(Dharani Mandala Madhyadolage Movie)ಶ್ರೀಧರ್ ಶಿಕಾರಿಪುರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬಂದ ‘ಧರಣಿ ಮಂಡಲ ಮಧ್ಯದೊಳಗೆ’ ಸಿನಿಮಾ ಬಿಡುಗಡೆಯಾಗಿ ಎಲ್ಲೆಡೆ ದೊಡ್ಡ ಮಟ್ಟದ ರೆಸ್ಪಾನ್ಸ್ ಪಡೆದುಕೊಂಡಿದೆ. ಮೊದಲ ಸಿನಿಮಾದಲ್ಲೇ ಚಿತ್ರರಂಗಕ್ಕೆ ತಾವೊಬ್ಬ ಭರವಸೆಯ ನಿರ್ದೇಶಕನಾಗಬಲ್ಲೇ ಎಂಬುದನ್ನು ಸಾಬೀತು ಮಾಡಿದ್ದಾರೆ ಶ್ರೀಧರ್ ಶಿಕಾರಿಪುರ. ಚಿತ್ರದ ಬಗ್ಗೆ ಉತ್ತಮ ವಿಮರ್ಶೆ ಕೇಳಿ ಬಂದಿದ್ದು, ಸಿನಿಮಾ ನೋಡಿದ ಪ್ರತಿಯೊಬ್ಬ ಪ್ರೇಕ್ಷಕರು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಡಿಸೆಂಬರ್ 2ರಂದು ಬಿಡುಗಡೆಯಾದ ಈ ಚಿತ್ರ ಇದೀಗ ಪ್ರೇಕ್ಷಕರ ಪ್ರೀತಿಯಿಂದ 25ನೇ ದಿನದತ್ತ ಹೆಜ್ಜೆ ಇಟ್ಟಿದೆ.
(Dharani Mandala Madhyadolage Movie)‘ಗುಳ್ಟು’ ಸಿನಿಮಾ ಖ್ಯಾತಿಯ ನವೀನ್ ಶಂಕರ್, ಐಶಾನಿ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಯಶ್ ಶೆಟ್ಟಿ, ಸಿದ್ದು ಮೂಲಿಮನಿ, ಪ್ರಕಾಶ್ ತುಮ್ಮಿನಾಡು, ಓಂಕಾರ್, ನಿತೇಶ್ ಮಹಾನ್, ಜಯಶ್ರೀ ಆರಾಧ್ಯ, ಶಾಂಭವಿ ಒಳಗೊಂಡ ತಾರಾಗಣವಿದೆ. ಕ್ರೈಂ ಥ್ರಿಲ್ಲರ್ ಕಥಾಹಂದರ ಒಳಗೊಂಡ ಈ ಚಿತ್ರದ ಚಿತ್ರಕಥೆ ಸಾಕಷ್ಟು ಪ್ರಶಂಸೆಗೆ ವ್ಯಕ್ತವಾಗಿದೆ. ಗುಳ್ಟು ನಂತರ ಮತ್ತೊಮ್ಮೆ ನವೀನ್ ಶಂಕರ್ ತಮ್ಮ ಭರವಸೆಯ ನಟನೆಯ ಮೂಲಕ ಗಮನ ಸೆಳೆದ್ರೆ, ಐಶಾನಿ ಶೆಟ್ಟಿ ಡಿಫ್ರೆಂಟ್ ರೋಲ್ ನಲ್ಲಿ ಮನಗೆದ್ದಿದ್ದಾರೆ. ಚಿತ್ರದ ಪ್ರತಿ ಪಾತ್ರವರ್ಗವೂ ಅಚ್ಚುಕಟ್ಟಾದ ನಟನೆ ಮೂಲಕ ಸಿನಿಮಾ ತೂಕವನ್ನು ಹೆಚ್ಚಿಸಿದ್ದು, ಡಾಲಿ ಧನಂಜಯ್, ಶೃತಿ ಹರಿಹರನ್ ಸೇರಿದಂತೆ ಚಿತ್ರರಂಗದ ಅನೇಕ ಕಲಾವಿದರು ಸಿನಿಮಾ ನೋಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಪ್ರೇಕ್ಷಕ ಪ್ರಭು ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದು ಅದರ ಫಲವಾಗಿ ಸಿನಿಮಾ 25ನೇ ದಿನದತ್ತ ಯಶಸ್ವಿಯಾಗಿ ಹೆಜ್ಜೆ ಇಟ್ಟಿದೆ.
ಇದನ್ನೂ ಓದಿ:“ನವರಸ ನಟನ ಸಾರ್ವಭೌಮ” ಕೈಕಾಲ ಸತ್ಯನಾರಾಯಣ ವಿಧಿವಶ
‘ಧರಣಿ ಮಂಡಲ ಮಧ್ಯದೊಳಗೆ’ ಚಿತ್ರವನ್ನು ಬಾಕ್ಸ್ ಆಫೀಸ್ ಸಿನಿ ಕ್ರಿಯೇಷನ್ಸ್ ಬ್ಯಾನರ್ ನಡಿ ಒಂಕಾರ್ ನಿರ್ಮಾಣ ಮಾಡಿದ್ದು. ವೀರೇಂದ್ರ ಕಂಚನ್, ಗೌತಮಿ ರೆಡ್ಡಿ ಸಹ ನಿರ್ಮಾಣವಿದೆ. ಕೀರ್ತನ್ ಪೂಜಾರಿ ಕ್ಯಾಮೆರಾ ವರ್ಕ್, ರೋಣದ ಬಕ್ಕೇಶ್, ಕಾರ್ತಿಕ್ ಚೆನ್ನೋಜಿರಾವ್ ಸಂಗೀತ ನಿರ್ದೇಶನ, ಉಜ್ವಲ್ ಚಂದ್ರ ಸಂಕಲನ ಚಿತ್ರಕ್ಕಿದೆ.
Dharani Mandala Madhyadolage Movie released on December 2 has now entered the 25th day with the love of the audience.