– ವಂದನಾ ಕೊಮ್ಮುಂಜೆ
ಸರ್ಜಾ ಕುಟುಂಬ ಚಿರಂಜೀವಿ ಸರ್ಜಾ ಸಾವಿನ ನೋವಿನಿಂದ ಇನ್ನೂ ಹೊರ ಬಂದಿಲ್ಲ. ಪ್ರತಿ ನಿಮಿಷ ಸಾವಿನ ನೋವು ಅವರ ಕುಟುಂಬವನ್ನು ಕಾಡುತ್ತಿದೆ. ಚಿರಂಜಿವಿ ಸರ್ಜಾ ಸಹೋದರ ದ್ರುವ ಸರ್ಜಾ ಅಂತು ಅಣ್ಣನ ಅಗಲಿಕೆಯ ನೋವಿನಿಂದ ಹೊರ ಬಂದಿಲ್ಲ. ಅವರು ಈ ಬಾರಿ ತಮ್ಮ ಹುಟ್ಟು ಹಬ್ಬವನ್ನೂ ಆಚರಿಕೊಳ್ಳುತ್ತಿಲ್ಲ.

ಹೌದು ಅಕ್ಟೋಬರ್ 6 ರಂದು ದ್ರುವ ಸರ್ಜಾ ಹುಟ್ಟುಹಬ್ಬ. ಆದರೆ ಈ ಬಾರಿ ತಮ್ಮ ಹುಟ್ಟು ಹಬ್ಬವನ್ನು ತಮ್ಮ ಅಭಿಮಾನಿಗಳ ಜೊತೆ ದ್ರುವ ಸರ್ಜಾ ಆಚರಿಸಿಕೊಳ್ಳುತ್ತಿಲ್ಲ.

ಅಣ್ಣನ ಸಾವಿನ ನೋವಿನಿಂದ ಹೊರ ಬರಲು ಆಗುತ್ತಿಲ್ಲ. ಜೊತೆಗೆ ಕೊರೋನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳು ಯಾರು ಮನೆಯ ಬಳಿ ಬಾರದಂತೆ ವಿನಂತಿ ಮಾಡಿಕೊಂಡಿದ್ದಾರೆ.

ಟ್ವೀಟರ್ ನ ಮೂಲಕ ಸಂದೇಶ ನೀಡಿರುವ ದ್ರುವ ಸರ್ಜಾ ‘ಅಭಿಮಾನಿಗಳೇ ನಮ್ಮ ಅನ್ನದಾತರು. ನೀವೇ ನಮ್ಮ ಶಕ್ತಿ. ಪ್ರತಿವರ್ಷ ಹುಟ್ಟುಹಬ್ಬಕ್ಕೆ ನೀವು ನಮ್ಮ ಮನೆಗೆ ಬಂದು ತೋರಿಸೋ ಪ್ರೀತಿ,ಅಭಿಮಾನ ವರ್ಣನಾತೀತ. ಈ ವರ್ಷದ ಎಲ್ಲಾ ಬೆಳವಣಿಗೆಗಳು ನಿಮಗೆ ಗೊತ್ತಿರೋದೇ. ಎಲ್ಲೂ ಸಂಭ್ರಮವಿಲ್ಲ. ಅಭಿಮಾನಿಗಳನ್ನು ಮನೆಯ ಬಳಿ ಬರಬೇಡಿ ಎನ್ನಲು ಮನಸ್ಸಿಲ್ಲ. ನೀವು ಇರುವ ಕಡೆಯಿಂದಲೇ ಹಾರೈಸಿ. ಅದೇ ನನಗೆ ಶ್ರೀರಕ್ಷೆ. ಜೈಆಂಜನೇಯ’ ಅಂತ ಭಾವನಾತ್ಮಕ ಸಂದೇಶವನ್ನು ನೀಡಿದ್ದಾರೆ ದ್ರುವ

ಇನ್ನು ಎರಡು ದಿನಗಳ ಹಿಂದೆಯಷ್ಟೇ ತಮ್ಮ ಅತ್ತಿಗೆ ಮೇಘನಾ ರಾಜ್ ಸೀಮಂತ ಕಾರ್ಯಕ್ರಮದಲ್ಲಿ ದ್ರುವ ಭಾಗಿಯಾಗಿದ್ರು. ಅಲ್ಲಿ ಅಣ್ಣನ ಪೋಟೋ ನೋಡಿ ದ್ರುವ ಸ್ವಲ್ಪ ಭಾವುಕರಾಗಿದ್ರು. ಧ್ರುವಾ ಸರ್ಜಾ ಅವರ ಸ್ಥಿತಿಯನ್ನು ನೋಡಿದ್ರೆ ಎಂತಹವರಿಗೂ ನೋವು ತರಿಸದೇ ಇರದು.
