dance karnataka dance 6 : ಚಂದನವನದ ಪಾಲಿಗೆ ಈ ವರ್ಷ ಸುವರ್ಣ ಯುಗ ಎಂದೇ ಹೇಳಬಹುದು. ಏಕೆಂದರೆ ಸ್ಯಾಂಡಲ್ವುಡ್ನಲ್ಲಿ ಬರ್ತಿರೋ ಸಾಲು ಸಾಲು ಹಿಟ್ ಸಿನಿಮಾಗಳು ಸ್ಯಾಂಡಲ್ವುಡ್ ಇಂಡಸ್ಟ್ರಿಯ ಹೆಸರನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುತ್ತಿದೆ. ಬೇರೆ ಬೇರೆ ಸಿನಿಮಾ ಇಂಡಸ್ಟ್ರಿ ಕೂಡ ಕನ್ನಡದತ್ತ ಮುಖ ಮಾಡಿ ನೋಡುವಂತಾಗಿದೆ. ಗರುಡ ಗಮನ ವೃಷಭ ವಾಹನ, ಕೆಜಿಎಫ್ 2, 777 ಚಾರ್ಲಿ ಹೀಗೆ ಒಂದಾದ ಮೇಲೊಂದರಂತೆ ಹಿಟ್ ಸಿನಿಮಾಗಳು ಸ್ಯಾಂಡಲ್ವುಡ್ನಿಂದ ಬರುತ್ತಿದೆ.
ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ ಇದೀಗ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಮತ್ತೊಂದು ಹಿಟ್ ಸಿನಿಮಾವನ್ನು ನೀಡಲು ಸಜ್ಜಾಗಿದ್ದಾರೆ. ಅನೂಪ್ ಭಂಡಾರಿ ನಿರ್ದೇಶನದ ಕಿಚ್ಚ ಸುದೀಪ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗಲು ದಿನಗಣನೆ ಆರಂಭವಾಗಿದೆ. ಸ್ಯಾಂಡಲ್ವುಡ್ನಲ್ಲಿ ಸಧ್ಯ ಸಾಲು ಸಾಲು ಸಿನಿಮಾಗಳು ಹಿಟ್ ಆಗ್ತಿರೋದ್ರಿಂದ ಎಲ್ಲರಿಗೂ ವಿಕ್ರಾಂತ್ ರೋಣ ಸಿನಿಮಾದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ ಎಂದು ಹೇಳಿದರೆ ಸುಳ್ಳಾಗಲಾರದು.
ವಿಕ್ರಾಂತ್ ರೋಣ ಸಿನಿಮಾದ ಟ್ರೈಲರ್ ಕೆಲವು ದಿನಗಳ ಹಿಂದೆಯಷ್ಟೇ ರಿಲೀಸ್ ಆಗಿ ಸಾಕಷ್ಟು ಸದ್ದು ಮಾಡಿತ್ತು. ಇದೀಗ ಸಂಪೂರ್ಣ ಚಿತ್ರತಂಡ ಸಿನಿಮಾದ ಪ್ರಚಾರ ಕಾರ್ಯಗಳಲ್ಲಿ ಬ್ಯುಸಿಯಾಗಿದೆ. ಸಿನಿಮಾದ ಪ್ರಚಾರದ ಭಾಗವಾಗಿ ನಟ ಕಿಚ್ಚ ಸುದೀಪ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಎಂಬ ರಿಯಾಲಿಟಿ ಶೋನಲ್ಲಿ ಈ ಬಾರಿ ಕಾಣಿಸಿಕೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ನಟ ಶಿವಣ್ಣ ಇದ್ದಾರೆ. ಹೀಗಾಗಿ ಈ ವಾರ ಕಿರುತೆರೆ ವೀಕ್ಷಿಸುವ ಪ್ರತಿಯೊಬ್ಬರೂ ಮನೆಯಲ್ಲಿಯೇ ಕುಳಿತು ಶಿವಣ್ಣ ಹಾಗೂ ಸುದೀಪ ಕಾಂಬಿನೇಷನ್ನ ಮಜಾವನ್ನು ವೀಕ್ಷಿಸಬಹುದಾಗಿದೆ.
ಈ ವಾರ ಡಿಕೆಡಿ ಸ್ಟೇಜ್ನಲ್ಲಿ ಎಂಟರ್ಟೈನ್ಮೆಂಟ್ ಕಿಚ್ಚು ಹಚ್ಚೋಕೆ ಬರುತ್ತಿರುವ ಗೆಸ್ಟ್ ಯಾರು ಹೇಳಿ ಎಂದು ಜೀ ಕನ್ನಡ ವಾಹಿನಿ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದೆ. ಹೀಗಾಗಿ ಕಿಚ್ಚ ಅಭಿಮಾನಿಗಳು ಫುಲ್ ಖುಶ್ ಆಗಿದ್ದು ವೀಕೆಂಡ್ ಯಾವಾಗ ಬರುತ್ತಪ್ಪಾ..? ಶಿವಣ್ಣ ಹಾಗೂ ಸುದೀಪ ಒಟ್ಟಾಗಿ ರಕ್ಕಮ್ಮ ಹಾಡಿಗೆ ಸ್ಟೆಪ್ಸ್ ಹಾಕೋದನ್ನು ನೋಡಬೇಕು ಅಂತಾ ಹೇಳ್ತಿದ್ದಾರೆ.
ಇದನ್ನು ಓದಿ : Eknath Shinde : ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಆಯ್ಕೆ
ಇದನ್ನೂ ಓದಿ : Eoin Morgan : ಇಂಗ್ಲಿಷ್ ಕ್ರಿಕೆಟ್ ದಿಕ್ಕನ್ನೇ ಬದಲಿಸಿದ ಐರಿಷ್ ಆಟಗಾರ ; ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಇಂಗ್ಲೆಂಡ್ ದಿಗ್ಗಜನ ವಿದಾಯ
dance karnataka dance 6 shivarajkumar and vikranr rona actor sudeep combination for this week