ಮೈಸೂರು : 25 ಕೋಟಿಯಿಂದ ಆರಂಭವಾದ ವಿಚಾರ ಇದೀಗ ದೊಡ್ಮನೆವರೆಗೆ ಬಂದಿದೆ. ನಮ್ಮ ತಂದೆ, ನಾನು ಬೆಳೆದಿದ್ದೇ ದೊಡ್ಮನೆ ಫ್ಯಾಮಿಲಿಯಿಂದಾಗಿದೆ. ಅವರ ಮುಂದೆ ನಾವ್ಯಾರೂ ಹುಲ್ಲಿಗೂ ಸಮವಲ್ಲ. ದೊಡ್ಮನೆ ಫ್ಯಾಮಿಲಿ ವಿಚಾರ ಬಂದಿದ್ದರಿಂದಲೇ ನನಗೆ ಬೇಸರ ಆಗಿದ್ದು. ಇನ್ನೂ100 ವರ್ಷ ಕಳೆದ್ರೂ ಅದು ದೊಡ್ಮನೆ ಆಗಿಯೇ ಇರುತ್ತೆ ಎಂದು ನಟ ದರ್ಶನ್ ತೂಗುದೀಪ್ ಹೇಳಿದ್ದಾರೆ.
ಇದನ್ನೂ ಓದಿ : ನೀವು ಗಂಡಸಾಗಿದ್ರೆ ಆಡಿಯೋ ರಿಲೀಸ್ ಮಾಡಿ : ನಿರ್ದೇಶಕ ಇಂದ್ರಜಿತ್ ಲಂಕೇಶ್ ಗೆ ದರ್ಶನ್ ಸವಾಲು
ಮೈಸೂರಿನಲ್ಲಿ ಫಾರ್ಮ್‌ಹೌಸ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿರ್ಮಾಪಕ ಉಮಾಪತಿ ನಡುವೆ ಏರ್ಪಟ್ಟಿರುವ ಪ್ರಾಪರ್ಟಿ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ನಾನು ಬೆಳೆದಿದ್ದೇ, ನನ್ನ ವೃತ್ತಿ ಜೀವನವನ್ನು ಆರಂಭಿಸಿದ್ದೇ ದೊಡ್ಮನೆಯವರ ಪ್ರೊಡಕ್ಷನ್ ನಿಂದ. ಜನುಮದ ಜೋಡಿ ಸಿನಿಮಾದ ಮೂಲಕ 175 ರೂಪಾಯಿಯಿಂದ ವೃತ್ತಿ ಜೀವನವನ್ನುಆರಂಭಿಸಿದ್ದೇನೆ. ನಮ್ಮ ತಂದೆ ಕೂಡ ದೊಡ್ಮನೆ ಕುಟುಂಬದಿಂದಲೇ ಬೆಳೆದಿರೋದು. ಇಂತಹ ಫ್ಯಾಮಿಲಿಯ ಪ್ರಾಪರ್ಟಿ ಬಗ್ಗೆ ನಾವು ಕಣ್ಣು ಹಾಕೋದಾ ಎಂದಿದ್ದಾರೆ.
ಇದನ್ನೂ ಓದಿ : ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡೋಣಾ : ನೀವು ತಂದೆಗೆ ಹುಟ್ಟಿದ್ದರೆ ಅಲ್ಲಿಗೆ ಬನ್ನಿ : ದರ್ಶನ್ ಗೆ ಇಂದ್ರಜಿತ್ ಸವಾಲು
ನನಗೆ ನಿರ್ದೇಶಕ ಜೋಗಿ ಪ್ರೇಮ್ ಅವರಿಂದಾಗಿ 2016ರಿಂದಲೇ ನಿರ್ಮಾಪಕ ಉಮಾಪತಿ ಪರಿಚಯ. ಮೊನ್ನೆಯವರೆಗೂ ನಾನು ಅವರ ಜೊತೆ ಮಾತನಾಡುತ್ತಾ ಇದ್ದೇನೆ. ಪುನಿತ್ ಅವರ ಪ್ರಾಪರ್ಟಿ ಬಗ್ಗೆ ಹೇಳಿರೋದು ಉಮಾಪತಿ. ಕಳೆದ ಎರಡು ವರ್ಷಗಳಿಂದಲೂ ಪ್ರಾಪರ್ಟಿಯಿಂದಲೇ ನನಗೆ ಬಾಡಿಗೆ ಕೊಡ್ತಾ ಇದ್ರು. ಇದೀಗ ನಟ ದರ್ಶನ್ ತೂಗುದೀಪ್ ದೊಡ್ಮನೆ ಪ್ರಾಪರ್ಟಿ ಮೇಲೆ ಕಣ್ಣು ಹಾಕಿದ್ದಾರೆ ಅಂತಿದ್ದಾರೆ. ಆ ಪ್ರಾಪರ್ಟಿ ನಾನು ಬಿಡಲ್ಲ ಅಂತಿದ್ದಾರೆ. ಹೀಗಾದ್ರೆ ಅವರು ಆ ಪ್ರಾಪರ್ಟಿಯಿಂದ ಬಂದ ಹಣದಿಂದ ಯಾಕೆ ನನಗೆ ಬಾಡಿಗೆ ಕೊಡ್ತಾ ಇದ್ರು ಕೇಳಿ. ನನಗೆ ಜೀವನ ಕೊಟ್ಟಿದ್ದೇ ದೊಡ್ಮನೆ ಎಂದಿದ್ದಾರೆ.