Darshan- Renuka swamy Murder case : ಸ್ಯಾಂಡಲ್‌ವುಡ್‌ನ ಚಾಲೆಂಜಿಂಗ್ ಸ್ಟಾರ್ ಎಂದೇ ಕರೆಯಿಸಿಕೊಳ್ಳುವ ನಟ ದರ್ಶನ್ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ದರ್ಶನ್‌ಗೆ ಕಂಗ್ಗಂಟಾಗಿದೆ. ಈ ನಡುವಲ್ಲೇ ನಟ ದರ್ಶನ್ ಪರ ಕಾನೂನು ಸಮರ ನಡೆಸಲು ದರ್ಶನ್ ಮನೆಯವರು ಹೊಸ ಕಂಡಿಷನ್ ಹಾಕಿದ್ದಾರೆ.

ಪವಿತ್ರ ಗೌಡಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಆರೋಪ ಹಿನ್ನೆಲೆಯಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತನನ್ನು ಬೆಂಗಳೂರಿಗೆ ಕರೆತಂದು ದರ್ಶನ್ ಆಂಡ್ ಗ್ಯಾಂಗ್ ಹತ್ಯೆ ನಡೆಸಿತ್ತು. ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆಯೇ ಪವಿತ್ರ ಗೌಡ, ನಟ ದರ್ಶನ್ ಸೇರಿದಂತೆ ಒಟ್ಟು 18 ಮಂದಿ ಆರೋಪಿಗಳು ಅಂದರ್ ಆಗಿದ್ದಾರೆ. ಅಲ್ಲದೇ ಎಲ್ಲರೂ ಕೂಡ ಪರಸ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುವ ವೇಳೆಯಲ್ಲಿ ಪವಿತ್ರ ಗೌಡ ಕೆಲವೊಂದು ವಿಚಾರಗಳನ್ನು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ ಎನ್ನಲಾಗುತ್ತಿದೆ. ಈ ನಡುವಲ್ಲೇ ನಟ ದರ್ಶನ್ ತೂಗುದೀಪ ಮನೆಯವರು ದರ್ಶನ್ ಪರ ಕಾನೂನು ಸಮರ ನಡೆಸಲು ಹೊಸ ಕಂಡಿಷನ್ ಹಾಕಿದ್ದಾರೆ.
ಇದನ್ನೂ ಓದಿ : ಎ ಸಿನಿಮಾ ಸುಂದರಿ ಈಗ ಡಾಕ್ಟರ್: ಚಾಂದಿನಿ ಚಮಕ್ ಕಂಡು ಬೆರಗಾದ ಚಂದನವನ
ದರ್ಶನ್ ಇನ್ನು ಮುಂದೆ ಪವಿತ್ರ ಗೌಡ ಸಹವಾಸ ಬಿಡಬೇಕು. ಅಲ್ಲದೇ ವಿಜಯಲಕ್ಷ್ಮೀ ಅವರ ಜೊತೆಗೆ ಅನ್ಯೋನ್ಯವಾಗಿ ಇರಬೇಕು ಎಂಬ ಕಂಡಿಷನ್‌ಗೆ ದರ್ಶನ್ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಪ್ರಭಾವಿಯೋರ್ವರ ಮನೆಯಲ್ಲಿ ಮಾತುಕತೆ ನಡೆಸಿದ್ದು, ಸದ್ಯ ದರ್ಶನ್ ಪರ ವಾದ ಮಂಡಿಸಲು ವಕೀಲರ ನೇಮಕ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ನಟ ದರ್ಶನ್ ತೂಗುದೀಪ ಜೈಲು ಸೇರಿ ಹಲವು ದಿನಗಳೇ ಕಳೆದಿದೆ. ಇತ್ತ ದರ್ಶನ್ ಜೈಲು ಸೇರಿದ ಬೆನ್ನಲ್ಲೇ ಸಿನಿಮಾ ನಿರ್ಮಾಪಕರು ಕಂಗಾಲಾಗಿದ್ದಾರೆ. ಇನ್ನೊಂದೆಡೆಯಲ್ಲಿ ಇದೇ ಪ್ರಕರಣದಿಂದಾಗಿ ದರ್ಶನ್ ತನ್ನ ಕುಟುಂಬದ ಜೊತೆಗೆ ಉಳಿಯಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎರಡನೇ ಆರೋಪಿ ಆಗಿರುವ ನಟ ದರ್ಶನ್ ಸದ್ಯ ಬಿಡುಗಡೆ ಆಗೋದು ಅನುಮಾನ.
ಇದನ್ನೂ ಓದಿ : ದರ್ಶನ್ ಬಂಧನದಿಂದ ನಿರ್ಮಾಪಕರಿಗೆ ಸಂಕಷ್ಟ : ದರ್ಶನ್ ಸಿನಿಮಾಕ್ಕಾಗಿ ಪಡೆದ ಹಣ ಎಷ್ಟು ಗೊತ್ತಾ ?
ನಟ ದರ್ಶನ್ ಅವರ ಪರ ವಕೀಲರು ಈಗಾಗಲೇ ನ್ಯಾಯಾಲಯಕ್ಕೆ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವೊಂದು ಪ್ರಬಲ ಸಾಕ್ಷ್ಯಗಳು ಲಭ್ಯವಾಗಿರುದ್ದು, ಪೊಲೀಸರು ಇನ್ನೂ ಹಲವು ಸಾಕ್ಷ್ಯಗಳನ್ನು ಕಲೆ ಹಾಕುವ ಕಾರ್ಯವನ್ನು ಮಾಡುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಸಾಕ್ಷಿಧಾರರನ್ನಾಗಿ ಪರಿಗಣಿಸಿದ್ದಾರೆ.
Darshan- Renuka swamy Murder case Big twist New condition for challenging star Darshan Thoogudeepa in jail