Mani Ratnam : ಖ್ಯಾತ ನಿರ್ದೇಶಕ, ನಿರ್ಮಾಪಕ ಮಣಿರತ್ನಂಗೆ ಕೊರೊನಾ ಸೋಂಕು : ಆಸ್ಪತ್ರೆಗೆ ದಾಖಲು

ಚೆನ್ನೈ : Mani Ratnam : ಕೊರೊನಾ ಸೋಂಕಿಗೆ ಒಳಗಾಗಿರುವ ಚಲನಚಿತ್ರ ನಿರ್ಮಾಪಕ ಮಣಿರತ್ನಂರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮಣಿರತ್ನಂ ಆರೋಗ್ಯ ಸ್ಥಿತಿಯ ಬಗ್ಗೆ ಆಸ್ಪತ್ರೆಯಿಂದ ಈವರೆಗೆ ಯಾವುದೇ ಅಧಿಕೃತ ಮಾಹಿತಿಗಳು ಹೊರ ಬಿದ್ದಿಲ್ಲ. ಜುಲೈ15ರಂದು ನಿಧನರಾದ ನಟ ಹಾಗೈ ನಿರ್ಮಾಪಕ ಪ್ರತಾಪ್​ ಪೋಥೆನ್​ ಅಂತ್ಯಕ್ರಿಯೆಯಲ್ಲಿ ಮಣಿರತ್ನಂ ಭಾಗಿಯಾಗಿದ್ದರು. ಇದಕ್ಕೂ ಮುನ್ನ ಜುಲೈ 8ರಂದು ನಡೆದಿದ್ದ ಇವರ ಮುಂದಿನ ಸಿನಿಮಾ ಪೊನ್ನಿಯಿನ್​ ಸೆಲ್ವನ್​​ ಭಾಗ 1ರ ಟೀಸರ್​ ಬಿಡುಗಡೆ ಕಾರ್ಯಕ್ರಮದಲ್ಲಿಯೂ ಮಣಿರತ್ನಂ ಭಾಗವಹಿಸಿದ್ದರು.


ಕಲ್ಕಿ ಅವರ ಐತಿಹಾಸಿಕ ಕಾದಂಬರಿಯನ್ನು ಆಧರಿಸಿದ ಸಿನಿಮಾ ಪೊನ್ನಿಯಿನ್​ ಸೆಲ್ವನ್​ ಸಿನಿಮಾದ ಟೀಸರ್​ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ನಿರ್ಮಾಪಕ ಮಣಿರತ್ನಂ ನಾಡೋಡಿ ಮನ್ನನ್​ ಬಳಿಕ ಈ ಸಿನಿಮಾವನ್ನು ಮಕ್ಕಳ್​ ತಿಲಗಂ ಎಂಜಿಆರ್​ ಸರ್​ ಮಾಡಬೇಕಿತ್ತು. ಈ ಪ್ರಾಜೆಕ್ಟ್​ನ ಮೇಲೆ ನಾನು ಮೂರು ಬಾರಿ ಕೆಲಸ ಮಾಡಲು ಪ್ರಯತ್ನಿಸಿದ್ದೇನೆ. 1980, 2000 ಹಾಗೂ 2010ರಲ್ಲಿ ಒಟ್ಟು ಮೂರು ಬಾರಿ ನಾನು ಯತ್ನಿಸಿದ್ದೇನೆ. ಆದರೆ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಆದರೆ ಪೊನ್ನಿಯಿನ್​ ಸೆಲ್ವನ್​ ಕಾದಂಬರಿ ಚೆನ್ನಾಗಿ ಇರುವುದರಿಂದ ಇದನ್ನು ಸಿನಿಮಾ ಮಾಡಿದ್ದೇನೆ ಎಂದು ಹೇಳಿದ್ದರು.


ಲೈಕಾ ಪ್ರಾಡಕ್ಷನ್​ ಸಂಸ್ಥೆಯ ಈ ಸಿನಿಮಾ ಸೆಪ್ಟೆಂಬರ್​ 30ರಂದು ಬಿಡುಗಡೆಯಾಗಲಿದೆ. ಬಹು ನಿರೀಕ್ಷಿತ ಸಿನಿಮಾದಲ್ಲಿ ವಿಕ್ರಮ್, ಐಶ್ವರ್ಯ ರೈ, ತ್ರಿಶಾ, ಕಾರ್ತಿ, ಜಯಂ ರವಿ, ಜಯರಾಮ್, ಪಾರ್ಥಿಬನ್, ಲಾಲ್, ಪ್ರಭು, ವಿಕ್ರಮ್ ಪ್ರಭು ಮತ್ತು ಪ್ರಕಾಶ್ ರಾಜ್ ಮುಖ್ಯ ಭೂಮಿಕೆಯಲ್ಲಿದ್ದಾರೆ.


ಈ ಸಿನಿಮಾಗೆ ಎ.ಆರ್​ ರೆಹಮಾನ್​ ಸಂಗೀತವಿದೆ. ರವಿ ವರ್ಮನ್​ ಕ್ಯಾಮರಾ ಕೈಚಳಕದಲ್ಲಿ ಈ ಸಿನಿಮಾ ಮೂಡಿ ಬಂದಿದೆ. ಜುಲೈ 8ರಂದು ರಿಲೀಸ್​ ಆದ ಸಿನಿಮಾದ ಟೀಸರ್​ನ್ನು ಮೋಹನ್​ ಲಾಲ್​, ಅಮಿತಾಬ್​ ಬಚ್ಛನ್​​ , ಸೂರ್ಯ ಹಾಗೂ ರಕ್ಷಿತ್​ ಶೆಟ್ಟಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ.

ಇದನ್ನು ಓದಿ : KL Rahul Training at NCA : ಕೆ.ಎಲ್ ರಾಹುಲ್ ಬ್ಯಾಟಿಂಗ್ ; ದಿಗ್ಗಜ ಮಹಿಳಾ ಕ್ರಿಕೆಟರ್ ಬೌಲಿಂಗ್, NCAನಲ್ಲಿ ಭರ್ಜರಿ ಪ್ರಾಕ್ಟೀಸ್

ಇದನ್ನೂ ಓದಿ : woman kills husband : ಜೀನ್ಸ್​ ಪ್ಯಾಂಟ್​ ಧರಿಸಿದ್ದನ್ನು ವಿರೋಧಿಸಿದ್ದಕ್ಕೆ ಪತಿಯನ್ನೇ ಕೊಂದ ಪತ್ನಿ

Director Mani Ratnam hospitalised in Chennai after testing positive for coronavirus

Comments are closed.