ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಮಹಾಮಾರಿಯ ಆರ್ಭಟ ಹೆಚ್ಚುತ್ತಿರುವ ನಡುವಲ್ಲೇ ಸಿನಿಮಾ ಹಾಗೂ ಧಾರಾವಾಹಿ ಶೂಟಿಂಗ್ ಗೆ ರಾಜ್ಯ ಸರಕಾರ ಗ್ರೀನ್ ಸಿಗ್ನಲ್ ಕೊಟ್ಟಿದೆ.

ಕೊರೊನಾ ಹಿನ್ನೆಲೆಯಲ್ಲಿ ಕಳೆದೆರಡೂವರೆ ತಿಂಗಳಿನಿಂದಲೂ ಸಿನಿಮಾ ಚಿತ್ರೀಕರಣ ಸಂಪೂರ್ಣ ಸ್ಥಗಿತವಾಗಿತ್ತು. ಆದ್ರೆ ಲಾಕ್ ಡೌನ್ ಆದೇಶದ ನಡುವಲ್ಲೇ ಧಾರಾವಾಹಿ ಚಿತ್ರೀಕರಣಕ್ಕೆ ರಾಜ್ಯ ಸರಕಾರ ಷರತ್ತು ಬದ್ದ ಅನುಮತಿಯನ್ನು ನೀಡಿತ್ತು. ಇದೀಗ ರಾಜ್ಯ ಸರಕಾರ ಸಿನಿಮಾ ಶೂಟಿಂಗ್ ಗೂ ಅವಕಾಶ ನೀಡಿದ್ದು, ಹೊರಾಂಗಣ ಚಿತ್ರೀಕರಣಕ್ಕೂ ಗ್ರೀನ್ ಸಿಗ್ನಲ್ ನೀಡಿದೆ. ಇದರಿಂದಾಗಿ ಕಲಾವಿದರು, ತಂತ್ರಜ್ಞರು, ನಿರ್ಮಾಕರು ಕೊಂಚ ರಿಲ್ಯಾಕ್ಸ್ ಆಗಿದ್ದಾರೆ.