ಸಾಕಷ್ಟು ಜನಪ್ರಿಯತೆ ಗಳಿಸಿದ್ದ ಜಯನಗರ 4th ಬ್ಲಾಕ್ ಕಿರುಚಿತ್ರ ಜೋಡಿ ಮತ್ತೆ ಒಂದಾಗುತಿದ್ದು, ಹಲವಾರು ನಿರೀಕ್ಷೆ ಮೂಡಿಸಿದೆ. ಡಾಲಿ ಧನಂಜಯ್ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದ ಯಶಸ್ಸಿನ ಅಲೆಯಲ್ಲಿದ್ದು, ಈ ವಿಚಾರ ಮತ್ತಷ್ಟು ಖುಷಿಗೆ ಕಾರಣವಾಗಿದೆ.

ಧನಂಜಯ್ ಹಿರೋ ಆಗೋಕೂ ಮುಂಚೆ ತಯಾರಾಗಿದ್ದ ಜಯನಗರ 4th ಬ್ಲಾಕ್ ಕಿರುಚಿತ್ರವನ್ನು ರಾಮ ರಾಮ ರೇ ಖ್ಯಾತಿಯ ನಿರ್ದೇಶಕ ಸತ್ಯ ಪ್ರಕಾಶ್ ನಿರ್ದೇಶನದ ಮಾಡಿದ್ದರು. ಇವಾಗ ಇದೇ ಡಾಲಿ ಮತ್ತು ಸತ್ಯ ಪ್ರಕಾಶ್ ಜೊತೆಯಾಗಿ ಸಿನಿಮಾ ಮಾಡೋ ಸುದ್ದಿ ಹೊರಬಂದಿದ್ದು, ಸತ್ಯ ಪ್ರಕಾಶ್ ಟೀಮ್ ನಲ್ಲೇ ಒಬ್ಬರೂ ನಿರ್ದೇಶನ ಮಾಡಲಿದ್ದಾರೆ. ಸತ್ಯ ಪ್ರಕಾಶ್ ಮತ್ತು ಡಾಲಿ ಇಬ್ಬರೂ ಸೇರಿ ಸಿನಿಮಾ ನಿರ್ಮಾಣ ಮಾಡಲಿದ್ದಾರೆ.

ಈ ಸಿನಿಮಾದಲ್ಲಿ ಡಾಲಿ ಎರಡು ಶೇಡ್ ನಲ್ಲಿ ಕಾಣಿಸಿಕೊಳ್ಳಲಿದ್ದು, ಹಾಸ್ಯ ಪ್ರಧಾನವಾಗಿರುತ್ತೆ ಕಥೆ. ಹಳೆ ಜೋಡಿ ಈ ಸಿನಿಮಾ ಮೂಲಕ ಮತ್ತೊಮ್ಮೆ ಮೋಡಿ ಮಾಡಲು ಹೊರಟಿರೋದು ಚಂದನವನದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಮಾರ್ಚ್ ಅಂತ್ಯಕ್ಕೆ ಚಿತ್ರೀಕರಣಕ್ಕೆ ತೆರಳುವ ತಯಾರಿ ಮಾಡಿದ್ದು, ತಾಂತ್ರಿಕವರ್ಗ ಮತ್ತು ಪಾತ್ರವರ್ಗದ ವಿವರ ಸದ್ಯದಲ್ಲೇ ಚಿತ್ರತಂಡ ಹೊರಹಾಕಲಿದೆ.