ಪೊಗರು ಬಳಿಕ ಧ್ರುವ್ ಸರ್ಜಾ ಸಖತ್ ಟ್ರೆಂಡಿ ಹಾಗೂ ಸ್ಟೈಲಿಶ್ ರೂಪದಲ್ಲಿ ಕಾಣಿಸಿಕೊಳ್ತಿರೋ ಸಿನಿಮಾ ಮಾರ್ಟಿನ್ ( Upcoming Movie Martin ). ಮುಹೂರ್ತ ಮೂಲಕವೇ ಸದ್ದು ಮಾಡ್ತಿರೋ ಈ ಸಿನಿಮಾಗೆ ಈಗ ಮಾದಕ ಬೆಡಗಿ ವೈಭವಿ ಶಾಂಡಿಲ್ಯ (Vaibhavi Shandilya) ಎಂಟ್ರಿಕೊಡೋ ಸುದ್ದಿ ಹೊರಬಿದ್ದಿದ್ದು ಧ್ರುವ್ ಸರ್ಜಾ ( Dhruva Sarja ) ಜೊತೆ ಸುಂದರಿ ವೈಭವಿ ನೋಡೋಕೆ ಅಭಿಮಾನಿಗಳು ಕಾತುರತೆಯಿಂದ ಕಾಯ್ತಿದ್ದಾರೆ.
ವೈಭವಿ ಶಾಂಡಿಲ್ಯ ಬಹುಭಾಷಾ ನಟಿಯಾಗಿದ್ದರೂ ಶರಣ್ ಜೊತೆಗೆ ರಾಜ್ ವಿಷ್ಣು ಸಿನಿಮಾದಲ್ಲಿ ನಟಿಸಿದ್ದರು. ಕೇವಲ ಕನ್ನಡ ಮಾತ್ರವಲ್ಲ ತಮಿಳಿನ ಸಕ್ಕ ಪೋಡು ಪೋಡು , ಇರುಟ್ಟು ಅರಿಯಲ್,ತೆಲುಗಿನ ನೆಕ್ಟ್ ನುವ್ವೆ ಸಿನಿಮಾದಲ್ಲಿ ನಟಿಸಿದ್ದರು.

ಸೋಷಿಯಲ್ ಮೀಡಿಯಾ ದಲ್ಲಿ ಹಾಟ್ ಆಂಡ್ ಬೋಲ್ಡ್ ಪೋಟೋಶೂಟ್ ನಿಂದ ಫೇಮಸ್ ಆಗಿರೋ ಶಾಂಭವಿ ಶಾಂಡಿಲ್ಯ ಅಭಿಮಾನಿಗಳಿಗಾಗಿ ಸುಂದರ ಪೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ. ಪ್ರತಿ ಪೋಟೋಶೂಟ್ ನಲ್ಲೂ ತಮ್ಮ ಅಂದದ ಮೈಮಾಟವನ್ನು ಧಾರಾಳವಾಗಿ ಪ್ರದರ್ಶಿಸುವ ವೈಭವಿ ಶಾಂಡಿಲ್ಯ ಪೋಟೋಗಳೆಂದರೇ ಅಭಿಮಾನಿಗಳಿಗೆ ಅಚ್ಚುಮೆಚ್ಚು.

ಈಗ ಮಾರ್ಟಿನ್ ಸಿನಿಮಾದ ಮೂಲಕ ವೈಭವಿ ಶಾಂಡಿಲ್ಯ ನಾಯಕಿಯಾಗಿ ಆಯ್ಕೆಯಾಗಿದ್ದು, ಈ ವಿಚಾರವನ್ನು ಸ್ವತಃ ಚಿತ್ರತಂಡ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ನಿರ್ದೇಶಕರು ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಮಾರ್ಟಿನ್ ಸಿನಿಮಾಕ್ಕೆ ವೈಭವಿ ಶಾಂಡಿಲ್ಯ ಗೆ ಸ್ವಾಗತ ಎಂದಿದ್ದಾರೆ.

ಸದಾ ತಮ್ಮ ಸಿನಿಮಾಗಳಲ್ಲಿ ಹೊಸ ಹೊಸ ಹಿರೋಯಿನ್ ಗಳಿಗೆ ಅವಕಾಶ ನೀಡೋ ಧ್ರುವ್ ಸರ್ಜಾ ಅದ್ದೂರಿ ಮತ್ತು ಬಹಾದ್ದೂರ್ ಸಿನಿಮಾದಲ್ಲಿ ರಾಧಿಕಾ ಪಂಡಿತ್ ಜೊತೆ ಡ್ಯುಯೆಟ್ ಹಾಡಿದ್ದರು.

ಭರ್ಜರಿ ಯಲ್ಲಿ ರಚಿತಾ ರಾಮ್ ಜೊತೆ ಕುಣಿದ ಧ್ರುವ್ ಸರ್ಜಾ, ಪೊಗರು ಸಿನಿಮಾದಲ್ಲಿ ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಜೊತೆ ತೆರೆಹಂಚಿಕೊಂಡಿದ್ದರು. ಈಗ ಹೊಸ ಸಿನಿಮಾದಲ್ಲಿ ವೈಭವಿ ಶಾಂಡಿಲ್ಯ ಜೊತೆ ಹೆಜ್ಜೆ ಹಾಕಲಿದ್ದಾರೆ. ಮಾರ್ಟಿನ್ ಸಿನಿಮಾಗಾಗಿ ಧ್ರುವ್ ಸರ್ಜಾ ತಮ್ಮ ಸ್ಟೈಲ್ ಕೂಡಾ ಬದಲಾಯಿಸಿಕೊಂಡಿದ್ದು ಸಖತ್ ವರ್ಕೌಟ್ ಮಾಡೋ ಮೂಲಕ ಮತ್ತಷ್ಟು ಫಿಟ್ ಆಗ್ತಿದ್ದಾರೆ.

ಮಾರ್ಟಿನ್ ಸಿನಿಮಾ ಮುಂದಿನವರ್ಷ ತೆರೆಗೆ ಬರಲಿದ್ದು, ಪೊಗರು ಬಳಿಕ ಬರಲಿರೋ ಈ ಸಿನಿಮಾ ಸಾಕಷ್ಟು ಕುತೂಹಲ ಮೂಡಿಸಿದೆ. ಇನ್ನು ಸದ್ಯ ಗಣೇಶ್ ಹಾಗೂ ಯೋಗರಾಜ್ ಭಟ್ ಕಾಮಿನೇಷನ್ ನಲ್ಲಿ ಮೂಡಿ ಬರ್ತಿರೋ ಗಾಳಿಪಟ 2 ಸಿನಿಮಾ ಶೂಟಿಂಗ್ ಮುಗಿಸಿದ್ದಾರೆ.
ಇದನ್ನೂ ಓದಿ : Samantha Ruth Prabhu Pushpa : ಪುಷ್ಪ ಸಿನಿಮಾ ರಂಗೇರಿಸಿದ ಸಮಂತಾ: ಐಟಂ ಸಾಂಗ್ ಲುಕ್ ಗೆ ಫ್ಯಾನ್ಸ್ ಫಿದಾ
ಇದನ್ನೂ ಓದಿ : Katrina Kaif Vicky Kaushal Marriage : ಸೀಕ್ರೆಟ್ ಆಗಿ ಮದುವೆಯಾದ್ರು ಕತ್ರಿನಾ ಕೈಫ್ – ವಿಕ್ಕಿ ಕೌಶಲ್
ಇದನ್ನೂ ಓದಿ : Madhagaja actress Ashika Ranganath: ಕೆಂಪಾಯ್ತು ಮದಗಜ ಸುಂದರಿ ಬೆನ್ನು: ಪೋಟೋ ಹಂಚಿಕೊಂಡ ಅಶಿಕಾ ಹೇಳಿದ್ದೇನು ಗೊತ್ತಾ?!
ಒದನ್ನೂ ಓದಿ : Yash Radhika Pandit : ಯಶ್ ರಾಧಿಕಾಗೆ ಆನ್ಯಿವರ್ಸರಿ ಸಂಭ್ರಮ : ಪತಿ ಬಗ್ಗೆ ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ಏನಂದ್ರು ಗೊತ್ತಾ
( Dhruva Sarja Upcoming Movie Martin Vaibhavi Shandilya Acting)