ಚಿರಂಜೀವಿ ಸರ್ಜಾ ಇಂದು ನಮ್ಮೊಂದಿಗಿಲ್ಲ. ಆದ್ರೆ ನಟ ಚಿರಂಜೀವಿ ಸರ್ಜಾ ಅವರ ನೆನಪು ನಮ್ಮನ್ನು ಕಾಡುತ್ತಲೇ ಇದೆ. ನೆಚ್ಚಿನ ನಟನ ಅಕಾಲಿಕ ನಿಧನ ಅಭಿಮಾನಿಗಳನ್ನು ಇಂದಿಗೂ ದುಃಖ ಸಾಗರದಲ್ಲಿಯೇ ಮುಳುಗಿಸುತ್ತಿದೆ. ಅದ್ರಲ್ಲೂ ಗರ್ಭಿಣಿಯಾಗಿರುವ ಮೇಘನಾ ಬಳಿ ಚಿರಂಜೀವಿ ಸರ್ಜಾ ಮಗುವಿನ ವಿಚಾರವಾಗಿ ತನ್ನ ಕೊನೆಯ ಆಸೆಯನ್ನು ಹೇಳಿಕೊಂಡಿದ್ರು.

ಸಹನಿರ್ದೇಶಕನಾಗಿ ವೃತ್ತಿ ಜೀವನವನ್ನು ಆರಂಭಿಸಿದ್ದ ಚಿರಂಜೀವಿ ಸರ್ಜಾ ನಾಯಕನಾಗಿ ಅಭಿಮಾನಿಗಳ ಆರಾಧ್ಯ ದೇವರಾಗಿದ್ರು. ಮಾಡಿದ್ದು 22 ಸಿನಿಮಾಗಳೇ ಆಗಿದ್ರೂ ಸ್ಯಾಂಡಲ್ ವುಡ್ ಮಂದಿಯ ಮನಗೆದ್ದಿದ್ರು ಚಿರು.

ತನ್ನ ಸೌಮ್ಯತೆ, ಸರಳತೆಯಿಂದಲೇ ಎಲ್ಲರ ಮನೆಗೆದ್ದ ಚಿರು ಇಂದು ಎಲ್ಲರನ್ನೂ ಕಣ್ಣೀರಲ್ಲೇ ಮುಳುಗಿಸಿ ಹೊರಟು ಹೋಗಿದ್ದಾರೆ. ಆದರೆ ಚಿರು ಮತ್ತೆ ಹುಟ್ಟಿ ಬರ್ತಿದ್ದಾರೆ.

ಸುಮಾರು 10 ವರ್ಷಗಳ ಪ್ರೀತಿಸಿ ಕಳೆದೆರಡು ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದ ಮೇಘನಾ ಇದೀಗ ಗರ್ಭಿಣಿ. ಮನಮೆಚ್ಚಿ ಕೈಹಿಡಿದ ಪತ್ನಿ ಗರ್ಭಿಣಿ ಅನ್ನುವ ವಿಚಾರ ತಿಳಿಯುತ್ತಿದ್ದಂತೆಯೇ ಚಿರು ಕುಣಿದು ಕುಪ್ಪಳಿಸಿದ್ರು.

ಪತ್ನಿಯ ಕೈಗೊಂಬೆಯೊಂದನ್ನು ಉಡುಗೊರೆಯಾಗಿ ನೀಡಿದ್ರು. ಮಾತ್ರವಲ್ಲ ತನಗೆ ಹೆಣ್ಣು ಮಗು ಬೇಕೆನ್ನುವ ತನ್ನ ಮನದಾಸೆಯನ್ನು ಪತ್ನಿ ಮೇಘನಾ ಬಳಿ ಹೇಳಿಕೊಂಡಿದ್ದರು ಚಿರು.

ಮೇಘನಾ ರಾಜ್ ಗರ್ಭಿಣಿಯಾಗಿರುವ ವಿಚಾರ ಕೇವಲ ಕುಟುಂಬಸ್ಥರಿಗೆ ಮಾತ್ರವೇ ತಿಳಿದಿತ್ತು. ಸ್ವಲ್ಪ ಸಮಯದಲ್ಲಿಯೇ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡುವ ತವಕದಲ್ಲಿದ್ದರು ಚಿರಂಜೀವಿ ಮೇಘನಾ ದಂಪತಿ. ಆದ್ರೆ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡುವ ಮೊದಲೇ ಚಿರು ಶಾಕ್ ಕೊಟ್ಟಿದ್ದಾರೆ. ಆದ್ರೆ ಮೇಘನಾ ಹೊಟ್ಟೆಯಲ್ಲಿ ಚಿರು ಮತ್ತೆ ಹುಟ್ಟಿ ಬರ್ತಿದ್ದಾರೆ.

ಚಿರು ಹೆಣ್ಣು ಮಗು ಹೆತ್ತುಕೊಡು ಅಂತಾ ಕೇಳಿದ್ದೆ ಕೊನೆಯಾಸೆಯಾಗಿ ಹೋಗಿದೆ. ಅಷ್ಟೇ ಯಾಕೆ ಪತ್ನಿ ಗರ್ಭಿಣಿ ಅನ್ನೋ ಖುಷಿಯಲ್ಲಿ ಕೊಟ್ಟಿದ್ದ ಆ ಗೊಂಬೆಯೇ ಕೊನೆಯ ಉಡುಗೊರೆಯಾಗಿ ಹೋಗಿದೆ. ಚಿರು ನಮ್ಮೊಂದಿಗಿಲ್ಲ, ಆದರೆ ಚಿರು ಲಕ್ಷಾಂತರ ಅಭಿಮಾನಿಗಳ ಹೃದಯದಲ್ಲಿ ಅಮರರಾಗಿದ್ದಾರೆ.