ದರ್ಶನ್‌ ಬಂಧನದಿಂದ ನಿರ್ಮಾಪಕರಿಗೆ ಸಂಕಷ್ಟ : ದರ್ಶನ್‌ ಸಿನಿಮಾಕ್ಕಾಗಿ ಪಡೆದ ಹಣ ಎಷ್ಟು ಗೊತ್ತಾ ?

Darshan Thoogudeepa : ನಟ ದರ್ಶನ್‌ ತೂಗುದೀಪ ಬಂಧನವಾಗಿ ಎರಡು ದಿನ ಕಳೆದಿದೆ. ಆದರೆ ದರ್ಶನ್‌ ಬಂಧನ ಇದೀಗ ಸಿನಿಮಾ ನಿರ್ಮಾಪಕರಿಗೆ ಸಂಕಷ್ಟ ತಂದೊಡ್ಡಿದೆ. ಡೆವಿಲ್‌, ಸಿಂಧೂರ ಲಕ್ಷ್ಮಣ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ದರ್ಶನ್‌ ನಟಿಸಬೇಕಿತ್ತು.

Darshan Thoogudeepa : ನಟ ದರ್ಶನ್‌ ತೂಗುದೀಪ ಬಂಧನವಾಗಿ ಎರಡು ದಿನ ಕಳೆದಿದೆ. ಆದರೆ ದರ್ಶನ್‌ ಬಂಧನ ಇದೀಗ ಸಿನಿಮಾ (kannada Movie)  ನಿರ್ಮಾಪಕರಿಗೆ ಸಂಕಷ್ಟ ತಂದೊಡ್ಡಿದೆ. ಡೆವಿಲ್‌ (Devil Kannada Movied), ಸಿಂಧೂರ ಲಕ್ಷ್ಮಣ (Sindoora Lakshmana) ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ದರ್ಶನ್‌ ನಟಿಸಬೇಕಿತ್ತು. ಇದಕ್ಕಾಗಿ ಕೋಟ್ಯಾಂತರ ರೂಪಾಯಿ ಹಣವನ್ನು ದರ್ಶನ್‌ಗೆ ನೀಡಿದ್ದ ನಿರ್ಮಾಪಕರು ತಲೆಮೇಲೆ ಕೈ ಹೊತ್ತು ಕುಳಿತಿದ್ದಾರೆ.

Darshan Thoogudeepa Arrest, Darshan received advance money from Kannada Telugu and Tamil producers for next movie
Image Credit to Original Source

ಸ್ಯಾಂಡಲ್‌ವುಡ್‌ ಬಹು ಬೇಡಿಕೆ ನಟ ಎನಿಸಿಕೊಂಡಿದ್ದ ದರ್ಶನ್‌ ತೂಗುದೀಪ್‌ ಕಾಟೇರ (Katera Movie) ಸಿನಿಮಾ ಸಕ್ಸಸ್‌ ಕಂಡಿತ್ತು. ಇದರ ಬೆನ್ನಲ್ಲೇ ಡೆವಿಲ್‌ ಸಿನಿಮಾ ಸೆಟ್ಟೇರಿತ್ತು. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಯಾಗುವ ಎರಡು ದಿನಗಳ ಮೊದಲಷ್ಟೇ ದರ್ಶನ್‌ ತೂಗುದೀಪ ಬಂಧನವಾಗಿತ್ತು. ಇದರಿಂದಾಗಿ ಸಿನಿಮಾ ನಿರ್ಮಾಪಕರು ಆತಂಕಕ್ಕೆ ಒಳಗಾಗಿದ್ದಾರೆ. ಅಷ್ಟಕ್ಕೂ ದರ್ಶನ್‌ ಯಾವ ನಿರ್ಮಾಪಕರಿಂದ ಎಷ್ಟು ಹಣ ಪಡೆದಿದ್ದಾರೆ ಅಂತಾ ನೋಡೋದಾದ್ರೆ.

ದರ್ಶನ್‌ ಅಭಿನಯದ ಮುಂದಿನ ಸಿನಿಮಾ ಡೆವಿಲ್‌ ಎಲ್ಲಾ ಅಂದುಕೊಂಡಂತೆ ಆಗಿದ್ರೆ ಎರಡನೇ ಹಂತದ ಚಿತ್ರೀಕರಣ ನಡೆಯಬೇಕಾಗಿತ್ತು. ಈಗಾಗಲೇ ಮೊದಲ ಹಂತದ ಶೂಟಿಂಗ್‌ ಮುಗಿಸಿರುವ ಚಿತ್ರತಂಡ ಡಿಸೆಂಬರ್‌ ತಿಂಗಳಲ್ಲಿ ಸಿನಿಮಾ ತೆರೆಗೆ ತರುವ ಲೆಕ್ಕಾಚಾರದಲ್ಲಿತ್ತು. ಡೆವಿಲ್‌ ಸಿನಿಮಾಕ್ಕಾಗಿ 22 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ರು. ಇದಕ್ಕಾಗಿ ನಿರ್ಮಾಪಕರು ಈಗಾಗಲೇ 3 ಕೋಟಿ ರೂಪಾಯಿ ಹಣವನ್ನು ನೀಡಿದ್ದರಂತೆ.

ಇದನ್ನು ಓದಿ : Actor Darshan : ನಟ ದರ್ಶನ್ ಸಿನಿ ಕರಿಯರ್ ಗೆ ಕಂಟಕ : ಸ್ಯಾಂಡಲ್‌ವುಡ್‌ ನಿಂದ ಚಾಲೆಂಜಿಂಗ್‌ ಸ್ಟಾರ್‌ ಬ್ಯಾನ್‌

ಡೆವಿಲ್‌ ಸಿನಿಮಾದ ಮೊದಲ ಹಂತದ ಶೂಟಿಂಗ್‌ ವೇಳೆಯಲ್ಲಿಯೇ ದರ್ಶನ್‌ ಕೈಗೆ ಗಾಯವಾಗಿದ್ದು, ಶಸ್ತ್ರ ಚಿಕಿತ್ಸೆಗೂ ಒಳಗಾಗಿದ್ದರು. ಡೆವಿಲ್‌ ಸಿನಿಮಾದ ಬೆನ್ನಲ್ಲೇ ಮತ್ತೊಂದು ಬಿಗ್‌ ಬಜೆಟ್‌ ಸಿನಿಮಾ ಸಿಂಧೂರ ಲಕ್ಷಣದಲ್ಲಿ ನಟಿಸಬೇಕಿತ್ತು. ಕ್ರಾಂತಿ ಸಿನಿಮಾದ ನಿರ್ಮಾಪಕ ಬಿ ಸುರೇಶ್‌ ನಿರ್ಮಾಣ ಮಾಡುತ್ತಿದ್ದು, ದರ್ಶನ್‌ ಸ್ನೇಹಿತ ತರುಣ್‌ ಸುಧೀರ್‌ ಸಿನಿಮಾ ನಿರ್ದೇಶಿಸಬೇಕಿತ್ತು.

Darshan Thoogudeepa Arrest, Darshan received advance money from Kannada Telugu and Tamil producers for next movie
Smoking Is Injurious To Health
Image Credit to Original Source

ಸಿಂಧೂರ ಲಕ್ಷ್ಮಣ ಸಿನಿಮಾಕ್ಕಾಗಿ ದರ್ಶನ್‌ 3 ರಿಂದ 4 ಕೋಟಿ ರೂಪಾಯಿ ಅಡ್ವಾನ್ಸ್‌ ಪಡೆದುಕೊಂಡಿದ್ದರಂತೆ. ಸಿಂಧೂರ ಲಕ್ಷ್ಮಣ ಮುಗಿಯುತ್ತಿದ್ದಂತೆ ಜೋಗಿ ಪ್ರೇಮ್‌ ನಿರ್ದೇಶನದ ಬಿಗ್‌ ಬಜೆಟ್‌ ಸಿನಿಮಾದಲ್ಲಿ ನಟಿಸಬೇಕಿತ್ತು. ಈ ಸಿನಿಮಾವನ್ನು ಕೆವಿಎನ್‌ ಪ್ರೊಡಕ್ಷನ್ಸ್‌ ನಿರ್ಮಾಣ ಮಾಡಬೇಕಾಗಿತ್ತು. ಈ ಸಿನಿಮಾ ಕ್ಕಾಗಿ ದರ್ಶನ್‌ 5 ಕೋಟಿ ರೂಪಾಯಿ ಅಡ್ವಾನ್ಸ್‌ ಪಡೆದುಕೊಂಡಿದ್ದಂತೆ.

ಇದನ್ನೂ ಓದಿ : ಎ ಸಿನಿಮಾ ಸುಂದರಿ ಈಗ ಡಾಕ್ಟರ್: ಚಾಂದಿನಿ ಚಮಕ್ ಕಂಡು ಬೆರಗಾದ ಚಂದನವನ

ಕೇವಲ ಕನ್ನಡ ಸಿನಿಮಾ ನಿರ್ಮಾಪಕರಷ್ಟೇ ಅಲ್ಲದೇ ತೆಲುಗು, ತಮಿಳು ಸಿನಿಮಾ ನಿರ್ಮಾಪಕರ ಜೊತೆಗೂ ನಟಿಸೋದಾಗಿ ಒಪ್ಪಿಗೆ ಸೂಚಿಸಿದ್ದರು. ಆದರೆ ಈ ಸಿನಿಮಾಗಳ ಶೂಟಿಂಗ್‌ ಆರಂಭವಾಗುವುದಕ್ಕೆ ಇನ್ನೂ ಒಂದು ವರ್ಷಗಳ ಕಾಲಾವಕಾಶವಿತ್ತು. ಕೆಲವು ನಿರ್ಮಾಪಕರಿಂದ ತಲಾ 25 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದರು ಎನ್ನಲಾಗುತ್ತಿದೆ. ಸದ್ಯ ದರ್ಶನ್‌ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದು ಆರೋಪಿಯಾಗಿದ್ದಾರೆ. ಒಂದೊಮ್ಮೆ ಅಪರಾಧಿ ಅನ್ನೋದು ಖಚಿತವಾದ್ರೆ ನಿರ್ಮಾಪಕರು ಹಣವನ್ನು ಕೈಚೆಲ್ಲಬೇಕಾಗುತ್ತದೆ ಅಂತಾ ಗಾಂಧಿನಗರ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ : Darshan – Vijayalakshmi : ಪವಿತ್ರಾ ಜೊತೆ ಮುಗಿಯದ ದರ್ಶನ್ ನಂಟು: ಡಿವೋರ್ಸ್ ನತ್ತ ವಿಜಯಲಕ್ಷ್ಮಿ ಹೆಜ್ಜೆ

Darshan Thoogudeepa Arrest, Darshan received advance money from Kannada Telugu and Tamil producers for next movie

Comments are closed.