Darshan Thoogudeepa : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ್ ಜೈಲು ಸೇರಿ ಎರಡು ತಿಂಗಳುಗಳೇ ಕಳೆದಿದೆ. ದರ್ಶನ್ ಜೈಲು ಸೇರುತ್ತಿದ್ದಂತೆಯೇ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ರು, ಆದ್ರೀಗ ದರ್ಶನ್‌ಗೆ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿದ್ಯಾ ಅನ್ನೋ ಅನುಮಾನ ವ್ಯಕ್ತವಾಗಿದ್ದು, ರೌಡಿಶೀಟರ್ ಜೊತೆಗೆ ಇರುವ ಪೋಟೋ ಇದೀಗ ವೈರಲ್ ಆಗಿದೆ.

ಕಾಸಿದ್ದವರಿಗೆ ಜೈಲು ಕೂಡ ಮಾವನಮನೆ ಅನ್ನೋ ಮಾತು ಇದೀಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಿಜವಾಗುತ್ತಿದೆ. ಪ್ರಕರಣದ ಪ್ರಮುಖ ಆರೋಪಿಯಾಗಿರುವ ಕನ್ನಡದ ಖ್ಯಾತ ನಟ ದರ್ಶನ್ ತೂಗುದೀಪ್ ಜೈಲಿನಲ್ಲಿ ಸಿಗರೇಟ್ ಸೇದುತ್ತಾ, ಹಾಯಾಗಿರುವ ಪೋಟೋ ವೈರಲ್ ಆಗಿದೆ. ದರ್ಶನ್ ಜೊತೆಯಲ್ಲಿ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ, ದರ್ಶನ್ ಮ್ಯಾನೇಜರ್ ನಾಗರಾಜ್ ಇನ್ನಿತರರ ಜೊತೆಗೆ ರಿಲ್ಯಾಕ್ಸ್ ಆಗಿರುವ ಪೋಟೋ ಸದ್ಯ ಬಾರೀ ಸದ್ದು ಮಾಡುತ್ತಿದೆ.

ವೈರಲ್ ಆಗಿರುವ ಪೋಟೋ ದರ್ಶನ್‌ಗೆ ಸರಕಾರ ಹಾಗೂ ಜೈಲಾಧಿಕಾರಿಗಳು ರಾಜಾತಿಥ್ಯ ನೀಡುತ್ತಿದ್ದಾರೆ ಅನ್ನೋದಕ್ಕೆ ಬಹುದೊಡ್ಡ ಸಾಕ್ಷಿ ಸಿಕ್ಕಂತಾಗಿದೆ. ದರ್ಶನ್ ಒಂದು ಕೈಯಲ್ಲಿ ಕಾಫಿಯ ಕಪ್ ಹಿಡಿದಿದ್ರೆ ಮತ್ತೊಂದು ಕೈಯಲ್ಲಿ ಸಿಗರೇಟ್ ಹಿಡಿದುಕೊಂಡಿದ್ದಾರೆ. ದರ್ಶನ್ ಯಾವುದೋ ಫಾರ್ಮ್ ಹೌಸ್‌ನಲ್ಲಿ ಆರಾಮಾಗಿ ಇರುವಂತೆ ಕಂಡು ಬಂದಿದೆ.
ಇದನ್ನೂ ಓದಿ : ರಾಯನ್ ಜೊತೆ ಮೇಘನಾ ರಾಜ್ ಸರ್ಜಾ : ಮಗನ ತುಂಟಾಟದ ವಿಡಿಯೋ ಶೇರ್ ಮಾಡಿದ ನಟಿ
ಜೈಲಿನಲ್ಲಿರುವ ಕೈದಿ ವೇಲು ಎಂಬಾತ ತನ್ನ ಪತ್ನಿಗೆ ಪೋಟೋ ಶೇರ್ ಮಾಡಿದ್ದು, ಸದ್ಯ ಈ ಪೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದರ್ಶನ್ ಜೈಲು ಸೇರಿದ ನಂತರದಲ್ಲಿ ವಿಲ್ಸನ್ ಗಾರ್ಡನ್ ನಾಗನ ಜೊತೆಗೆ ಸಂಪರ್ಕ ಸಾಧಿಸಲು ಯತ್ನಿಸಿದ್ದ ಅನ್ನೋದು ಮಾಹಿತಿ ಬಹಿರಂಗವಾಗಿದ್ದು, ಇದೀಗ ಪೋಟೋ ನಟೋರಿಸ್ ರೌಡಿ ವಿಲ್ಸನ್ ಗಾರ್ಡನ್ ನಾಗ ಹಾಗೂ ದರ್ಶನ್ ನಡುವಿನ ಸಂಬಂಧಕ್ಕೆ ಸಾಕ್ಷ್ಯವನ್ನು ಒದಗಿಸಿದಂತಿದೆ.
ಇದನ್ನೂ ಓದಿ : Sonu Gowda : ಯಾರೀ ಸೋನು ಗೌಡ ? ಟಿಕ್ ಟಾಕ್ ಸ್ಟಾರ್ ಸೋನುಶ್ರೀನಿವಾಸ್ ಗೌಡ ಅಸಲಿಯತ್ತೇನು ! ಇಲ್ಲಿದೆ Exclusive ಸ್ಟೋರಿ
darshan thoogudeepa Parappana Agrahara Bangalore central Jail Photo Viral