Darshan thoogudeepa Case Big Updates : ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ರಾಜಾತಿಥ್ಯದ ಪೋಟೋ, ವಿಡಿಯೋ ವೈರಲ್ ಆಗಿರುವ ಬೆನ್ನಲ್ಲೇ ಮಹತ್ವದ ಬೆಳವಣಿಗೆ ನಡೆಯುತ್ತಿದೆ. ನಟ ದರ್ಶನ್ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಜೊತೆಗೆ ಕಾಣಿಸಿಕೊಂಡಿರುವುದು ಮತ್ತೊಂದು ದಾಸನನ್ನು ಮತ್ತೆ ಸಂಕಷ್ಟಕ್ಕೆ ನೂಕಿದೆ. ಇನ್ನೊಂದೆಡೆಯಲ್ಲಿ ಜೈಲಾಧಿಕಾರಿಗಳಿಗೂ ತಲೆನೋವು ಶುರುವಾಗಿದೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಒಟ್ಟು ೧೮ ಮಂದಿ ಆರೋಪಿಗಳು ಸದ್ಯ ಜೈಲು ಸೇರಿದ್ದಾರೆ. ನಟ ದರ್ಶನ್ ಪರಪ್ಪನ ಅಗ್ರಹಾರದಲ್ಲಿರುವ ಸೆಂಟ್ರಲ್ ಜೈಲಿನಲ್ಲಿದ್ದಾನೆ. ಆದರೆ ಜೈಲನ್ನೇ ದರ್ಶನ್ ರೆಸಾರ್ಟ್ ಮಾಡಿಕೊಂಡು ರಾಜಾತಿಥ್ಯ ಪಡೆದುಕೊಳ್ಳುತ್ತಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.
ಇದನ್ನೂ ಓದಿ : Darshan Thoogudeepa : ನಟ ದರ್ಶನ್ ತೂಗುದೀಪ್‌ಗೆ ಜೈಲಿನಲ್ಲಿ ರಾಜ್ಯಾತಿಥ್ಯ : ವೈರಲ್ ಆಯ್ತು ಪೋಟೋ
ಜೈಲಿನಲ್ಲಿದ್ದರೂ ಕೂಡ ದರ್ಶನ್ ಪಶ್ಚಾತಾಪದಲ್ಲಿ ಇದ್ದಂತೆ ಇಲ್ಲ. ಜೈಲಿನಲ್ಲಿಯೇ ನಟೋರಿಸ್ ರೌಡಿ ವಿಲ್ಸನ್ ಗಾರ್ಡನ್ ನಾಗ ಹಾಗೂ ಕುಳ್ಳ ಸೀನ ಜೊತೆಗೆ ಕುಳಿತು ಸಿಗರೇಟ್ ಸೇದುತ್ತಾ ಟೀ ಕುಡಿಯುತ್ತಿರುವ ಪೋಟೋ ವೈರಲ್ ಆಗಿತ್ತು. ಅಲ್ಲದೇ ದರ್ಶನ್ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿರುವ ವಿಡಿಯೋ ಕೂಡ ಹರಿದಾಡಿತ್ತು.

ಜೈಲಿನಲ್ಲಿ ಅಧಿಕಾರಿಗಳು ಕೊಲೆ ಆರೋಪಿಗಳಿಗೆ ಇಂತಹ ಸೌಲಭ್ಯಗಳನ್ನು ಒದಗಿಸುತ್ತಿರುವುದು ಬಯಲಾಗಿದೆ. ದರ್ಶನ್‌ಗೆ ರಾಜ್ಯಾತಿಥ್ಯ ಸಿಗುತ್ತಿರುವ ಪೋಟೋ, ವಿಡಿಯೋ ವೈರಲ್ ಆಗುತ್ತಿರುವ ಬೆನ್ನಲ್ಲೇ ರಾಜ್ಯದಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನು ಕೊಲೆಯಾಗಿರುವ ಚಿತ್ರದುರ್ಗದ ರೇಣುಕಾಸ್ವಾಮಿ ತಂದೆ ಕಣ್ಣೀರು ಇಟ್ಟಿದ್ದಾರೆ. ತನ್ನ ಮಗನ ಕೊಲೆ ಮಾಡಿರುವಾತನಿಗೆ ಇಷ್ಟೊಂದು ಸೌಲಭ್ಯ ನೀಡುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ರಾಯನ್ ಜೊತೆ ಮೇಘನಾ ರಾಜ್ ಸರ್ಜಾ : ಮಗನ ತುಂಟಾಟದ ವಿಡಿಯೋ ಶೇರ್ ಮಾಡಿದ ನಟಿ
ದರ್ಶನ್ ತೂಗುದೀಪ್ ಜೊತೆಗೆ ಪೋಟೋದಲ್ಲಿ ಕಾಣಿಸಿಕೊಂಡಿರುವ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಅವರಿಬ್ಬರನ್ನು ಬೇರೆಯ ಜೈಲಿಗೆ ಶಿಫ್ಟ್ ಮಾಡುವ ಕಾರ್ಯ ನಡೆಯುತ್ತಿದೆ. ಇನ್ನೊಂದೆಡೆಯಲ್ಲಿ ಘಟನೆಗೆ ಸಂಬಂಧಿಸಿದಂತೆ ಹಿರಿಯ ಅಧಿಕಾರಿಗಳು ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಡಿಜಿಪಿ ಅವರ ಆದೇಶದ ಮೇರೆಗೆ ಎಡಿಜಿಪಿ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.
Darshan thoogudeepa Case Big Updates