ಸೋಮವಾರ, ಏಪ್ರಿಲ್ 28, 2025
HomeCinemaDirector Bhagwan : ದೊರೈ, ಅಣ್ಣಾವ್ರು, ವರದಪ್ಪ ಉದಯಶಂಕರ್‌ ಕಳಕೊಂಡು ಒಂಟಿಯಾಗಿದ್ದ ನಿರ್ದೇಶಕ ಭಗವಾನ್

Director Bhagwan : ದೊರೈ, ಅಣ್ಣಾವ್ರು, ವರದಪ್ಪ ಉದಯಶಂಕರ್‌ ಕಳಕೊಂಡು ಒಂಟಿಯಾಗಿದ್ದ ನಿರ್ದೇಶಕ ಭಗವಾನ್

- Advertisement -

ಭಾರತೀಯ ಸಿನಿರಂಗದಲ್ಲಿ ಈ ಮಟ್ಟಿಗೆ ಯಶಸ್ಸು ಕಂಡ ನಿರ್ದೇಶಕ ಜೋಡಿಗಳು ಮತ್ಯಾರು ಇಲ್ಲ ಅಂತ ಅನಿಸುತ್ತೆ. ದೊರೈ ಮತ್ತು ಭಗವಾನ್ (Director Bhagwan) ಇಬ್ಬರೂ ಒಬ್ಬರೇ ಎಂದು ಭಾವಿಸಿದ್ದ ಅದೆಷ್ಟೋ ಮಂದಿ ಇದ್ದರು. ದೊರೈ ನಿಧನದ ಬಳಿಕವಷ್ಟೇ ಹಲವರಿಗೆ ಇವರು ಒಬ್ಬರಲ್ಲ ಇಬ್ಬರು ಅನ್ನೋ ಸತ್ಯ ತಿಳಿದಿತ್ತು. ಆ ಮಟ್ಟಿಗೆ ಯಶಸ್ಸು ಕಂಡ ಜೋಡಿಯಾಗಿದ್ದರು. ದೊರೈ ಕಾಲವಾಗಿ ಹಲವು ವರ್ಷಗಳೇ ಆಗಿವೆ. ಈಗ ಭಗವಾನ್ ಕೂಡ ಅವರ ಹಾದಿಯನ್ನೇ ಹಿಡಿದು ಹೊರಟು ಹೋಗಿದ್ದಾರೆ. ಆದರೆ, ಹಿರಿಯ ಜೀವ ಭಗವಾನ್‌ ಕನ್ನಡ ಸಿನಿರಂಗದಲ್ಲಿ ನಾಲ್ಕು ಮಂದಿ ಸ್ನೇಹಿತರನ್ನು ಕಳೆದುಕೊಂಡು ಒಂಟಿಯಾಗಿದ್ದರು.

ಜೀವದ ಗೆಳೆಯ ದೊರೈ ಕಾಲವಾದ ಬಳಿಕವಂತೂ ಭಗವಾನ್ ಸಿನಿಮಾದಿಂದ ನಿಧಾನವಾಗಿ ದೂರವಾಗ ತೊಡಗಿದ್ದರು. ಆ ಬಳಿಕ ಉದಯ್ ಶಂಕರ್, ಡಾ.ರಾಜ್‌ಕುಮಾರ್, ಅವರ ಸಹೋದರ ವರದಪ್ಪ ಅಗಲಿದ ಬಳಿಕ ಅವರ ಬಹುಕಾಲದ ಸ್ನೇಹದ ಕೊಂಡಿಯೆಲ್ಲಾ ಕಳಚಿ ಬಿದ್ದಂತಾಗಿತ್ತು. ಅದರಲ್ಲೂ ದೊರೈ ಹಾಗೂ ಭಗವಾನ್ ನಡುವಿನ ಒಡನಾಟವೇ ಬೇರೆ ಆಗಿತ್ತು. ದೊರೈ ಅಗಲಿದ ಬಳಿಕವೂ ಅವರ ಸ್ನೇಹದ ಬಗ್ಗೆ ಹಲವು ಬಾರಿ ಹೇಳಿಕೊಂಡಿದ್ದರು.

ಸ್ಯಾಂಡಲ್‌ವುಡ್‌ನಲ್ಲಿ ಅಂದು ಎಲ್ಲರಿಗೂ ಕಷ್ಟಕಾಲ. ಆ ಕಷ್ಟಕಾಲದಲ್ಲಿ ಎರಡು ದಿನ ಭಗವಾನ್ ಊಟವಿಲ್ಲದೆ ಕಳೆದಿದ್ದರು. ಆ ವೇಳೆ ಹೊಟೇಲ್ ಮುಂದೆ ನಿಂತು ಯಾರಾದರೂ ಕನ್ನಡಿಗರು ಬರುತ್ತಾರಾ? ಅವರ ಬಳಿ ಒಂದರೆಡು ರೂಪಾಯಿ ಸಾಲ ತೆಗೆದುಕೊಂಡು ಇವತ್ತಿನ ಹಸಿವು ತೀರಿಸಿಕೊಳ್ಳೋಣ ಅಂತಿದ್ದರು. ಆಗಲೇ ಬಿಳಿ ಶರ್ಟ್ ಹಾಗೂ ಪ್ಯಾಂಟ್ ಹಾಕೊಂಡು ಬರುತ್ತಿದ್ದ ದೊರೈ ಕಂಡು, ಸಾಲ ಕೇಳಿದ್ದರು. ಆಗ ಭಗವಾನ್‌ಗೆ ದೊರೈ ಪರಿಚಯವಿತ್ತೇ ಹೊರತು, ಆತ್ಮೀಯತೆ ಬೆಳೆದಿರಲಿಲ್ಲ. ‘ದೊರೈ ಒಂದು ರೂಪಾಯಿ ಇದ್ರೆ ಸಾಲ ಕೊಡಿ. ನಾಳೆ ನಮ್ಮ ಪ್ರಡ್ಯೂಸರ್ ಬಂದು ದುಡ್ಡು ಕೊಟ್ಟ ಕೂಡಲೇ ಕೊಟ್ಟು ಬಿಡುತ್ತೇನೆ’ ಎಂದು ಭಗವಾನ್ ಸಾಲ ಕೇಳಿದ್ದರು. ಆಗ ದೊರೈ ಜೇಬಿನಲ್ಲಿದ್ದ ಎಂಟಾಣೆ ತೆಗೆದು ಭಗವಾನ್‌ಗೆ ಕೊಟ್ಟಿದ್ದರು.

ಹೊಟೇಲ್ ಬಳಿ ಭಗವಾನ್ ನಿರ್ದೇಶಕ ದೊರೈ ಬಳಿ ಸಾಲವೇನೋ ಕೇಳಿದ್ದರು. ಆದರೆ, ಅವರ ಬಳಿ ಇದ್ದ ಎಂಟಾಣೆಯನ್ನೂ ಹೊರಟು ಹೋಗಿದ್ದರು. ಆ ಬಳಿಕ ಭಗವಾನ್ ಹಿಂತಿರುಗಿ ಆಫೀಸ್‌ನಲ್ಲಿ ಕೆಲಸ ಶುರು ಮಾಡಿದ್ದರು. ಆಗ ದಿಢೀರನೇ ಜಿವಿ ಅಯ್ಯರ್ ಬಂದು, ‘ನೀನು ಮಾಡಿರೋ ಕೆಲಸ ನನಗೆ ಗೊತ್ತು. ದೊರೈ ಹತ್ತಿರ ಸಾಲ ತೆಗೆದುಕೊಂಡಿದ್ದೀಯಂತೆ. ಅವನೇ ನನ್ನ ಬಳಿ ಬಂದು ಸಾಲ ತೆಗೆದುಕೊಂಡು ನಾಲ್ಕು ಇಡ್ಲಿ ತಿಂದು ಬರುತ್ತೇನೆ ಎಂದು ಹೋಗಿದ್ದ’ ಎಂದಿದ್ದರು. ಆಗಲೇ ದೊರೈ ವ್ಯಕ್ತಿತ್ವ ಭಗವಾನ್ ಅವರಿಗೆ ಗೊತ್ತಾಗಿತ್ತು. ಅಂದಿನಿಂದ ಸ್ನೇಹಿತರಾಗಿದ್ದವರು ಜಂಟಿಯಾಗಿ ನಿರ್ದೇಶಿಸಿದ್ದ ಕೊನೆಯ 49 ಸಿನಿಮಾಗಳವರೆಗೂ ಅದೇ ಸ್ನೇಹವಿತ್ತು. ಅವರ ಕೊನೆ ದಿನದವರೆಗೂ ಭಗವಾನ್ ಅಂತ ಯಾರಾದರೂ ಕರೆದರೆ ಅವರಿಗೆ ಇಷ್ಟ ಆಗುತ್ತಿರಲಿಲ್ಲ. ದೊರೈ ಭಗವಾನ್ ಅಂತ ಕರೆದರೆ ಅವರ ಕಿವಿಗಳು ನೆಟ್ಟಗಾಗುತ್ತಿದ್ದವು.

ಇದನ್ನೂ ಓದಿ : Director SK Bhagavan: ಜೀವನದ ಅಧ್ಯಾಯ ಮುಗಿಸಿದ ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಭಗವಾನ್

ಇದನ್ನೂ ಓದಿ : TRP rating of serials : ಕನ್ನಡ ಸೀರಿಯಲ್‌ಗಳ ಟಿಆರ್‌ಪಿ ರೇಟಿಂಗ್ ಡಿಟೈಲ್ಸ್ : ಯಾರಿಗೆ ಮೊದಲ ಸ್ಥಾನ? ಯಾರಿಗೆ ಕೊನೆ ಸ್ಥಾನ?

ಇದನ್ನೂ ಓದಿ : ಸ್ಯಾಂಡಲ್‌ವುಡ್‌ ಸಿನಿಪಯಣದಲ್ಲಿ 37 ವರ್ಷ ಪೂರೈಸಿದ ನಟ ಶಿವರಾಜ್‌ಕುಮಾರ್‌

ಡಾ.ರಾಜ್‌ ಕುಮಾರ್ ಅಂದರೆ ದೊರೈ-ಭಗವಾನ್‌ಗೆ ಅಚ್ಚುಮೆಚ್ಚು. ಅವರಂತಹ ಕಲಾವಿದನೇ ಇಲ್ಲ ಎನ್ನುತ್ತಿದ್ದರು. ರಾಜ್‌ಕುಮಾರ್ ಅವರು ನಿರ್ದೇಶಕರ ನಟ ಎನ್ನುತ್ತಿದ್ದರು. ಅಣ್ಣಾವ್ರಿಗಾಗಿ ನಿರ್ದೇಶಿಸಿದ ಸುಮಾರು 36 ಸಿನಿಮಾಗಳಲ್ಲಿ ಬಾಂಡ್, ಪ್ರೇಮಿ, ಮಾಸ್ ಹೀರೊ ಅಷ್ಟೇ ಅಲ್ಲದೆ ತ್ಯಾಗಿಯಾಗಿಯೂ ತೆರೆಮೇಲೆ ತಂದಿದ್ದರು. ಆ ಎಲ್ಲಾ ಸಿನಿಮಾಗಳೂ ಅಣ್ಣಾವ್ರನ್ನು ಸೂಪರ್‌ಸ್ಟಾರ್ ಪಟ್ಟಕ್ಕೆ ತೆಗೆದುಕೊಂಡು ಹೋಗಿತ್ತು. ಆದರೆ, ಸಿನಿಮಾ ಹೊರತಾಗಿಯೂ ಭಗವಾನ್ ಗೆಳೆಯ ದೊರೈ ಜೊತೆ ರಾಜ್‌ಕುಮಾರ್, ಉದಯ್ ಶಂಕರ್ ಹಾಗೂ ವರದಪ್ಪ ಅವರೊಂದಿಗೆ ಸ್ನೇಹಿತರಾಗಿದ್ದರು.

Director Bhagavan was single after Dorai, Annavru, Varadappa Udayashankar.

RELATED ARTICLES

Most Popular