ಶನಿವಾರ, ಏಪ್ರಿಲ್ 26, 2025
HomeCinemaಪವಿತ್ರಾ ಗೌಡ ಮೈಮೇಲೆ ದರ್ಶನ್‌ ಹಚ್ಚೆ : ಟ್ಯಾಟೂ ನೋಡಿ ಅಭಿಮಾನಿಗಳು ಏನಂದ್ರು ?

ಪವಿತ್ರಾ ಗೌಡ ಮೈಮೇಲೆ ದರ್ಶನ್‌ ಹಚ್ಚೆ : ಟ್ಯಾಟೂ ನೋಡಿ ಅಭಿಮಾನಿಗಳು ಏನಂದ್ರು ?

Darshan Thoogudeepa - Pavitra Gowda : ನಟ ದರ್ಶನ್ ಹಾಗೂ ನಟಿ ಪವಿತ್ರಾ ನಡುವಿನ ಸಂಬಂಧ ಜಗಜ್ಜಾಹಿರಾಗಿದೆ. 10 ವರ್ಷಗಳಿಂದ ಇವರಿಬ್ಬರೂ ಒಟ್ಟಿಗೆ ಬದುಕುತ್ತಿದ್ದರು ಅನ್ನೋದನ್ನು ಸ್ವತಃ ದರ್ಶನ್ ಖಚಿತಪಡಿಸಿದ್ದಾರಂತೆ.

- Advertisement -

Darshan Thoogudeepa – Pavitra Gowda : ನಟ ದರ್ಶನ್ ಹಾಗೂ ನಟಿ ಪವಿತ್ರಾ ನಡುವಿನ ಸಂಬಂಧ ಜಗಜ್ಜಾಹಿರಾಗಿದೆ. 10 ವರ್ಷಗಳಿಂದ ಇವರಿಬ್ಬರೂ ಒಟ್ಟಿಗೆ ಬದುಕುತ್ತಿದ್ದರು ಅನ್ನೋದನ್ನು ಸ್ವತಃ ದರ್ಶನ್ ಖಚಿತಪಡಿಸಿದ್ದಾರಂತೆ. ಅದ್ಯಾವುದೋ ಗಳಿಗೆಯಲ್ಲಿ ಪವಿತ್ರಾಗೆ ಒಲಿದ ದರ್ಶನ್ ಮೇಲೆ ನಟಿ ಪವಿತ್ರಾಗೂ ಪ್ರೀತಿ ಇರೋದು ನಿಜ. ಇದಕ್ಕಾಗೇ ನಟಿ ಪವಿತ್ರಾ ದರ್ಶನ್ ಗಾಗಿ ಅವರ ಪತ್ನಿ ವಿಜಯಲಕ್ಷ್ಮೀಯೂ ಮಾಡದಂತ ಕೆಲಸವೊಂದನ್ನು ಮಾಡಿದ್ದಾರೆ. ಅರೇ ಅದೇನು ಅಂದ್ರಾ ಪವಿತ್ರಾ ದರ್ಶನ್ ಹೆಸರನ್ನು ತಮ್ಮ ದೇಹದ ಹಚ್ಚೆ ಹಾಕಿಸಿಕೊಂಡಿದ್ದಾರೆ.

Darshan Thoogudeepa tattoo on Pavitra Gowdas hand What do fans think of the tattoo
Image Credit to Original Source

ಮದುವೆಯಾಗಿ ಒಂದು ಮಗುವಿನ ತಾಯಿಯಾಗಿರೋ ಪವಿತ್ರಾ ಈಗ ನಟ ದರ್ಶನ್ ಗರ್ಲ್ ಪ್ರೆಂಡ್. ಮೊದಲು ಆರ್ ಆರ್ ನಗರದ ಗಲ್ಲಿಗೆ ಗೊತ್ತಿದ್ದ ಈ ವಿಚಾರ ಈಗ ಜಗತ್ತಿಗೆಲ್ಲಾ ಪ್ರಚಾರಗೊಂಡಿದೆ. ವಿಜಯಲಕ್ಷ್ಮೀಯಂತೆ ಕಾರು, ಬಂಗ್ಲೆ, ವಸ್ತ್ರ, ಒಡವೆ ಕೊಡಿಸಿ ಪವಿತ್ರಾರನ್ನು ಮನದನ್ನೆಯಂತೆ ನೋಡಿಕೊಳ್ತಿದ್ದಾರಂತೆ ದರ್ಶನ್.

ತಮ್ಮ ಪ್ರೀತಿಯ ಅರಗಿಣಿ ತಮ್ಮಿಂದ ದೂರವಾಗಬಾರದು ಅಂತ ಆರ್ ಆರ್ ನಗರದಲ್ಲೇ ಪವಿತ್ರಾಗೆ ಮನೆಯನ್ನು ಕೊಡಿಸಿದ್ದಾರಂತೆ. ಅಷ್ಟೇ ಅಲ್ಲ ವಿಜಯಲಕ್ಷ್ಮೀ ಬಳಿ ಇರೋವಂತದ್ದೇ ಒಡವೆ, ಸೀರೆ ಕೋಟ್ಯಾಂತರ ರೂಪಾಯಿಯ ಕಾರನ್ನು ಪವಿತ್ರಾಗೆ ಕೊಡಿಸಿದ್ದಾರಂತೆ.

ಇದನ್ನೂ ಓದಿ : ನಟ ದರ್ಶನ್‌ ಕೇಸ್‌ಗೆ ಬಿಗ್‌ ಟ್ವಿಸ್ಟ್‌ : ಜೈಲಲ್ಲಿರುವ ಚಾಲೆಂಜಿಂಗ್‌ ಸ್ಟಾರ್‌ಗೆ ಹೊಸ ಕಂಡಿಷನ್‌

ಇಷ್ಟೆಲ್ಲ ಪ್ರೀತಿಸೋ ದರ್ಶನ್ ರನ್ನು ಪವಿತ್ರಾ ತಮ್ಮ ಮನಸ್ಸಾರೆ ಇಷ್ಟಪಟ್ಟು ಗಂಡನಂತೆ ನೋಡಿಕೊಳ್ತಾರಂತೆ. ಪವಿತ್ರಾ ಹಾಗೂ ಸಂಜಯ್ ದಂಪತಿಯ ಮಗುಗೂ ದರ್ಶನ್ ತಂದೆಯಂತೆ ಪ್ರೀತಿ ತೋರಿಸುತ್ತಾರಂತೆ. ಮೂಲಗಳ ಮಾಹಿತಿ ಪ್ರಕಾರ ನಟ ದರ್ಶನ್ ಪವಿತ್ರಾ ಜೀವನೋಪಾಯಕ್ಕಾಗಿ ಆರ್ ಆರ್ ನಗರದಲ್ಲಿ ರೆಡ್ ಕಾರ್ಪೆಟ್ ಅನ್ನೋ ಬೂಟಿಕ್ ಕೂಡ ನಿರ್ಮಿಸಿಕೊಟ್ಟಿದ್ದಾರೆ.

Darshan Thoogudeepa tattoo on Pavitra Gowdas hand What do fans think of the tattoo
Image Credit to Original Source

ಹೀಗೆ ಅಧಿಕೃತವಾಗಿ ಮದುವೆಯಾಗದೇ ಇದ್ದರೂ ಅಪ್ಪಟ ಗಂಡ-ಹೆಂಡತಿಯಂತೆ ಬಾಳ್ತಿರೋ ಪವಿತ್ರಾ ಹಾಗೂ ದರ್ಶನ್ ಈಗ ಅದೇ ಪ್ರೀತಿ ಪ್ರೇಮದ ಕಾರಣಕ್ಕೆ ಜೈಲ್ ನಲ್ಲಿ ಮುದ್ದೆ ಮುರಿತಿದ್ದಾರೆ. ಆದರೆ ನಟ ದರ್ಶನ್ ರನ್ನು ಅಪಾರವಾಗಿ ಪ್ರೀತಿಸೋ ಪವಿತ್ರಾ ಅವರ ಹೆಸರನ್ನು ತಮ್ಮ ಕೈ , ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ.

ಇದನ್ನೂ ಓದಿ : ಶ್ರೀರಸ್ತು ಶುಭಮಸ್ತು 50ರ ತುಳಸಿ ಗರ್ಭಿಣಿ, ಅಮೃತಧಾರೆಯ 30ರ ಹರೆಯದ ಭೂಮಿಕಾಗೆ ಮಕ್ಕಳಾಗಲ್ವಂತೆ ! ಹೇಗೆ ಸಾಧ್ಯ ಎಂದ ವೀಕ್ಷಕರು

ಪವಿತ್ರಾ ಎಡಗೈನ ಹೆಬ್ಬೆರಳ ಮೇಲೆ ಡಿ ಎಂಬ ದರ್ಶನ್ ಹೆಸರಿನ ಮೊದಲ ಅಕ್ಷರದ ಹಚ್ಚೆ ಇಂಗ್ಲೀಷ್ ನಲ್ಲಿದೆ. ಇದನ್ನು ಪವಿತ್ರಾ ದರ್ಶನ್ ಮೇಲಿನ ಪ್ರೀತಿಗೆ ಹಾಕಿಸಿಕೊಂಡಿದ್ದಾರಂತೆ. ಇಷ್ಟು ದಿನಗಳ ಕಾಲ ಈ ಸಂಗತಿ ಬಯಲಾಗಿರಲಿಲ್ಲ.

ವಿಶ್ವ ಮಗಳ ದಿನಾಚರಣೆ ಅಂಗವಾಗಿ ನಟಿ ಪವಿತ್ರಾ ಪುತ್ರಿ ಖುಷಿ ತಾಯಿಯೊಂದಿಗಿನ ಪೋಟೋ ಹಾಗೂ ವಿಡಿಯೋ ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ನಟಿ ಪವಿತ್ರಾ ಕೈಯಲ್ಲಿ ಡಿ ಹೆಸರಿನ ಟ್ಯಾಟೂ ಇರೋದು ಕಂಡಿದೆ. ಇನ್ನೂ ಈ ವಿಡಿಯೋ ನೋಡಿದ ಹಲವು ಅಯ್ಯೋ ಅತ್ತಿಗೆ ನೀವುಅಣ್ಣನ್ನಾ ಇಷ್ಟು ಪ್ರೀತಿಸ್ತಿರಾ ಅಂದಿದ್ರೇ, ಇನ್ನೂ ಹಲವರು ಥೂ ಬೇರೆ ಹೆಣ್ಣುಮಗಳ ಜೀವನ ಹಾಳು ಮಾಡಿದ್ರಲ್ಲಾ ನಿಮ್ಮದೊಂದು ಜೀವನನಾ ಅಂತ ಬೈತಿದ್ದಾರೆ.

Darshan Thoogudeepa tattoo on Pavitra Gowda’s hand What do fans think of the tattoo

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular