ಸಿನಿಮಾ ಅಭಿಮಾನಿಗಳಿರೋದು, ತಮ್ಮ ಪ್ರೀತಿ,ಅಭಿಮಾನ ತೋರಿಸಿಕೊಳ್ಳೋಕೆ ಅಭಿಮಾನಿಗಳು ಇನ್ನಿಲ್ಲದ ಸರ್ಕಸ್ ಮಾಡೋದು ಕಾಮನ್. ಆದರೆ ಸ್ಟಾರ್ ನಟ-ನಟಿಯರಿಗೂ ಸ್ನೇಹಿತರ ಮೇಲೆ ಪ್ರೀತಿ,ಅಭಿಮಾನ ಇರುತ್ತೆ ಅನ್ನೋದು ಅಷ್ಟೇ ಸಹಜ. ಇದಕ್ಕೆ ಸಾಕ್ಷಿ ಎಂಬಂತೆ ಸ್ಯಾಂಡಲ್ ವುಡ್ ನ ಆಕ್ಷ್ಯನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಸ್ನೇಹಿತನ ಬರ್ತಡೆಗೆ ಅದ್ದೂರಿ ಗಿಫ್ಟ್ ಕೊಟ್ಟು ಸಂಭ್ರಮಿಸಿದ್ದಾರೆ.
ನಟ ಧ್ರುವ ಸರ್ಜಾ ಹಾಗೂ ಚಿರು ಸರ್ಜಾ ಇಬ್ಬರಿಗೂ ಸ್ನೇಹಿತರು ಎಂದರೇ ಪ್ರಾಣ. ಬಾಲ್ಯದಿಂದಲೂ ತಮ್ಮೊಂದಿಗಿರುವ ಸ್ನೇಹಿತರನ್ನು ಸ್ಟಾರ್ ಪಟ್ಟಕ್ಕೇರಿದ ಮೇಲೂ ಉಳಿಸಿಕೊಂಡಿರೋ ಧ್ರುವ ಸರ್ಜಾ ಸ್ನೇಹಿತರ ಜೊತೆ ಆಗಾಗ ಔಟಿಂಗ್ ಹೋಗೋದನ್ನೂ ಮರೆಯೋದಿಲ್ಲ. ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿರೋ ನಟ ಧ್ರುವ ಸರ್ಜಾ ತಮ್ಮ ಪ್ರೀತಿಯ ಸ್ನೇಹಿತನ ಹುಟ್ಟುಹಬ್ಬಕ್ಕೆ 40 ಲಕ್ಷದ ಕಾರ್ ಗಿಫ್ಟ್ ಕೊಟ್ಟು ಸ್ನೇಹಕ್ಕೊಂದು ಹೊಸಭಾಷ್ಯ ಬರೆದಿದ್ದಾರೆ.

ಧ್ರುವ ಸರ್ಜಾ ಸ್ನೇಹಿತ ಅಶ್ವಿನ್ ಬರ್ತಡೇ ಸಂಭ್ರಮದಲ್ಲಿದ್ದು, ಹುಟ್ಟುಹಬ್ಬ ಆಚರಿಸಿಕೊಳ್ತಿರೋ ಅಶ್ವಿನ್ ಗೆ ಧ್ರುವ ಸರ್ಜಾ ಸಪ್ರೈಸ್ ಆಗಿ 40 ಲಕ್ಷ ಬೆಲೆಯ ಟೊಯೋಟಾ ಫಾರ್ಚೂನರ್ ಕಾರ್ ನ್ನು ಗಿಫ್ಟ್ ಮಾಡಿದ್ದಾರೆ. ಸ್ಯಾಂಡಲ್ ವುಡ್ ಬಹು ಬೇಡಿಕೆಯ ನಟರಾಗಿರೋ ಧ್ರುವ ಸರ್ಜಾ ತನ್ನ ಹುಟ್ಟುಹಬ್ಬ ಸಂಭ್ರಮಿಸಿದ್ದು ಮಾತ್ರವಲ್ಲದೇ ಬೆಲೆಬಾಳುವ ಗಿಫ್ಟ್ ನೀಡಿದ್ದನ್ನು ನೋಡಿ ಧ್ರುವ ಸ್ನೇಹಿತ ಅಶ್ವಿನ್ ಅಕ್ಷರಷಃ ಕಣ್ಣೀರಾಗಿದ್ದಾರಂತೆ.

ಅಶ್ವಿನ್ ಕೇವಲ ಸ್ನೇಹಿತ ಮಾತ್ರವಲ್ಲ ತನ್ನ ಆಪ್ತ ಬಂಧು. ಕಷ್ಟದಲ್ಲೂ ಜೊತೆಗಿದ್ದ ಸ್ನೇಹಿತನ ಬರ್ತಡೇ ಸ್ಪೆಶಲ್ ಆಗಿ ಆಚರಿಸೋದಿಕ್ಕೆ ಧ್ರುವ ಸರ್ಜಾ ಈ ಸಪ್ರೈಸ್ ಪ್ಲ್ಯಾನ್ ಮಾಡಿದ್ದು, ಅಭಿಮಾನ ಮೆರೆದಿದ್ದಾರೆ. ಕಳೆದ ಕೆಲ ವರ್ಷಗಳಿಂದ ಒಂದಿಲ್ಲೊಂದು ದುಃಖದಲ್ಲೇ ಇದ್ದ ಸರ್ಜಾ ಕುಟುಂಬದಲ್ಲಿ ಈಗ ನಿಧಾನಕ್ಕೆ ಒಂದೊಂದೆ ಖುಷಿಗಳು ಮರಳುತ್ತಿದ್ದು, ನಟ ಧ್ರುವ ಸರ್ಜಾ ಮೊನ್ನೆ ಮೊನ್ನೆಯಷ್ಟೇ ಮುದ್ದಾದ ಹೆಣ್ಣುಮಗುವಿನ ತಂದೆಯಾಗಿದ್ದಾರೆ.

ಇದನ್ನೂ ಓದಿ : Shilpa Shetty’s photos : 48 ವಯಸ್ಸಿನಲ್ಲೂ ಶಿಲ್ಪಾ ಶೆಟ್ಟಿ ಹಾಟ್ ಪೋಟೋ : ಪಡ್ಡೆ ಹೈಕಳ ನಿದ್ದೆಗೆಡಿಸಿದ ಬಾಲಿವುಡ್ ಬ್ಯೂಟಿ

ಕೇವಲ ಧ್ರುವ ಸರ್ಜಾ ಮಾತ್ರವಲ್ಲ ಕನ್ನಡದ ಹಲವು ನಟ-ನಟಿಯರು ಹೀಗೆ ತಮ್ಮ ಆಪ್ತ ಸ್ನೇಹಿತರ ವಲಯವನ್ನು ಹೊಂದಿದ್ದು, ಬರ್ತಡೆಗೆ ಸ್ಪೆಶಲ್ ಗಿಫ್ಟ್ ನೀಡಿ ಸಂಭ್ರಮಿಸುವ ಹವ್ಯಾಸವಿಟ್ಟುಕೊಂಡಿದ್ದಾರೆ. ಈ ಹಿಂದೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯ ,ಕ್ರೇಜಿ ಕ್ವೀನ್ ರಕ್ಷಿತಾಗೆ ಸೀರೆಯೊಂದನ್ನು ಕಳುಹಿಸಿದ್ದರು. ನಟ ಸುದೀಪ್ ತಮ್ಮ ಸ್ನೇಹಿತ ಹಾಗೂ ಗನ್ ಮ್ಯಾನ್ ಗೆ ಬೆಲೆಬಾಳುವ ಬುಲೆಟ್ ಬೈಕ್ ಗಿಫ್ಟ್ ಮಾಡಿದ್ದರು.
Dhruva Sarja: After actor Sudeep, it’s Dhruva Sarja’s turn: The actor who gifted a valuable car worth 40 lakhs to a friend