ಬೆಂಗಳೂರು : ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಕನ್ನಡಿಗರ ನೆಚ್ಚಿನ ಸ್ಟಾರ್. ಚಿರು ಅಕಾಲಿಕ ಮರಣ ನೋವಿನ ಮಡುವಲ್ಲಿ ಮಲಗಿಸಿದೆ. ಪತ್ನಿ ಮೇಘನಾ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದು, ಮಗುವಿನ ಮುಖವನ್ನು ನೋಡುವ ಮೊದಲೇ ಚಿರು ಬಾರದ ಲೋಕಕ್ಕೆ ಪಯಣಿಸಿದ್ದಾರೆ.

ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ವಿವಾಹವಾಗಿ 2 ವರ್ಷ ಕಳೆದಿದೆ. ತನ್ನ ಸಹೋದರ ಧ್ರುವ ಸರ್ಜಾ ಮದುವೆಯ ಸಂಭ್ರಮವನ್ನು ಸಂತೋಷದಿಂದ ಕಳೆದಿದ್ದ ಕುಟುಂಬಕ್ಕೀಗ ಬರಸಿಡಿಲೇ ಬಂದೆರಗಿದೆ.

ಎರಡು ವರ್ಷಗಳ ಹಿಂದೆಯಷ್ಟೇ ಅದ್ದೂರಿಯಾಗಿ ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾರಿಸಿದ್ದ ಮೇಘನಾ – ಚಿರು ಪ್ರೀತಿಯ ಕುಡಿ ಚಿಗುರುತ್ತಿದೆ.

ಮೇಘನಾರಾಜ್ ಅವರು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾರೆ. ತಂದೆಯಾಗುವ ಖುಷಿಯಲ್ಲಿದ್ದ ಚಿರು ಇಂದು ಕುಟುಂಬದೊಂದಿಗಿಲ್ಲ. ಪತಿಯ ಪಕ್ಕದಲ್ಲಿ ಕುಳಿತಿರುವ ಮೇಘನಾ ಅವರನ್ನು ನೋಡಿದ್ರೆ ಕರಳು ಕಿತ್ತು ಬರುವಂತಿದೆ.

ಇತ್ತೀಚಿಗಷ್ಟೇ ಪತ್ನಿ ನಟಿ ಮೇಘನಾ ಮುತ್ತಿಕ್ಕುವ ಪೋಟೋವನ್ನು ಇನ್ ಸ್ಟಾಗ್ರಾಮ್ ನಲ್ಲಿ ಅಪ್ ಲೋಡ್ ಮಾಡಿದ್ದ ಚಿರು ಪತ್ನಿಯ ಜೊತೆಗಿನ ಪ್ರೀತಿಯನ್ನು ಸಾಲುಗಳಲ್ಲಿ ಬರೆದಿದ್ದರು.

ಸ್ಯಾಂಡಲ್ ವುಡ್ ನಲ್ಲಿ ಬಹು ಎತ್ತರಕ್ಕೆ ಬೆಳೆಯುವ ಕನಸು ಕಂಡಿದ್ದ ಚಿರು ಸರ್ಜಾ ಸಾವನ್ನು ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ.