ಸ್ಯಾಂಡಲ್ ವುಡ್ ಚಿರಂಜೀವಿ ಸರ್ಜಾ ಬಾರದ ಲೋಕಕ್ಕೆ ಪಯಣಿಸಿ ಇಂದಿಗೆ 12 ದಿನಗಳೇ ಕಳೆದುಹೋಗಿದೆ. ಚಿರು ನೆನಪಲ್ಲೇ ಪತ್ನಿ ಮೇಘನಾ ರಾಜ್, ಸಹೋದರ ಧ್ರುವ ಸರ್ಜಾ, ಮಾವ ಅರ್ಜುನ್ ಸರ್ಜಾ ಸೇರಿದಂತೆ ಕುಟುಂಬಸ್ಥರು ಕಂಬನಿ ಮಿಡಿಯುತ್ತಿದ್ದಾರೆ.

ಈ ನಡುವಲ್ಲೇ ಚಿರು ಅವರನ್ನು ಕಳೆದುಕೊಂಡ ದುಃಖದಲ್ಲಿರುವ ಪತ್ನಿ ಮೇಘನಾ ರಾಜ್ ಭಾವನಾತ್ಮಕವಾಗಿ ಬರೆದಿರುವ ಬರಹ ಓದುಗರಿಗೆ ಕಣ್ಣೀರು ತರಿಸುತ್ತಿದೆ.


ಚಿರು, ನಾನು ಪದೇ ಪದೇ ಪ್ರಯತ್ನಿಸಿದರು, ನನ್ನ ಭಾವನೆಗಳನ್ನು ಪದಗಳಲ್ಲಿ ವರ್ಣಿಸಲಾಗ್ತಿಲ್ಲಾ. ನೀನು ನನ್ನ ಸ್ನೇಹಿತ, ಜೊತೆಗಾರ, ನನ್ನ ಕಂದ, ನನ್ನ ಪತಿ ಮಾತ್ರವೇ ಅಲ್ಲ ನೀನು ನನ್ನ ಆತ್ಮದ ಒಂದು ಭಾಗ. ನೀನು ನನ್ನ ಗಾರ್ಡಿಯನ್ ಏಂಜಲ್” ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.

ಮೇಘನಾ ರಾಜ್ ಬರೆದುಕೊಂಡಿರುವ ಬರಹ ಇದೀಗ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದ್ದು, ಆಬಿಮಾನಿಗಳು ನೋವಲ್ಲೇ ಮೇಘನಾ ಅವರಿಗೆ ಸಮಾಧಾನದ ಮಾತುಗಳನ್ನು ಹೇಳುತ್ತಿದ್ದಾರೆ.
