐಪಿಎಲ್ ಸೇರಿದಂತೆ ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ರಾಬಿನ್ ಉತ್ತಪ್ಪ ನಿವೃತ್ತಿ ಘೋಷಣೆ
Check here for updates on Bigg Boss Season 9 Kannada