ಕನ್ನಡ ಚಿತ್ರರಂಗದಲ್ಲಿಯೇ ಡಾರ್ಲಿಂಗ್ ಕೃಷ್ಣ ಅಂತಾನೇ ಫೇಮಸ್ ಆಗಿರುವ ಸುನಿಲ್ ನಾಗಪ್ಪ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಜಾಕಿ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಪರಿಚಿತರಾದ ಕೃಷ್ಣ ಮದರಂಗಿ ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕರಾಗಿ ಕಾಣಿಸಿಕೊಂಡಿದ್ರು. ಅಲ್ಲದೇ ಮದರಂಗಿ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು.

ಮೈಸೂರಿನಲ್ಲಿ ಹುಟ್ಟಿ ಬೆಳೆದ ಸುನಿಲ್ ನಾಗಪ್ಪ (ಡಾರ್ಲಿಂಗ್ ಕೃಷ್ಣ) ಎಂಬಿಎ ಪದವೀಧರರು. ಎಂಬಿಎ ಪದವಿ ಮಾಡಿದ್ರೂ ಕೂಡ ಬದುಕು ಕಟ್ಟಿಕೊಂಡಿರುವುದು ಸಿನಿಮಾ ರಂಗದಲ್ಲಿ. ಜಾಕಿ, ಮದರಂಗಿ ಸಿನಿಮಾದಲ್ಲಿ ಗೆಸ್ಟ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದ ಕೃಷ್ಣ ದುನಿಯಾ ಸೂರಿ ಅವರ ಜೊತೆ ಸಹಾಯಕ ನಿರ್ದೇಶಕರಾಗಿಯೂ ಕಾಣಿಸಿಕೊಂಡಿದ್ದರು.

ಮದರಂಗಿ ಸಿನಿಮಾದ ಡಾರ್ಲಿಂಗ್ ಡಾರ್ಲಿಂಗ್ ಹಾಡು.. ಸುನಿಲ್ ಅವರಿಗೆ ಡಾರ್ಲಿಂಗ್ ಕೃಷ್ಣ ಅನ್ನುವ ಹೆಸರನ್ನು ತಂದುಕೊಟ್ಟಿತ್ತು. ಮದರಂಗಿ ನಂತರ ನಮ್ ದುನಿಯಾ ನಮ್ ಲೈಫ್, ಜಾಲಿ ಬಾರು ಮಾತು ಪೊಲಿ ಹುಡುಗರು, ರುದ್ರ ತಾಂಡವ, ಚಾರ್ಲಿ, ದೊಡ್ಮನೆ ಹುಡುಗ, ಜಾನ್ ಜಾನಿ ಜನಾರ್ಧನ, ಮುಂಬೈ, ಹುಚ್ಚ -2, ಲವ್ ಮಾಕ್ಟೇಲ್ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಮಾತ್ರವಲ್ಲ ಲವ್ ಮಾಕ್ಟೇಲ್ ಸಿನಿಮಾದಲ್ಲಿ ನಟನೆಯ ಜೊತೆಗೆ ಮೊದಲ ಬಾರಿಗೆ ನಿರ್ದೇಶಕ ಹಾಗೂ ನಿರ್ಮಾಪಕರಾಗಿಯೂ ಕಾಣಿಸಿಕೊಂಡಿದ್ರು. ತನ್ನ ಪ್ರೇಯಸಿ ಮಿಲನಾ ನಾಗರಾಜ್ ಜೊತೆಗೆ ನಟಿಸಿದ್ದ ಕೃಷ್ಣ ಅವರಿಗೆ ಲವ್ ಮಾಕ್ಟೇಲ್ ಸಿನಿಮಾ ಒಳ್ಳೆಯ ಹೆಸರು ತಂದುಕೊಟ್ಟಿದೆ.

ಇದೇ ಹುಮ್ಮಸ್ಸಿನಲ್ಲಿಯೇ ಲವ್ ಮಾಕ್ಟೇಲ್ -2 ಸಿನಿಮಾ ತಯಾರಿಸೋದಕ್ಕೆ ಸಿದ್ದತೆ ನಡೆಸಿದ್ದಾರೆ. ಜೊತೆಗೆ ಲೋಕಲ್ ಟ್ರೈನ್ ಹಾಗೂ ವರ್ಜಿನ್ ಸಿನಿಮಾಗಳು ಇನ್ನಷ್ಟೆ ತೆರೆಗೆ ಬರಲಿದೆ.

ಹಲವು ವರ್ಷಗಳಿಂದಲೂ ನಟಿ, ಮಾಡೆಲ್ ವಿಲನಾ ನಾಗರಾಜ್ ಅವರನ್ನು ಪ್ರೀತಿಸುತ್ತಿರುವ ಕೃಷ್ಣ ಸದ್ಯದಲ್ಲಿಯೇ ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ. ಅಪಾರ ಅಭಿಮಾನಿಗಳನ್ನು ಹೊಂದಿರುವ ಡಾರ್ಲಿಂಗ್ ಕೃಷ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.