ಸೋಮವಾರ, ಏಪ್ರಿಲ್ 28, 2025
HomeCinemaಡಿಬಾಸ್‌ವಿರುದ್ಧ ನಡಿತೀದ್ಯಾ ಪಿತೂರಿ : ನಿರ್ಮಾಪಕರಿಗೆ ಬೆದರಿಕೆ ಹಾಕಿದ್ರಾ ದರ್ಶನ್‌ ? ಎರಡು ವರ್ಷದ ಹಿಂದಿನ...

ಡಿಬಾಸ್‌ವಿರುದ್ಧ ನಡಿತೀದ್ಯಾ ಪಿತೂರಿ : ನಿರ್ಮಾಪಕರಿಗೆ ಬೆದರಿಕೆ ಹಾಕಿದ್ರಾ ದರ್ಶನ್‌ ? ಎರಡು ವರ್ಷದ ಹಿಂದಿನ ಆಡಿಯೋಗೆ ಮರು ಜೀವ, ಏನಿದು ವಿವಾದ

- Advertisement -

ನಟ ದರ್ಶನ ಮತ್ತೊಮ್ಮೆ ತಮ್ಮ ಸಿನಿಮಾ ರಿಲೀಸ್ ವೇಳೆಯಲ್ಲೇ ವಿವಾದಕ್ಕೆ ಸಿಲುಕಿದ್ದಾರೆ.‌ಇತ್ತೀಚಿಗಷ್ಟೇ ನಟ ಪುನೀತ್ ರಾಜ್ ಕುಮಾರ್ ಬಗ್ಗೆ ಲಘುವಾಗಿ ಮಾತಾಡಿದ್ದಾರೆ ಎಂಬ ಆರೋಪ ಕೇಳಿ ಬಂದ ಬೆನ್ನಲ್ಲೇ ದರ್ಶನ ವಿರುದ್ಧ(Darshan Thoogudeepa threatened) ನಿರ್ಮಾಪಕರೊಬ್ಬರಿಗೆ ಜೀವ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ. ಮಾತ್ರವಲ್ಲ ಈ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಯುವ ನಟನೊಬ್ಬನಿಗೆ ಸಿನಿಮಾ ನಿರ್ಮಿಸ ಬೇಕಿದ್ದ ನಿರ್ಮಾಪಕರು ಸಿನಿಮಾ ಘೋಷಿಸಿ ತಮ್ಮ ವೈಯಕ್ತಿಕ ಸಮಸ್ಯೆಗಳಿಂದಾಗಿ ಸಿನಿಮಾ ನಿರ್ಮಿಸಿರಲಿಲ್ಲ. ಇದೇ ವಿಚಾರಕ್ಕೆ ದರ್ಶನ್ ಆ ನಿರ್ಮಾಪಕರಿಗೆ ದೂರವಾಣಿ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ನಿರ್ಮಾಪಕ ಭರತ್ ಎಂಬುವವರು ಕಳೆದ ಎರಡು ವರ್ಷದ ಹಿಂದೆ ಭಗವಾನ್ ಶ್ರೀಕೃಷ್ಣ ಪರಮಾತ್ಮ ಎಂಬ ಸಿನಿಮಾ ಘೋಷಿಸಿದ್ದರು. ಈ ಸಿನಿಮಾಕ್ಕೆ ಧೃವನ್ ( ಸೂರಜ್ ) ನಾಯಕರಾಗಿ ಆಯ್ಕೆಯಾಗಿದ್ದರು. ಆದರೆ ಸಿನಿಮಾ‌ ಮುಹೂರ್ತ ನೆರವೇರಿತ್ತು ಬಿಟ್ಟರೇ ಶೂಟಿಂಗ್ ಆರಂಭವಾಗಿರಲಿಲ್ಲ. ಹಣಕಾಸಿನ ಸಮಸ್ಯೆಯಿಂದ ಸಿನಿಮಾ ಚಿತ್ರೀಕರಣ ಸ್ಥಗಿತಗೊಂಡಿದೆ ಎಂದು ನಿರ್ಮಾಪಕ ಭರತ್ ನಾಯಕ ನಟ ಧೃವನ್ ಗೆ ಹೇಳಿದ್ದಾರೆ ಎನ್ನಲಾಗಿದೆ. ಇದೇ ವಿಚಾರಕ್ಕೆ ನಾಯಕ ದರ್ಶನ್ ರಿಂದ ನಿರ್ಮಾಪಕ ಭರತ್ ಗೆ ಪೋನ್ ಕರೆ ಮಾಡಿಸಿದ್ದಾರೆ.

ಈ ವೇಳೆ ನಟ ದರ್ಶನ್ ನಾಯಕನಟನಾಗಿರೋ ಧೃವನ್ ಪ್ಯೂಚರ್ ಬಗ್ಗೆ ಕಾಳಜಿ ತೋರಿದ್ದು, ನೀನು ಹೀಗೆ ಸಿನಿಮಾ ಘೋಷಿಸಿ ನಿಲ್ಲಿಸಿದರೇ ಅವನ ಕೆರಿಯರ್ ಕತೆ ಏನು ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಕೊನೆಯಲ್ಲಿ ಎಲ್ಲಾ ಸರಿ ಮಾಡಿಕೊಂಡರೇ ಮಾತನಾಡಲಾದರೂ ನೀನು ಇರುತ್ತೀಯಾ. ಇಲ್ಲದಿದ್ದರೆ ನೀನೇ ಇರದಂತೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ದರ್ಶನ್ ಮಾತನಾಡಿದ್ದು ಎನ್ನಲಾದ ಆಡಿಯೋವೊಂದು ವೈರಲ್ ಆಗಿದೆ. ಈ ಸಂಬಂಧ ಭಗವಾನ ಶ್ರೀಕೃಷ್ಣ ಪರಮಾತ್ಮ ಸಿನಿಮಾ ನಿರ್ಮಾಪಕ ಭರತ್ ಕೆಂಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಆದರೆ ಪೊಲೀಸರು ಕೇವಲ ಎನ್ ಸಿ ಅರ್ ದಾಖಲಿಸಿಕೊಂಡಿದ್ದಾರೆ. ಇದು ಲಾಕ್ ಡೌನ್ ಗೂ ಮೊದಲು ನಡೆದ ಮಾತುಕತೆಯಾಗಿದೆ. ಆದರೆ ಈಗ ದರ್ಶನ್ ಮತ್ತೆ ಪ್ರಚಾರಕ್ಕೆ ಬರ್ತಿರೋದರಿಂದ ಹಾಗೂ ಅವರ ಕ್ರಾಂತಿ ಸಿನಿಮಾ ಸಖತ್ ಸದ್ದು ಮಾಡ್ತಿರೋದರಿಂದ ವೃತ್ತಿ ಬದುಕಿಗೆ ಕಂಟಕ ತರೋ ದೃಷ್ಟಿಯಿಂದ ಯಾರೋ ಭರತ್ ರನ್ನು ಪುಸಲಾಯಿಸಿ ದೂರು ಕೊಡಿಸಿದ್ದಾರೆ. ಇದರ ಹಿಂದೆ ವೃತ್ತಿ ವೈಷಮ್ಯ ಅಡಗಿದೆ ಎಂಬ ಆರೋಪವೂ ಕೇಳಿಬಂದಿದೆ. ಒಟ್ಟಿನಲ್ಲಿ ನಟ ದರ್ಶನ್ ಮತ್ತೊಂದು ವಿವಾದದ ಮೂಲಕ ಸದ್ದು ಮಾಡಿದ್ದಾರೆ.

ಇದನ್ನೂ ಓದಿ : Taapsee Pannu : ಕಾಫಿ ವಿತ್ ಕರಣ್ ಗೆ ಹೋಗೋಕೆ ಸೆಕ್ಸ್ ಲೈಫ್ ಇಂಟ್ರಸ್ಟಿಂಗ್ ಆಗಿರಬೇಕು: ತಾಪ್ಸೆ ಪನ್ನು ಹೊಸ ವಿವಾದ

ಇದನ್ನೂ ಓದಿ : Hara Ghara Tiranga Abhiyan : ಹರ ಘರ ತಿರಂಗಾ ಅಭಿಯಾನ : ಕಿಚ್ಚ ಸುದೀಪ್‌ ನಿವಾಸ ತಲುಪಿದ ತ್ರಿವರ್ಣ ಧ್ವಜ

Darshan Thoogudeepa threatened the producer, Conspiracy to act against D Boss Audio Viral

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular