ಸೋಮವಾರ, ಏಪ್ರಿಲ್ 28, 2025
HomeCinemaKV Raju No More: ಖ್ಯಾತ ನಿರ್ದೇಶಕ ಕೆ.ವಿ ರಾಜು ಇನ್ನಿಲ್ಲ : ಸ್ಯಾಂಡಲ್​ವುಡ್​ನಲ್ಲಿ ಮಡುಗಟ್ಟಿದ...

KV Raju No More: ಖ್ಯಾತ ನಿರ್ದೇಶಕ ಕೆ.ವಿ ರಾಜು ಇನ್ನಿಲ್ಲ : ಸ್ಯಾಂಡಲ್​ವುಡ್​ನಲ್ಲಿ ಮಡುಗಟ್ಟಿದ ಶೋಕ

- Advertisement -

ಬೆಂಗಳೂರು :ಚಂದನವನದ ಹಿರಿಯ ನಿರ್ದೇಶಕ ಕೆ.ವಿ ರಾಜು ಇಂದು ಇಹಲೋಕ ತ್ಯಜಿಸಿದ್ದಾರೆ(KV Raju No More). ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕೆ.ವಿ ರಾಜು ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಬೆಂಗಳೂರಿನ ರಾಜಾಜಿನಗರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕೆ.ವಿ ರಾಜುರಿಗೆ ಬೆಂಗಳೂರಿನ ರಾಜಾಜಿನಗರದಲ್ಲಿರುವ ಅವರ ನಿವಾಸದಲ್ಲಿಯೇ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿತ್ತು.ಬೆಳ್ಳಿ ಕಾಲುಂಗುರ, ಬೆಳ್ಳಿ ಮೋಡ, ಹುಲಿಯಾ,ಯುದ್ಧಕಾಂಡ, ಇಂದ್ರಜಿತ್​ ಸೇರಿದಂತೆ ಸಾಲು ಸಾಲು ಹಿಟ್ ಸಿನಿಮಾಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದ ಈ ಮೇರು ನಿರ್ದೇಶಕನ ಬಾಲಿವುಡ್​ ಹಿರಿಯ ನಟ ಅಮಿತಾಬ್​ ಬಚ್ಚನ್​ರ ಸಿನಿಮಾಗೂ ನಿರ್ದೇಶನ ಮಾಡುವ ಮೂಲಕ ಸೈ ಎನಿಸಿಕೊಂಡಿದ್ದರು. ರಾಜಾಜಿನಗರದಲ್ಲಿರುವ ಕೆ.ವಿ ರಾಜು ಅವರ ನಿವಾಸದಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಹರಿಶ್ಚಂದ್ರ ಘಾಟ್​​ನಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು ಎಂದು ರಾಜು ಕುಟುಂಬಸ್ಥರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಕೆ.ವಿ ರಾಜು ನಡೆದು ಬಂದ ಹಾದಿ:

ಚಿತ್ರರಂಗದಲ್ಲಿ ನಿರ್ದೇಶಕ, ಬರಹಗಾರ ಹಾಗೂ ಚಿತ್ರಕಥೆಗಾರನಾಗಿ ಕೆ.ವಿ ರಾಜು ಸಾಕಷ್ಟು ಹೆಸರನ್ನು ಗಳಿಸಿದ್ದಾರೆ. 1982ರಲ್ಲಿ ತಮ್ಮ ಸಹೋದರ ಖ್ಯಾತ ನಿರ್ದೇಶಕ ಕೆ.ವಿ ಜಯರಾಮ್​ ಜೊತೆಯಲ್ಲಿ ಸಹ ನಿರ್ದೇಶಕನಾಗಿ ಬಾಡದ ಹೂ ಸಿನಿಮಾದಲ್ಲಿ ಕೆಲಸ ಮಾಡುವ ಮೂಲಕ ಸ್ಯಾಂಡಲ್​ವುಡ್​ಗೆ ಪಾದಾರ್ಪಣೆ ಮಾಡಿದ್ದರು . ಇದಾದ ಬಳಿಕ 1984ರಲ್ಲಿ ತೆರೆ ಕಂಡ ಒಲವೇ ಬದುಕು ಸಿನಿಮಾದಲ್ಲಿ ನಿರ್ದೇಶಕ ಹಾಗೂ ಬರಹಗಾರನಾಗಿ ಕೆಲಸ ಮಾಡಿದರು. ಇದಾದ ಬಳಿಕ ಕೆ.ವಿ ರಾಜು ಅವರ ಸುವರ್ಣ ಯುಗ ಆರಂಭವಾಗಿತ್ತು. ಬಂಧಮುಕ್ತ, ಸಂಗ್ರಾಮ, ಯುದ್ಧಕಾಂಡ, ಬೆಳ್ಳಿ ಕಾಲುಂಗುರ, ಬೆಳ್ಳಿ ಮೋಡ ಸೇರಿದಂತೆ ಸಾಲು ಸಾಲು ಹಿಟ್​ ಸಿನಿಮಾಗಳನ್ನು ಕನ್ನಡಕ್ಕೆ ನೀಡುತ್ತಲೇ ಹೋದರು.
ಕೆ.ವಿ ರಾಜು ಅವರ ಛಾಪು ಕೇವಲ ಸ್ಯಾಂಡಲ್​ವುಡ್​ಗೆ ಮಾತ್ರ ಸೀಮಿತವಾಗಿರಲಿಲ್ಲ. ಇವರು ಬಾಲಿವುಡ್​ನಲ್ಲಿಯೂ ಸಿನಿಮಾಗಳಿಗೆ ಆ್ಯಕ್ಷನ್​ ಕಟ್​ ಹೇಳಿದ ಕೀರ್ತಿ ಇವರದು. ಬಾಲಿವುಡ್​ ಹಿರಿಯ ನಟ ಅಮಿತಾಬ್​ ಬಚ್ಛನ್​ ಹಾಗೂ ಜಯಪ್ರದಾ ಅಭಿನಯದ ಇಂದ್ರಜಿತ್​ ಸಿನಿಮಾ ಸೇರಿದಂತೆ ಇನ್ನೂ ಕೆಲವು ಹಿಂದಿ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದರು.

ಇದನ್ನು ಓದಿ : Love U Racchu Release : ಲವ್ ಯೂ ರಚ್ಚುಗೆ ನೂರೆಂಟು ವಿಘ್ನ : ಇದೀಗ ಬಂದ್ ಸಂಕಷ್ಟ

ಇದನ್ನೂ ಓದಿ: Madhuban Sunny Leone : ವಿವಾದದ ಸುಳಿಗೆ ಸಿಲುಕಿದ ಸನ್ನಿ ಲಿಯೋನ್​​ರ ‘ಮಧುಬನ್​’ ಗೀತೆ

Director KV Raju passes away in bengaluru

RELATED ARTICLES

Most Popular