ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚೆಗೆ ವಿಭಿನ್ನ ಕಥಾಹಂದರವುಳ್ಳ ಸಿನಿಮಾಗಳು ಬರುತ್ತಿದೆ. ಅದರ ಸಾಲಿಗೆ ಪೂರ್ಣಚಂದ್ರ ತೇಜಸ್ವಿ ಬರದ ಡೇರ್ ಡೆವಿಲ್ ಮುಸ್ತಾಫಾ ಸಿನಿಮಾ (Daredevil Musthafa movie) ನಿರ್ಮಾಣ ಆಗಿದೆ. ಇನ್ನು ಈ ಸಿನಿತಂಡ ಬೆಂಬಲಕ್ಕೆ ನಟ ರಾಕ್ಷಸ ಡಾಲಿ ಧನಂಜಯ್ ನಿಂತಿದ್ದು, ತಮ್ಮದೇ ಆದ ಡಾಲಿ ಪಿಕ್ಚರ್ಸ್ ಬ್ಯಾನರ್ ಮೂಲಕ ಕೆಆರ್‌ಜಿ ಸ್ಟುಡಿಯೋಸ್ ಜೊತೆ ಸೇರಿ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ. ಇದೇ ಶುಕ್ರವಾರ ಈ ಸಿನಿಮಾ ಬಿಡುಗಡೆ ಆಗಲಿದ್ದು, ಗುರುವಾರ ಪ್ರೀಮಿಯರ್ ಶೋ ಆರಂಭವಾಗಲಿದೆ. ಇನ್ನು ಡೇರ್‌ಡೆವಿಲ್ ಮುಸ್ತಾಫಾ ಸಿನಿಮಾದ ಪ್ರೀಮಿಯರ್ ಶೋ ಟಿಕೆಟ್ ಬೆಲೆ ಕೇವಲ ಒಂದು ರೂಪಾಯಿ ಎಂದು ಸಿನಿತಂಡ ಘೋಷಿಸಿದೆ.
ಈ ಸುದ್ದಿ ಕೇಳುತ್ತಿದ್ದಂತೆ ಇಡೀ ರಾಜ್ಯದ ಜನತೆ ಖುಷಿ ಪಟ್ಟಿದೆ. ನಟ ಡಾಲಿ ಧನಂಜಯ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ,”ಒಂದೇ ಒಂದು ರೂಪಾಯಿಗೆ ಸಿನಿಮಾ ಕಣ್ಮುಂದೆ ನಂಬಿದ್ರೆ ನಂಬಿ !! ಡೇರ್‌ಡೇವಿಲ್ ಮುಸ್ತಾಫಾ ಪ್ರೀಮಿಯರ್ ಶೋ ಟಿಕೆಟ್ ಕೇವಲ ಒಂದು ರೂಪಾಯಿಗೆ” ಎಂದು ಬರೆದು ಹಂಚಿಕೊಂಡಿದ್ದಾರೆ.
ರೂಪಾಯಿ ಒಂದೇ
— Dhananjaya (@Dhananjayaka) May 17, 2023
ಸಿನಿಮಾ ಕಣ್ಮುಂದೆ
ನಂಬಿದ್ರೆ ನಂಬಿ !!
ಡೇರ್‌ಡೆವಿಲ್ ಮುಸ್ತಾಫಾ ಪ್ರೀಮಿಯರ್ ಶೋ ಟಿಕೆಟ್ ಕೇವಲ ಒಂದು ರೂಪಾಯಿಗೆ
Keep checking book my show and grab it as soon as it opens! 🙌#Ddm_Releasing_On_May19 #DaredevilMusthafa pic.twitter.com/Ow07YI9hrQ
ಡೇರ್‌ಡೆವಿಲ್ ಮುಸ್ತಾಫಾ ಸಿನಿಮಾವನ್ನು ಪೂರ್ಣಚಂದ್ರ ತೇಜಸ್ವಿ ಅಭಿಮಾನಿಗಳೇ ಸೇರಿ ನಿರ್ಮಾಣ ಹೊಣೆ ಹೊತ್ತಿದ್ದು, ಇದರಲ್ಲಿ ನೂರು ಅಭಿಮಾನಿಗಳು ಹಣ ಹಾಕಿದ್ದಾರೆ. ಹಾಗೆ ನೋಡಿದರೆ ಇದೇ ಮೊದಲ ಬಾರೀ ರಾಜ್ಯದಲ್ಲಿ ಇಂತಹದೊಂದು ಪ್ರಯತ್ನ ನಡೆದಿದೆ. ಇನ್ನು ಈ ಸಿನಿಮಾಕ್ಕೆ ಶಶಾಂಕ್ ಸೊಗ್ಗಾಲ್ ಆಕ್ಷನ್ ಕಟ್ ಹೇಳಿದ್ದಾರೆ. ಸಿನಿಮಾದ ಟೀಸರ್, ಟ್ರೈಲರ್ ರಿಲೀಸ್ ಆಗಿದ್ದು, ಸಿನಿಪ್ರೇಕ್ಷಕರಿಂದ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ.
ಇದನ್ನೂ ಓದಿ : ದಿ ಕೇರಳ ಸ್ಟೋರಿ ಸಿನಿಮಾ ಪ್ರದರ್ಶನ ನಿಷೇಧಿಸುವಂತೆ ಸುಪ್ರೀಂ ಕೋರ್ಟ್‌ನ್ನು ಕೇಳಿದ ಪಶ್ಚಿಮ ಬಂಗಾಳ ಸರಕಾರ
ಇದನ್ನೂ ಓದಿ : ಕೊನೆಗೂ ಮಗಳ ಮುಖ ರಿವೀಲ್ ಮಾಡಿದ ನಟ ಧ್ರುವ ಸರ್ಜಾ : ಮಗು ಎಷ್ಟು ಕ್ಯೂಟ್ ಆಗಿದೆ ಗೊತ್ತಾ ?
ಬೆಂಗಳೂರು ಒರಾಯನ್ ಮಾಲ್, ಮೈಸೂರು ಡಿಸಿಆರ್ ಹಾಗೂ ಶಿವಮೊಗ್ಗದ ಭಾರತ್ ಸಿನಿಮಾಸ್‌ನಲ್ಲಿ ಗುರುವಾರ ಪ್ರೀಮಿಯರ್ ಶೋಗಳನ್ನು ಸಿದ್ದಪಡಿಸಲಾಗಿದೆ. ಆದಿತ್ಯಾ ಆಶ್ರೀ, ಅಭಯ್, ಸುಪ್ರೀತ್ ಭಾರಧ್ವಜ್, ಆಶಿತ್ ಶ್ರೀವತ್ಸ, ಪ್ರೇರಣಾ, ಎಂ.ಎಸ್ ಉಮೇಶ್, ಮಂಡ್ಯ ರಮೇಶ್, ಪೂರ್ಣಚಂದ್ರ ಮೈಸೂರು ಸೇರಿದಂತೆ ಹಲವರು ತಾರಾಗಣವನ್ನು ಈ ಸಿನಿಮಾಕ್ಕಿದೆ. ಇನ್ನು ನವನೀಶ ಶ್ಯಾಮ್ ಸಂಗೀತ, ರಾಹುಲ್ ರಾಯ್ ಛಾಯಾಗ್ರಹಣ ಡೇರ್ ಡೇವಿಲ್ ಮುಸ್ತಾಫಾ ಸಿನಿಮಾಕ್ಕಿದೆ.
Daredevil Musthafa movie: Daredevil Mustafa movie tickets are available for one rupee