ಭಾನುವಾರ, ಏಪ್ರಿಲ್ 27, 2025
HomeCinemaDhruva Sarja - Prerana couple : ವರಮಹಾಲಕ್ಷ್ಮೀ ಹಬ್ಬದ ದಿನದಂದು ಸಿಹಿ ಸುದ್ದಿ ಹಂಚಿಕೊಂಡ...

Dhruva Sarja – Prerana couple : ವರಮಹಾಲಕ್ಷ್ಮೀ ಹಬ್ಬದ ದಿನದಂದು ಸಿಹಿ ಸುದ್ದಿ ಹಂಚಿಕೊಂಡ ಧ್ರುವ ಸರ್ಜಾ -ಪ್ರೇರಣಾ ದಂಪತಿ

- Advertisement -

ಸ್ಯಾಂಡಲ್‌ವುಡ್‌ನ ನಟ ಧ್ರುವ ಸರ್ಜಾ ಬಹುಬೇಡಿಕೆ ನಟರಾಗಿ ಗುರುತಿಸಿಕೊಂಡಿದ್ದಾರೆ. ಸದ್ಯ ನಟ ಧ್ರುವ ಸರ್ಜಾ ಕೇಡಿ, ಮಾರ್ಟಿನ್‌ ಸಿನಿಮಾ ಸೇರಿದಂತೆ ಒಂದಷ್ಟು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇನ್ನ ಕಳೆದ ವರ್ಷ ಅಕ್ಟೋಬರ್‌ ತಿಂಗಳಲ್ಲಿ ನಟ ಧ್ರುವ ಸರ್ಜಾ ಹಾಗೂ ಪತ್ನಿ ಪ್ರೇರಣಾ ಶಂಕರ್‌ಗೆ (Dhruva Sarja – Prerana couple) ಹೆಣ್ಣು ಮಗು ಆಗಿತ್ತು. ಇಂದು ಎಲ್ಲೆಡೆ ವರಮಹಾಲಕ್ಷ್ಮೀ ಪೂಜೆ ಆಚರಣೆ ನಡೆಸುತ್ತಿದ್ದು, ಹಬ್ಬದ ದಿನದಂದು ಧ್ರುವ ಸರ್ಜಾ ಹಾಗೂ ಪ್ರೇರಣಾ ಶಂಕರ್‌ ಮತ್ತೊಂದು ಮಗುವಿನ ಬಗ್ಗೆ ಸುಂದರ ವಿಡಿಯೋ ಮಾಡುವುದರ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಡಿದ್ದಾರೆ.

ಕಳೆದ ವರ್ಷ ಅಕ್ಟೋಬರ್‌ ತಿಂಗಳಲ್ಲಿ ತಮ್ಮ ಮೆಚ್ಚಿನ ನಟನ ಮುದ್ದಿನ ಮಗಳ ಜನನದ ಸುದ್ದಿ ತಿಳಿದ ಅಭಿಮಾನಿಗಳು ಸಖತ್‌ ಖುಷಿ ಆಗಿದ್ದರು. ಸದ್ಯ ಧ್ರುವ ಸರ್ಜಾ ದಂಪತಿಗಳು ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿ ಇರುವುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುಂದರ ವಿಡಿಯೋದಲ್ಲಿ ಹಂಚಿಕೊಂಡಿದ್ದಾರೆ. ಧ್ರುವ ಸರ್ಜಾ, “ನಮ್ಮ ಸಂತೋಷದಾಯಕ ಗೊಂದಲಕ್ಕೆ ಮತ್ತೊಂದು ಸಣ್ಣ ಕಾಲ್ಬೆರಳುಗಳನ್ನು ಸೇರಿಸಲಾಗುತ್ತಿದೆ” ಎಂದು ವಿಡಿಯೋಕ್ಕೆ ಶೀರ್ಷಿಕೆ ನೀಡುವ ಮೂಲಕ ಹಂಚಿಕೊಂಡಿದ್ದಾರೆ.

ಧ್ರುವ ಸರ್ಜಾ ಪತ್ನಿ ಪ್ರೇರಣಾ ಕಳೆದ ವರ್ಷ ಮಗಳ ಲಾಲನೆ, ಪಾಲನೆಯಲ್ಲಿ ಬ್ಯುಸಿಯಾಗಿದ್ದರೆ, ನಟ ಧ್ರುವ ಸರ್ಜಾ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವಲ್ಲೆ ಮಗಳ ಪೋಟೋವನ್ನು ಹಂಚಿಕೊಂಡು ಖುಷಿನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಈ ದಂಪತಿಗಳು ತಮ್ಮ ಮಗಳಿಗೆ ಹೆಸರಿಟ್ಟಿಲ್ಲ. ಅದಕ್ಕೂ ಮೊದಲೇ ಮತ್ತೊಂದು ಮಗುವಿನ ಬಗ್ಗೆ ಮಾಹಿತಿ ನೀಡಿದ್ದಾರೆ.

ಸದ್ಯ ನಟ ಧ್ರುವ ಸರ್ಜಾ ಎರಡೆರಡು ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದು, ಎರಡು ಸಿನಿಮಾ ಪ್ಯಾನ್‌ ಇಂಡಿಯಾ ಸಿನಿಮಾವಾಗಿ ತೆರೆ ಕಾಣಲಿದೆ. ಅದರಲ್ಲಿ “ಕೆಡಿ” ಫ್ಯಾನ್‌ ಇಂಡಿಯಾ ಸಿನಿಮಾವಾಗಿದೆ. ಈ ಸಿನಿಮಾ 5 ಭಾಷೆಗಳಲ್ಲಿ ಏಕಕಾಲಕ್ಕೆ ಬಹಳ ದೊಡ್ಡಮಟ್ಟದಲ್ಲಿ ತೆರೆ ಕಾಣಲಿದೆ. ಈ ಸಿನಿಮಾದಲ್ಲಿ ಧ್ರುವ ಸರ್ಜಾ ರಗಡ್ ಲುಕ್‌ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಸಂಸ್ಥೆ ನಿರ್ಮಾಣ ಮಾಡುತ್ತಿದೆ. ಇನ್ನು ಈ ಸಿನಿಮಾದಲ್ಲಿ ನಟಿ ರೀಷ್ಮಾ ನಾಯಕಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸಿನಿತಂಡ ಅಧಿಕೃತವಾಗಿ ಹೇಳಿದೆ. ಇದನ್ನೂ ಓದಿ : Prashanth Neel – Prabhas : ಕುಂದಾಪುರದ ಬಸ್ರೂರಿಗೆ ಬಂದಿಳಿದ ತೆಲುಗು ನಟ ಪ್ರಭಾಸ್‌, ನಿರ್ದೇಶಕ ಪ್ರಶಾಂತ್‌ ನೀಲ್‌

ನಟ ಧ್ರುವ ಸರ್ಜಾ ಅಭಿನಯದ ಇನ್ನೊಂದು ಸಿನಿಮಾವಾದ ಮಾರ್ಟಿನ್‌ ಸಿನಿಮಾ ಪಾಕಿಸ್ತಾನದ ಜೈಲಿನಲ್ಲಿ ಬಂಧಿಯಾಗಿರುವ ನಾಯಕ, ಆ ಪಾತ್ರದ ಸುತ್ತ ಹೆಣೆದಿರುವ ಕಥೆ ಎನ್ನುವುದನ್ನು ಟೀಸರ್‌ನಲ್ಲಿ ಕಾಣಬಹುದಾಗಿದೆ. ಭಾರತಕ್ಕೂ ಮತ್ತು ಪಾಕಿಸ್ತಾನದಲ್ಲಿ ಬಂಧಿಯಾಗಿರುವ ನಾಯಕನಿಗೆ ಕನೆಕ್ಷನ್‌ ಏನಿರಲಿದೆ ಎನ್ನುವುದು ಪ್ರೇಕ್ಷಕರ ಕುತೂಹಲಕ್ಕೆ ಕಾರಣವಾಗಿದೆ. ಒಟ್ಟಾರೆ ಹೇಳುವುದಾದರೇ ಸಿನಿಮಾ ಅದ್ಧೂರಿಯಾಗಿ ಮೂಡಿ ಬಂದಿದೆ. ಇದರಲ್ಲಿ ನಿರ್ದೇಶಕರ ಶ್ರಮ ಎದ್ದು ಕಾಣಿಸುತ್ತಿದ್ದು, ಈ ಸಿನಿಮಾ ಪ್ಯಾನ್‌ ಇಂಡಿಯ ಮಟ್ಟದಲ್ಲಿ ಬಿಡುಗಡೆ ಆಗುತ್ತಿರುವುದರಿಂದ ಮತ್ತೊಂದು ಕನ್ನಡ ಸಿನಿಮಾ ಭಾರತದಾದ್ಯಂತ ಹವಾ ಸೃಷ್ಟಿ ಮಾಡಲಿದೆ.

Dhruva Sarja – Prerana couple : Dhruva Sarja – Prerana couple shared sweet news on the day of Varamahalakshmi.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular