ಮಾಯಾ ಲೋಕ ಎಂದೇ ಕರೆಸಿಕೊಳ್ಳೋ ಬಣ್ಣದ ಲೋಕದಲ್ಲಿ ಮಿಂಚಬೇಕು ಎಂದರೇ ಕಣ್ಣು, ಮೂಗು, ತುಟಿ ಎಲ್ಲವೂ ಸುಂದರವಾಗಿರಬೇಕು. ಮೈಮಾಟವೂ ಅಷ್ಟೇ ಸುಂದರವಾಗಿರಬೇಕು ಎಂಬೆಲ್ಲ ನಿಯಮವಿದೆ. ಇದೇ ಕಾರಣಕ್ಕೆ ನಟ-ನಟಿಯರು ತಮ್ಮ ಬಾಡಿ ಪಾರ್ಟ್ ಸರ್ಜರಿ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತಾರೆ. ಆದರೆ ಕೆಲವೊಮ್ಮೆ ಈ ಸರ್ಜರಿಗಳೇ ನಟ -ನಟಿಯರ ಪ್ರಾಣಕ್ಕೆ ಮುಳುವಾಗ್ತಿದೆ. ಆರತಿ, ಬುಲೆಟ್ ಪ್ರಕಾಶ್ (bullet prakash) ರಂತ ಹಿರಿಯರ ಬಳಿಕ ಇದೀಗ ಚೇತನಾ ರಾಜ್ (chethana raj)ಎಂಬ ಯುವನಟಿ ಕಾಸ್ಮೆಟಿಕ್ ಸರ್ಜರಿ (Cosmetic Surgery) ಎಂಬ ಭೂತಕ್ಕೆ ಬಲಿಯಾಗಿದ್ದಾರೆ.
ಕೇವಲ ಸ್ಯಾಂಡಲ್ ವುಡ್ ಮಾತ್ರವಲ್ಲ ಬಾಲಿವುಡ್ ವರೆಗೂ ಈ ಸೌಂದರ್ಯವರ್ದಕ ಸರ್ಜರಿಯ ಗೀಳಿಗೆ. ಬಾಡಿ ಶೇಮಿಂಗ್ ತಪ್ಪಿಸಿಕೊಳ್ಳಲು ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಳ್ಳಲು ಹೀಗೆ ನಾನಾ ಕಾರಣ ಮುಂದಿಟ್ಟುಕೊಂಡು ನಟಿಯರು ಕಾಸ್ಮೆಟಿಕ್ ಸರ್ಜರಿಗೆ ಮೊರೆ ಹೋಗುತ್ತಾರೆ. ಆದರೆ ಈ ಸರ್ಜರಿಯಲ್ಲಿ ಸಕ್ಸಸ್ ಗಿಂತ ಹೆಚ್ಚಿನ ಪ್ರಮಾಣ ವಿಫಲತೆಯದ್ದೇ ಅನ್ನೋದು ಬಹುತೇಕರ ಅರಿವಿಗಿಲ್ಲ. ಈ ಹಿಂದೆ ಟಾಲಿವುಡ್ ನ ನಟಿ ಆರತಿ ಆಗರವಾಲ್ (aarthi agarwal) ಲಿಪೋಸೆಕ್ಷನ್ ಸರ್ಜರಿಗೆ ಒಳಗಾಗಿದ್ದರು. ಆದರೆ ಈ ಸರ್ಜರಿ ಸೈಡ್ ಎಫೆಕ್ಟ್ ನಿಂದಲೇ ಆರತಿ ಹೃದಯಾಘಾತದಿಂದ ನಿಧನರಾಗಿದ್ದರು.
ಇನ್ನು ತಮ್ಮ ದೇಹಗಾತ್ರದಿಂದಲೇ ಫೇಮಸ್ ಆಗಿದ್ದ ನಟ ಬುಲೆಟ್ ಪ್ರಕಾಶ್ 2018 ರಲ್ಲಿ ದೇಹತೂಕ ಇಳಿಸಿಕೊಳ್ಳುವ ಸರ್ಜರಿಗೆ ಒಳಗಾಗಿದ್ದರು. ಬರೋಬ್ಬರಿ 35 ಕಿಲೋ ತೂಕ ಇಳಿಸಿಕೊಂಡಿದ್ದರು. ಆದರೆ ಇದಾದ ಬಳಿಕ ಅನಾರೋಗ್ಯಕ್ಕೆ ತುತ್ತಾದ ಬುಲೆಟ್ ಪ್ರಕಾಶ್, ಲಿವರ್ ಹಾಗೂ ಕಿಡ್ನಿ ಫೇಲ್ಯೂರ್ ನಿಂದ ನರಳಿ ಬಳಿಕ 2020 ರಲ್ಲಿ ಸಾವನ್ನಪ್ಪಿದ್ದರು.
ಇದಲ್ಲದೇ ಗಾಳಿಪಟ ಸೇರಿದಂತೆ ಹಲವು ಸಿನಿಮಾದಲ್ಲಿ ಮಿಂಚಿದ ನಟಿ ನೀತು ಶೆಟ್ಟಿ ಸಹ ಈ ಕಾಸ್ಮೆಟಿಕ್ ಸರ್ಜರಿಗೆ ಒಳಗಾಗಿದ್ದರು. ಆದರೇ ಅವರಿಗೆ ಈ ಸರ್ಜರಿ ಯಾವುದೇ ರೀತಿಯಲ್ಲೂ ಪ್ರಯೋಜನವಾಗದೇ ಅವರೂ ಈಗಲೂ ದಪ್ಪವಾಗಿಯೇ ಉಳಿದುಕೊಂಡಿದ್ದಾರೆ. ಈ ವಿಚಾರವನ್ನು ಸ್ವತಃ ನೀತು ಅವರೇ ಖಚಿತಪಡಿಸಿದ್ದಾರೆ. ಅಲ್ಲದೇ ಯಾರನ್ನೋ ಮೆಚ್ಚಿಸಲು ನೀವು ಸರ್ಜರಿಗೆ ಒಳಗಾಗಿ ಇಲ್ಲ ಸಲ್ಲದ ಆರೋಗ್ಯ ಸಮಸ್ಯೆಗಳನ್ನು ಬರಮಾಡಿಕೊಳ್ಳಬೇಡಿ ಎಂದು ಮನವಿ ಮಾಡಿದ್ದಾರೆ.
ಕೇವಲ ಸ್ಯಾಂಡಲ್ ವುಡ್ ಮಾತ್ರವಲ್ಲ ಟಾಲಿವುಡ್ ನಟಿ ಅನುಷ್ಕಾ ಶೆಟ್ಟಿ ಕೂಡ ಲಿಪೋಸೆಕ್ಷನ್ ಸರ್ಜರಿಗೆ ಒಳಗಾಗಿ ಬಳಿಕ ಅನಾರೋಗ್ಯಕ್ಕೆ ತುತ್ತಾಗಿದ್ದರು. ಆದರೆ ಈಗ ಸ್ಯಾಂಡಲ್ ವುಡ್ ನಟಿ ಚೇತನಾ ರಾಜ್ ಸರ್ಜರಿ ಮಾಡಿಕೊಳ್ಳೋಕೆ ಹೋಗಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಇನ್ನು ಬಾಲಿವುಡ್ ನಲ್ಲಂತೂ 90 ರ ದಶಕದ ನಟಿ ಶ್ರಿದೇವಿಯಿಂದ ಆಧರಿಸಿ ಈಗ ಮಿಂಚುತ್ತಿರೋ ಶಿಲ್ಪಾ ಶೆಟ್ಟಿ ಯವರೆಗೆ ಹಲವು ನಟಿಯರಿ ಕಾಸ್ಮೆಟಿಕ್ ಸರ್ಜರಿಗೆ ಒಳಗಾಗಿದ್ದಾರೆ.
ಇದನ್ನೂ ಓದಿ : ಫ್ಯಾಟ್ ಸರ್ಜರಿ ವೇಳೆ ಎಡವಟ್ಟು : ದೊರೆಸಾನಿ ಧಾರವಾಹಿ ನಟಿ ಚೇತನಾ ರಾಜ್ ಸಾವು
ಇದನ್ನೂ ಓದಿ : ಬಿಕನಿ ಲುಕ್ನಲ್ಲಿ ಹಾಟ್ ಹಾಟ್ ಆಗಿ ಕಂಗೊಳಿಸಿದ ಸಂಯುಕ್ತಾ ಹೆಗ್ಡೆ
Cosmetic Surgery How many actors Death, Here is the details