ಬೆಂಗಳೂರು : ಯುವ ನಟ ಚಿರಂಜೀವಿ ಸರ್ಜಾ ಚಿರನಿದ್ರೆ ಜಾರಿಗೆ ಮೂರು ದಿನಗಳೇ ಕಳೆದಿದೆ. ಈ ಹಿನ್ನೆಲೆ ಬೃಂದಾವನ ಫಾರ್ಮ್ ಹೌಸ್ ನಲ್ಲಿ ಹಾಲುತುಪ್ಪ ಕಾರ್ಯ ನಡೆಯಿತು. ಕಣ್ಣೀರಿಡುತ್ತಲೇ ಮೇಘನಾ ರಾಜ್ ಸಂಪ್ರದಾಯವನ್ನು ನೆರವೇರಿಸಿದರು.

ಹೃದಯಾಘಾತದಿಂದ ನಿಧನರಾದ ಚಿರಂಜೀವಿ ಸರ್ಜಾ ಮರೆಯಾಗಿ ಮೂರು ದಿನಗಳೇ ಕಳೆದಿದ್ದರೂ, ಆ ನೋವು ಇನ್ನೂ ಕಾಡುತ್ತಲೇ ಇದೆ. ಚಿರು ಅಂತ್ಯಕ್ರೀಯೆ ನೆರವೇರಿದ ಕನಕಪುರ ನೆಲಗುಳಿ ಗ್ರಾಮದಲ್ಲಿರುವ ಧ್ರುವ ಸರ್ಜಾ ಫಾರ್ಮ್ ಹೌಸ್‍ನಲ್ಲಿರುವ ಚಿರು ಸಮಾಧಿಗೆ ಪುರೋಹಿತರಿಂದ ಹಾಲು ತುಪ್ಪ ಕಾರ್ಯವನ್ನು ನೆರವೇರಿಸಿದರು.

ಹಾಲತುಪ್ಪ ಕಾರ್ಯದ ಹಿನ್ನೆಲೆಯಲ್ಲಿ ಸರ್ಜಾ ಕುಟುಂಬ ಹಾಗೂ ಮೇಘನಾ ರಾಜ್ ಕುಟುಂಬಸ್ಥರು ಬೃಂದಾವನ ಫಾರ್ಮ್ ಹೌಸ್ ಗೆ ತೆರಳಿದ್ದರು. ಹಾಲು ತುಪ್ಪ ಕಾರ್ಯದಲ್ಲಿ ಕೇವಲ ಕುಟುಂಬ ಸದಸ್ಯರು ಮತ್ತು ಅತ್ಯಾಪ್ತರು ಮಾತ್ರವೇ ಪಾಲ್ಗೊಂಡಿದ್ದರು.