ಸ್ಯಾಂಡಲ್‌ವುಡ್ ಲೂಸಿಯಾ ಹಾಗೂ ಯು-ಟರ್ನ್ ಸಿನಿಮಾ ಖ್ಯಾತಿಯ ಪವನ್ ಕುಮಾರ್ ವಿಭಿನ್ನ ಕಥೆಯನ್ನು ತರುವುದರಲ್ಲಿ ಯಾವಗಲೂ ಮೂಂಚೂಣಿಯಲ್ಲಿ ಇರುತ್ತಾರೆ. ಇದೀಗ ಪವನ್ ಕುಮಾರ್ ನಿರ್ದೇಶನದಲ್ಲಿ ಧೂಮಮ್ ಸಿನಿಮಾವನ್ನು (Dhoomam first look release) ಹೊಂಬಾಳೆ ಫಿಲ್ಮ್ ಸಂಸ್ಥೆಯವರು ಘೋಷಿಸಿದ್ದಾರೆ. ಇಂದು (ಏಪ್ರಿಲ್ 17) ಈ ಸಿನಿಮಾದ ಫಸ್ಟ್ ಲುಕ್‌ನ್ನು ರಿಲೀಸ್ ಮಾಡಿದ್ದಾರೆ.
ನಿರ್ದೇಶಕ ಪವನ್ ಕುಮಾರ್ ಟ್ವೀಟ್‌ನಲ್ಲಿ, “ಬೆಂಕಿಯಿಲ್ಲದೆ ಹೊಗೆ ಇಲ್ಲ, ಇಲ್ಲಿ ಮೊದಲ ಕಿಡಿ. ಧೂಮಮ್ ಫಸ್ಟ್ ಲುಕ್.” ಎಂದು ಪೋಸ್ಟರ್‌ನ್ನು ಹಂಚಿಕೊಂಡಿದ್ದಾರೆ. ಇನ್ನು ಈ ಸಿನಿಮಾಕ್ಕೆ ಹೆಸರಾಂತ ನಟ ಫಹದ್ ಫಾಸಿಲ್ ನಾಯಕ ನಟರಾಗಿ ಅಭಿನಯಿಸಲಿದ್ದಾರೆ. ಈ ಸಿನಿಮಾದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೃತೆ ಅಪರ್ಣಾ ಬಾಲಮುರಳಿ ನಾಯಕಿಯಾಗಿದ್ದಾರೆ. ಈ ಹಿಂದೆ ಟೈಸನ್ ಅವರ ಭವ್ಯವಾದ ಘೋಷಣೆ ನಂತರ, ಪವನ್ ಕುಮಾರ್ ನಿರ್ದೇಶನದ ಧೂಮಮ್ ಸಿನಿಮಾ ಮಲಯಾಳಂ ಸಿನಿರಂಗದಲ್ಲಿ ಹೊಂಬಾಳೆ ಅವರ ಎರಡನೇ ಸಿನಿಮಾವಾಗಿದೆ.
There is no smoke without fire, here is the first spark.
— Hombale Films (@hombalefilms) April 17, 2023
Presenting #Dhoomam First Look 🔥#DhoomamFirstLook#FahadhFaasil @pawanfilms #VijayKiragandur @aparnabala2 @hombalefilms @HombaleGroup @Poornac38242912 #PreethaJayaraman @AneesNadodi @roshanmathew22 #VineethRadhakrishnan… pic.twitter.com/t42D2Dj2c4
ಇದನ್ನೂ ಓದಿ : ಸರಿಗಮಪ ಸೀಸನ್ 19 : ಫಿನಾಲೆ ಗೆದ್ದ ಹಳ್ಳಿ ಪ್ರತಿಭೆ ಪ್ರಗತಿ ಬಡಿಗೇರ್
ಇದನ್ನೂ ಓದಿ : ಗೋವುಗಳೊಂದಿಗೆ ಮಗ ರಣ್ವಿತ್ ಶೆಟ್ಟಿ ಹುಟ್ಟುಹಬ್ಬ ಆಚರಿಸಿದ ಕಾಂತಾರ ನಟ ರಿಷಬ್ ಶೆಟ್ಟಿ
ಮೂಲಗಳ ವರದಿ ಪ್ರಕಾರ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ತೆರೆ ಕಾಣಲಿದ್ದು, ಟಾಪ್ ನಟರು ಹಾಗೂ ತಂತ್ರಜ್ಞರನ್ನು ಒಳಗೊಂಡಿದೆ. ಇನ್ನು ಈ ಕುರಿತಂತೆ ಹೆಚ್ಚಿನ ವಿವರಗಳನ್ನು ಸಿನಿತಂಡ ಶೀಘ್ರದಲ್ಲೇ ಬಹಿರಂಗಪಡಿಸಲಿದ್ದಾರೆ. ಈ ಸಿನಿಮಾಕ್ಕಾಗಿ ನಿರ್ದೇಶಕ ಪವನ್ ಕುಮಾರ್ ಹೊಸ ಪರಿಕಲ್ಪನೆ ಕಥೆಯನ್ನು ಹಣೆದಿದ್ದಾರೆ. ಖ್ಯಾತ ಛಾಯಗ್ರಾಹಕಿ ಪ್ರೀತಾ ಜಯರಾಮನ್ ಅವರ ಛಾಯಾಗ್ರಹಣ ಹಾಗೂ ಪೂರ್ಣಚಂದ್ರ ತೇಜಸ್ವಿ ಅವರ ಉತ್ತಮ ಹಿನ್ನಲೆ ಸಂಗೀತ ಕೂಡ ಈ ಸಿನಿಮಾಕ್ಕಿದೆ. ಈ ಸಿನಿಮಾ ಶೂಟಿಂಗ್ ಅಕ್ಟೋಬರ್ 9ರಿಂದ ಪ್ರಾರಂಭವಾಗಲಿದ್ದು, ಮಲಯಾಳಂ, ಕನ್ನಡ, ತಮಿಳು ಮತ್ತು ತೆಲುಗು ನಾಲ್ಕು ಭಾಷೆಗಳಲ್ಲಿ ತೆರೆ ಕಾಣಲಿದೆ ಎಂದು ಸಿನಿತಂಡ ತಿಳಿಸಿದೆ.
ಇದನ್ನೂ ಓದಿ : ನಾಳೆ ಡಾರ್ಲಿಂಗ್ ಕೃಷ್ಣ ಅಭಿನಯದ ಕೌಸಲ್ಯಾಸುಪ್ರಜಾರಾಮ ಸಿನಿಮಾದ ಫಸ್ಟ್ ಸಾಂಗ್ ರಿಲೀಸ್
ಇದನ್ನೂ ಓದಿ : ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್ : ಕಾಂತಾರ ಶಿವ ರಿಷಬ್ ಶೆಟ್ಟಿಗೆ ಬೆಸ್ಟ್ ಆಕ್ಟರ್ ಪ್ರಶಸ್ತಿ
Dhoomam first look released by Hombale Film Company