Darshan Thoogudeepa : ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ನಡೆಸಿದ ಪ್ರಕರಣದ ಹಿನ್ನೆಲೆಯಲ್ಲಿ ಜೈಲು ಸೇರಿರುವ ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ್ ಪರಪ್ಪನ ಅಗ್ರಹಾರದಲ್ಲಿ ರಾಜಾತಿಥ್ಯ ವಿಚಾರದ ಹಿನ್ನೆಲೆಯೆಲ್ಲಿ ಇಂದು ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗಿದೆ. ನಟ ದರ್ಶನ್ ಆಗಮನದ ಹಿನ್ನೆಲೆಯಲ್ಲಿ ಬಳ್ಳಾರಿ ಜೈಲಿನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಪರಪ್ಪನ ಅಗ್ರಹಾರ ಜೈಲಿನಿಂದ ಇಂದು ಬೆಳಗ್ಗೆ ಬೊಲೆರೋ ವಾಹನದಲ್ಲಿ ಬಳ್ಳಾರಿ ಜೈಲಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಪರಪ್ಪನ ಅಗ್ರಹಾರ ಜೈಲಿನಿಂದ ಸಿಲ್ಕ್‌ಬೋರ್ಡ್ ಹೆಬ್ಬಾಳ, ಯಲಹಂಕ, ದೇವನಹಳ್ಳಿ ಮಾರ್ಗದಲ್ಲಿ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಪತನಗೊಂಡದಿಂದ ಅನಂತಪುರಂ ಮಾರ್ಗದಲ್ಲಿ ವಾಹನ ಬಳ್ಳಾರಿಗೆ ಸಾಗಲಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆಯಾಗಿರುವ ಹಿನ್ನೆಲೆಯಲ್ಲಿ ದರ್ಶನ್‌ರನ್ನು ಚಿತ್ರದುರ್ಗದ ಮಾರ್ಗದ ಬದಲು ಆಂದ್ರಪ್ರದೇಶದ ಮಾರ್ಗದಲ್ಲಿ ಸ್ಥಳಾಂತರಿಸಲಾಗಿದೆ. ದಾರಿಯುದ್ದಕ್ಕೂ ದರ್ಶನ್ ನೋಡಿದ ಅಭಿಮಾನಿಗಳು ಘೋಷಣೆಗಳನ್ನು ಕೂಗಿದ್ದಾರೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಾಬೀತಾಗಿರುವ ಬೆನ್ನಲ್ಲೇ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರಿದ್ದರು.

ಇದನ್ನೂ ಓದಿ : ಹ್ಯಾಪಿ ಆನ್ಯಿವರ್ಸರಿ ಚಿನ್ನಾ…! ವಿಜಯ್ ರಾಘವೇಂದ್ರ ಪೋಸ್ಟ್ ಗೆ ಅಭಿಮಾನಿಗಳ ಕಣ್ಣೀರು
ಆದರೆ ಪ್ರಕರಣದ ಪ್ರಮುಖ ಆರೋಪಿಗಳಾದ ನಟ ದರ್ಶನ್ ತೂಗುದೀಪ್, ಪವಿತ್ರಾಗೌಡ ಸೇರಿದಂತೆ ಉಳಿದ ಎಲ್ಲಾ ಆರೋಪಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇರಿಸಲಾಗಿತ್ತು. ಆದರೆ ಜೈಲಿನಲ್ಲಿ ದರ್ಶನ್ ಮತ್ತು ಗ್ಯಾಂಗ್‌ಗೆ ರಾಜಾತಿಥ್ಯ ದೊರೆತ ಪೋಟೋ ವೈರಲ್ ಆಗಿತ್ತು. ಜೊತೆಗೆ ದರ್ಶನ್ ವಿಡಿಯೋ ಕಾಲ್‌ನಲ್ಲಿ ಮಾತನಾಡಿರೋ ವಿಚಾರ ಬಹಿರಂಗವಾಗಿತ್ತು.
ಮಾಧ್ಯಮಗಳಲ್ಲಿ ದರ್ಶನ್ ರಾಜಾತಿಥ್ಯ ವಿಚಾರ ಬಹಿರಂಗ ಆಗಿರುವ ಬೆನ್ನಲ್ಲೇ ರಾಜ್ಯ ಸರಕಾರ ಎಚ್ಚೆತ್ತುಕೊಂಡಿದ್ದು, ಆರೋಪಿಗಳನ್ನು ಬೇರೆಡೆಗೆ ಸ್ಥಳಾಂತರಿಸುವ ಕುರಿತು ಅಧಿಕಾರಿಗಳಿಗೆ ಸೂಚಿಸಿತ್ತು. ನ್ಯಾಯಾಲಯದ ಆದೇಶದ ಬೆನ್ನಲ್ಲೇ ಇದೀಗ ದರ್ಶನ್ ಸೇರಿ ಉಳಿದ ಎಲ್ಲಾ ಆರೋಪಗಳನ್ನು ರಾಜ್ಯದ ಬೇರೆ ಬೇರೆ ಜೈಲುಗಳಿಗೆ ಶಿಫ್ಟ್ ಮಾಡಲಾಗಿದೆ.
ಇದನ್ನೂ ಓದಿ : ದರ್ಶನ್‌ಗೆ ಜೈಲಿನಲ್ಲಿ ರಾಜಾತಿ್ಥ್ಯ : ಬಳ್ಳಾರಿಗೆ ಡಿಬಾಸ್, ಯಾರು ಯಾವ ಜೈಲಿಗೆ ಶಿಫ್ಟ್ ? ಇಲ್ಲಿದೆ ಕಂಪ್ಲೀ್ಟ್ ಡಿಟೇಲ್ಸ್
ಬಳ್ಳಾರಿ ಜೈಲಿನಲ್ಲಿ ಹೈ ಅಲರ್ಟ್
ದರ್ಶನ್ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುತ್ತಿರುವ ಹಿನ್ನೆಲೆಯಲ್ಲಿ ಜೈಲಿನಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ದರ್ಶನ್‌ಗೆ ರಾಜ್ಯಾತಿಥ್ಯ ಸಿಕ್ಕ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಬಳ್ಳಾರಿ ಜೈಲಿನಲ್ಲಿ ಪ್ರತ್ಯೇಕ ಬ್ಯಾರಕ್‌ನಲ್ಲಿ ಇರಿಸಲಾಗುತ್ತದೆ. ಅಲ್ಲದೇ ಜೈಲು ಸಿಬ್ಬಂದಿಗಳಿಗೂ ಮೊಬೈಲ್ ನಿಷೇಧಿಸಲಾಗಿದೆ. ಬಳ್ಳಾರಿ ಎಸ್‌ಪಿ ಶೋಭಾರಾಣಿ ಈಗಾಗಲೇ ಜೈಲಿಗೆ ಆಗಮಿಸಿ ಜೈಲಿನ ಅಧೀಕ್ಷಕರ ಜೊತೆಗೆ ಮಾತುಕತೆ ನಡೆಸಿದ್ದಾರೆ.

ಇನ್ನೊಂದೆಡೆಯಲ್ಲಿ ಜಿಲ್ಲಾಧಿಕಾರಿಗಳು ಜೈಲಿಗೆ ಭೇಟಿ ನೀಡಿದ್ದು, ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಚರ್ಚಿಸಿದ್ದಾರೆ. ದರ್ಶನ್ ಆಗಮಿಸಿದ ಕೂಡಲೇ ಆರೋಗ್ಯ ಪರಿಶೀಲನೆ ನಡೆಸಲು ವೈದ್ಯರ ತಂಡವನ್ನು ಜೈಲಿಗೆ ಕರೆಯಿಸಿಕೊಳ್ಳಲಾಗಿದೆ. ಆರೋಗ್ಯ ತಪಾಸಣೆಯ ನಂತರದಲ್ಲಿ ಅವರನ್ನು ಪ್ರತ್ಯೇಕ ಬ್ಯಾರಕ್‌ನಲ್ಲಿ ಇರಿಸಲಾಗುತ್ತದೆ.
ಇದನ್ನೂ ಓದಿ : ರೌಡಿಗಳ ಜೊತೆ ದರ್ಶನ್ ಪೋಟೋ ವೈರಲ್: ಆಪ್ತರ ಬಳಿ ವಿಜಯಲಕ್ಷ್ಮಿ ಕಣ್ಣೀರು
Darshan Thoogudeepa shifted Bengaluru’s Parappana Agrahara Central Jail to Bellary Jail