ಸೋಮವಾರ, ಏಪ್ರಿಲ್ 28, 2025
HomeCinema"ಕಬ್ಜ" ಫ್ರಿ ರಿಲೀಸ್‌ ಕಾರ್ಯಕ್ರಮಕ್ಕೆ ಪ್ರಮುಖ ಅತಿಥಿ ಯಾರು ಗೊತ್ತಾ ?

“ಕಬ್ಜ” ಫ್ರಿ ರಿಲೀಸ್‌ ಕಾರ್ಯಕ್ರಮಕ್ಕೆ ಪ್ರಮುಖ ಅತಿಥಿ ಯಾರು ಗೊತ್ತಾ ?

- Advertisement -

ಸ್ಯಾಂಡಲ್‌ವುಡ್‌ ಬಹು ನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾಕ್ಕೆ ಕೇವಲ ಮೂರು ದಿನಗಳು ಅಷ್ಟೇ ಬಾಕಿ ಇದೆ. ಸ್ಯಾಂಡಲ್‌ವುಡ್‌ನ ಮೂರು ಸೂಪರ್‌ಸ್ಟಾರ್‌ಗಳನ್ನು ಒಂದೇ ಪರದೆ ಮೇಲೆ ನೋಡಲು ಸಿನಿಪ್ರೇಕ್ಷಕರು ಕಾತುರದಿಂದ ಕಾದಿದ್ದಾರೆ. ಈಗಾಗಲೇ ಬಿಡುಗಡೆಯಾದ ಟೀಸರ್‌, ಹಾಡುಗಳು ಹಾಗೂ ಟ್ರೈಲರ್‌ ಅಭಿಮಾನಿಗಳಿಗೆ ಸಖತ್‌ ಕಿಕ್‌ ಕೊಟ್ಟಿದೆ. ಸದ್ಯ ಇಂದು (ಮಾರ್ಚ್‌ 14) ಸಂಜೆ 6 ಗಂಟೆಗೆ ಸರಿಯಾಗಿ “ಕಬ್ಜ” ಸಿನಿಮಾದ ಫ್ರಿ ರಿಲೀಸ್‌ ಕಾರ್ಯಕ್ರಮಕ್ಕೆ (Kabza free release program) ಆಯೋಜಿಸಲಾಗಿದೆ ಎಂದು ಸಿನಿಮಾ ನಿರ್ದೇಶಕ ಆರ್‌ ಚಂದ್ರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ನಿರ್ದೇಶಕ ಆರ್‌ ಚಂದ್ರು ತಮ್ಮ ಟ್ವೀಟರ್‌ ಖಾತೆಯಲ್ಲಿ, “ಇಂದು ಸಂಜೆ ಬೆಂಗಳೂರಿನಲ್ಲಿ ಪ್ರಿ ರಿಲೀಸ್ ಈವೆಂಟ್ ನಡೆಯಲಿದೆ. ಯಾರ್ಯಾರು ಬರ್ತಾರೆ ? ಯಾವೆಲ್ಲ,ನಕ್ಷತ್ರಗಳು ಜೊತೆಯಾಗಲಿವೆ. ಖಂಡಿತ ನಿಮಗೆಲ್ಲ surprise ಇದ್ದೇ ಇದೆ. ಜನಪ್ರಿಯ ನಾಯಕರಾದ ಡಿ ಕೆ ಶಿವಕುಮಾರ್ ರವರೂ ನಮ್ಮ ಜೊತೆಯಾಗಲಿದ್ದಾರೆ. ಸಂಜೆ ಆರೂವರೆಗೆ ಸಿಗೋಣ..” ಎಂದು ಪೋಸ್ಟ್‌ ಮಾಡಿದ್ದಾರೆ. ಮಾರ್ಚ್ 12ರಂದು ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಕಾಂಬಿನೇಷನ್‌ ‘ಕಬ್ಜ’ ಸಿನಿಮಾಗೆ ಬುಕಿಂಗ್ ಓಪನ್ ಮಾಡಲಾಗಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಭಾರತದಾದ್ಯಂತ ಹಲವೆಡೆ ಮೊದಲ ಹಂತದಲ್ಲಿ ಟಿಕೆಟ್ ಬುಕ್ ಮಾಡಲು ಅವಕಾಶವನ್ನು ನೀಡಲಾಗಿದೆ. ಬುಕ್‌ ಮೈ ಶೋನಲ್ಲಿ ಈಗಾಗಲೇ ಕಲವು ಸಿನಿಮಂದಿರಗಳಲ್ಲಿ ಬುಕಿಂಗ್ ಓಪನ್ ಆಗಿದೆ.

ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ‘ಕಬ್ಜ’ ನೋಡುವುದಕ್ಕೆ ಜನರು ಆಸಕ್ತಿ ತೋರಿಸಿದ್ದಾರೆ. ಟಿಕೆಟ್ ಬುಕಿಂಗ್ ಸೈಟ್‌ನಲ್ಲಿ ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದ್ದು, ‘ಕಬ್ಬ’ ಸಿನಿಮಾಗೆ ಮಾರ್ಚ್ 12 ಸಂಜೆಯಿಂದ ಅಡ್ವಾನ್ಸ್ ಬುಕಿಂಗ್‌ಗೆ ಅವಕಾಶ ನೀಡಲಾಗಿದೆ. ಬೆಂಗಳೂರು, ಮೈಸೂರು, ತುಮಕೂರು, ಹೈದರಾಬಾದ್, ವೈಜಾಗ್, ಮುಂಬೈ ಸೇರಿದಂತೆ ಹಲವೆಡೆ ಬುಕಿಂಗ್ ಓಪನ್ ಆಗಿದ್ದು,. ಇದಕ್ಕೆ ಸಿನಿಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್ ಸಿಕ್ಕಿರುತ್ತದೆ.

ಬೆಂಗಳೂರಿನಲ್ಲಿ ಮೊದಲ ಹಂತದಲ್ಲಿ ಸುಮಾರು 11ಕ್ಕೂ ಹೆಚ್ಚು ಸ್ಕ್ರೀನ್‌ನಲ್ಲಿ ಅಡ್ವಾನ್ಸ್ ಬುಕಿಂಗ್ ಓಪನ್ ಮಾಡಲಾಗಿದೆ. ಇವುಗಳಲ್ಲಿ ಎರಡು ಸ್ಕ್ರೀನ್‌ಗಳು ಫಾಸ್ಟ್ ಫಿಲ್ಲಿಂಗ್ ಆಗುತ್ತಿವೆ. ಇನ್ನು ಸಿನಿಮಾ ಬಿಡುಗಡೆಗೆ ಮೂರು ದಿನಗಳಲ್ಲಿ ಹಂತ ಹಂತವಾಗಿ ಥಿಯೇಟರ್‌ಗಳ ಸಂಖ್ಯೆ ಹೆಚ್ಚಾಗಲಿದೆ. ಆದರೆ, ಮಂಗಳೂರು ಸೇರಿದಂತೆ ಇನ್ನೂ ಹಲವೆಡೆ ಬುಕಿಂಗ್ ಓಪನ್ ಆಗಿಲ್ಲ.

ಇದನ್ನೂ ಓದಿ : ನಟ ಪುನೀತ್‌ ಅಭಿನಯದ ಕೊನೆಯ ಸಿನಿಮಾ “ಗಂಧದಗುಡಿ” ಓಟಿಟಿ ರಿಲೀಸ್‌ ಡೇಟ್‌ ಫಿಕ್ಸ್

ಇದನ್ನೂ ಓದಿ : ಕಾಂತಾರ 2 ಸಿನಿಮಾ ಮುನ್ನವೇ ಹೊಸ ಸಿನಿಮಾ “ಲಾಫಿಂಗ್‌ ಬುದ್ಧ” ನಿರ್ಮಾಣಕ್ಕೆ ಮುಂದಾದ ನಟ ರಿಷಬ್‌ ಶೆಟ್ಟಿ

‘ಕಬ್ಜ’ ಸಿನಿಮಾ ಪರಭಾಷೆಯಲ್ಲೂ ರಿಲೀಸ್ ಆಗುತ್ತಿದೆ. ಹೈದರಾಬಾದ್‌ನಲ್ಲಿ 5 ಸ್ಕ್ರೀನ್ ಹಾಗೂ ವೈಜಾಗ್‌ನಲ್ಲಿ 1 ಸ್ಕ್ರೀನ್‌ನಲ್ಲಿ ಟಿಕೆಟ್ ವಿತರಣೆ ಮಾಡುವುದಕ್ಕೆ ಆರಂಭ ಮಾಡಲಾಗಿದೆ. ಕೇರಳದಲ್ಲಿ ನಿನ್ನೆ (ಮಾರ್ಚ್ 13) ಅಡ್ವಾನ್ಸ್ ಬುಕಿಂಗ್ ಓಪನ್ ಆಗುತ್ತಿದೆ. ಹಾಗೇ ಮುಂಬೈನಲ್ಲಿ ಒಂದು ಸಿನಿಮಂದಿರ ಟಿಕೆಟ್ ಓಪನ್ ಮಾಡಲಾಗಿದೆ. ಬಹುಶ: ಇನ್ನು ಎರಡು ದಿನಗಳ ಒಳಗೆ ಎಲ್ಲಾ ಭಾಷೆಯಲ್ಲೂ ಕಂಪ್ಲೀಟ್ ಆಗಿ ಬುಕಿಂಗ್ ಓಪನ್ ಆಗುವ ಸಾಧ್ಯತೆಯಿದೆ. ನಿರ್ದೇಶಕ ಆರ್ ಚಂದ್ರ, ರಿಯಲ್‌ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಶ್ರಿಯಾ ಶರಣ್ ನಾಲ್ಕು ಮಂದಿಗೆ ಪ್ಯಾನ್ ಇಂಡಿಯಾ ಪ್ರಿ ರಿಲೀಸ್ ಇವೆಂಟ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಪರಭಾಷೆಯಲ್ಲಿ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಬಿಡುಗಡೆಗೆ ಅಂತಿಮ ತಯಾರಿ ಮಾಡಿಕೊಳ್ಳಲಾಗುತ್ತದೆ.

Do you know who is the main guest for “Kabza” free release program?

RELATED ARTICLES

Most Popular