ಸೋಮವಾರ, ಏಪ್ರಿಲ್ 28, 2025
HomeCinemaKranti Song Release Case : ಕ್ರಾಂತಿ ಹಾಡು ರಿಲೀಸ್‌ ವೇಳೆ ದರ್ಶನ್‌ ಚಪ್ಪಲಿ ಎಸೆತ...

Kranti Song Release Case : ಕ್ರಾಂತಿ ಹಾಡು ರಿಲೀಸ್‌ ವೇಳೆ ದರ್ಶನ್‌ ಚಪ್ಪಲಿ ಎಸೆತ ಪ್ರಕರಣ : ಮೂವರ ಬಂಧನ

- Advertisement -

ಸ್ಯಾಂಡಲ್‌ವುಡ್‌ ಖ್ಯಾತ ನಟ ದರ್ಶನ್‌ (Darshan Thoogudeepa ) ಹಾಗೂ ಸಿನಿತಂಡ ಬಳ್ಳಾರಿ ಹೊಸಪೇಟೆಯಲ್ಲಿ ಕ್ರಾಂತಿ ಸಿನಿಮಾದ ಎರಡನೇ ಹಾಡು ಬಿಡುಗಡೆ ವೇಳೆ ಚಪ್ಪಲಿ ಎಸೆದಿದ್ದ ಪ್ರಕರಣಕ್ಕೆ (Kranti Song Release Case) ಸಂಬಂಧಿಸಿದಂತೆ ಮೂವರನ್ನು ವಿಜಯನಗರ ಜಿಲ್ಲೆ ಹೊಸಪೇಟೆ ಪೋಲಿಸರು ಬಂಧಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಆರೋಪಿಗಳನ್ನು ಪತ್ತೆ ಹಚ್ಚುವ ಕುರಿತು ಮೂರು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಈ ತಂಡದವರು ಭಾನುವಾರ ಮೂರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಲು ವಿಜಯನಗರ ಜಿಲ್ಲಾ ಎಸ್‌ಪಿ ಮಾರ್ಗದರ್ಶನದಲ್ಲಿ ಹೊಸಪೇಟೆ ಡಿವೈಎಸ್‌ಪಿ ನೇತೃತ್ವದಲ್ಲಿ ಇತರ ಪೊಲೀಸ್‌ ಸಿಬ್ಬಂದಿಗಳು ಇನ್ನೂಳಿದ ಆರೋಪಿಗಳ ಪತ್ತೆ ಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ತೂಗುದೀಪ್‌ ಅವರ ಮೇಲೆ ಡಿಸೆಂಬರ್‌ 18ರ ರಾತ್ರಿ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಕ್ರಾಂತಿ ಸಿನಿಮಾದ ಎರಡನೇ ಹಾಡು ಬಿಡುಗಡೆ ಎಂದು ಬಂದಿದ್ದರು. ಆ ವೇಳೆಯಲ್ಲಿ ಯಾರೋ ಕಿಡಿಗೇಡಿಗಳು ದರ್ಶನ್‌ ಮೇಲೆ ಚಪ್ಪಲಿ ತೂರಿ ತೇಜೋವಧೆ ಮಾಡಲು ಯತ್ನಿಸಿದ್ದಾರೆ. ಇಷ್ಟದಾರೂ ನಟ ದರ್ಶನ್‌ ಮಾತನಾಡಿ, ಆಯ್ತು ಚಿನ್ನ ಎಂದು ಹೇಳಿ ರಚಿತಾ ರಾಮ್‌ಗೆ ಮಾತನಾಡಲು ಮೈಕ್‌ ನೀಡಿದ್ದರು.

ಇದನ್ನೂ ಓದಿ : Actresses Diet Information:ಪಿಟ್‌ ಆಗಿರಲು ನಟಿಯರು ಯಾವೆಲ್ಲಾ ಆಹಾರ ಸೇವನೆ ಮಾಡುತ್ತಾರೆ ಗೊತ್ತಾ?

ಇದನ್ನೂ ಓದಿ : Actor thunisha sharma: ನಟಿ ತುನಿಷಾ ಶರ್ಮಾ ಆತ್ಮಹತ್ಯೆ ಪ್ರಕರಣ : ಮರಣೋತ್ತರ ಪರೀಕ್ಷೆ, ಸಹ ನಟ ಅರೆಸ್ಟ್‌

ಇದನ್ನೂ ಓದಿ : Chalapati Rao passed away : ಟಾಲಿವುಡ್‌ನ ಹಿರಿಯ ನಟ ಚಲಪತಿ ರಾವ್‌ ವಿಧಿವಶ : ಸಂತಾಪ ಸೂಚಿಸಿದ ತೆಲುಗು ಸಿನಿರಂಗದ ಗಣ್ಯರು

ಇದನ್ನೂ ಓದಿ : ಶಿವರಾಜ್‌ ಕುಮಾರ್ 125ನೇ ಸಿನಿಮಾ “ವೇದ”ಗೆ ಭರ್ಜರಿ ರೆಸ್ಪಾನ್ಸ್‌ : ಮೊದಲ ದಿನದ ಗಳಿಕೆ ಎಷ್ಟು ಗೊತ್ತಾ ?

ಈ ಘಟನೆ ನಡೆದ ನಂತರ ಕರ್ನಾಟಕದಾದ್ಯಂತ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿಮಾನಿಗಳು ರೊಚ್ಚಿಗೆದ್ದು ಪ್ರತಿಭಟನೆ ನಡೆಸಿದ್ದರು. ಅಷ್ಟೇ ಅಲ್ಲದೇ ಪ್ರಭಾವಿ ರಾಜಕಾರಿಣಿಗಳು, ಕನ್ನಡ ಸಿನಿರಂಗದ ನಟ-ನಟಿಯರು ಈ ಕೃತ್ಯವನ್ನು ಖಂಡಿಸಿದ್ದರು. ದರ್ಶನ್‌ ಜೊತೆ ನಾವಿದ್ದೇವೆ, ಇಂತಹ ಘಟನೆ ಮತ್ತೆ ಎಂದು ಮರುಕಳಿಸದಿರಲಿ, ಕನ್ನಡ ನಾಡಿನಲ್ಲಿ ಈ ರೀತಿಯ ಹೀನಾಯ ಕೃತ್ಯ ಮಾಡುವವರಿಗೆ ದಿಕ್ಕಾರ ಇರಲಿ ಎಂದಿದ್ದಾರೆ. ದರ್ಶನ್‌ ಮೇಲೆ ಚಪ್ಪಲಿ ಎಸೆದ ಕಿಡಿಗೇಡಿಗಳನ್ನು ಬಂಧಿಸುವಂತೆ ಹಾಗೂ ಕಠಿಣ ಕ್ರಮ ಕೈಗೊಳ್ಳುವಂತೆ ದಾವಣಗೆರೆ, ಗುಂಡ್ಲುಪೇಟೆ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಅಭಿಮಾನಿಗಳು ಕನ್ನಡಪರ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

Darshan Thoogudeepa : Case of throwing Darshan’s shoe during Kranti song release: Three arrested

RELATED ARTICLES

Most Popular