ಕಾಂಡೋಮ್ ಬ್ರ್ಯಾಂಡ್ ಡ್ಯುರೆಕ್ಸ್ (Durex celebrates ) ಸೋಶಿಯಲ್ ಮೀಡಿಯಾದಲ್ಲಿ ಸದಾ ಒಂದಿಲ್ಲೊಂದು ಫನ್ನಿ ಪೋಸ್ಟ್ಗಳನ್ನು ಹಾಕುತ್ತಲೇ ಇರುತ್ತದೆ. ಆನ್ಲೈನ್ನಲ್ಲಿ ಡ್ಯುರೆಕ್ಸ್ ಪ್ರಸಾರ ಮಾಡುವ ಕೆಲ ಜಾಹೀರಾತುಗಳಂತೂ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತದೆ . ಇದೀಗ ಬಾಲಿವುಡ್ ನಟಿ ಕತ್ರಿನಾ ಕೈಫ್ ಹಾಗೂ ನಟ ವಿಕ್ಕಿ ಕೌಶಲ್ಗೆ (Katrina Kaif and Vicky Kaushal) ವಿವಾಹಕ್ಕೆ ಶುಭಾಶಯ ಕೋರುವ ನೆಪದಲ್ಲಿ ಡ್ಯುರೆಕ್ಸ್ ಮತ್ತೊಂದು ಫನ್ನಿ ಪೋಸ್ಟ್ನ್ನು ಹರಿಬಿಟ್ಟಿದೆ.
ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಶೇರ್ ಮಾಡಿರುವ ಡ್ಯುರೆಕ್ಸ್ ಕಂಪನಿಯು, ಆತ್ಮೀಯರಾದ ವಿಕ್ಕಿ ಹಾಗೂ ಕತ್ರಿನಾ ಅವರೇ,, ನಮ್ಮನ್ನು ನೀವು ಆಹ್ವಾನಿಸಿಲ್ಲ ಅಂದರೆ ನೀವು ತಮಾಷೆಗೆ ಒಳಗಾಗಬೇಕಾಗಿ ಬರಬಹುದು ಎಂದು ಹೇಳಿದೆ (you’ve got to be kidding, if we are not invited). ಇಲ್ಲಿ ಕಿಡ್ಡಿಂಗ್ ಎಂಬ ಪದವನ್ನು ಬೋಲ್ಡ್ ಅಕ್ಷರಗಳಲ್ಲಿ ಬರೆಯಲಾಗಿದೆ.
ಈ ಪೋಸ್ಟ್ ಆನ್ಲೈನ್ನಲ್ಲಿ ಹರಿಬಿಡುತ್ತಿದ್ದಂತೆಯೇ ಹಾಟ್ ಕೇಕ್ನಂತೆ ಈ ಪೋಸ್ಟ್ ಶೇರ್ ಆಗಿದೆ. ಡ್ಯುರೆಕ್ಸ್ ಕಂಪನಿಯ ಸೆನ್ಸ್ ಆಫ್ ಹ್ಯೂಮರ್ ಕಂಡು ನೆಟ್ಟಿಗರಂತೂ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ಬಾಲಿವುಡ್ ನಟ ವಿಕ್ಕಿ ಕೌಶಲ್ ಹಾಗೂ ನಟಿ ಕತ್ರಿನಾ ಕೈಫ್ ರಾಜಸ್ಥಾನದ ಸವೈ ಮಧೋಪುರದಲ್ಲಿರುವ ಸಿಕ್ಸ್ ಸೆನ್ಸಸ್ ಭರ್ವಾರಾ ಕೋಟೆಯಲ್ಲಿ ಶುಕ್ರವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ . ಈ ವಿವಾಹ ಕಾರ್ಯಕ್ರಮಕ್ಕೆ 120 ಮಂದಿಗೆ ಆಹ್ವಾನ ನೀಡಲಾಗಿತ್ತು. ಮದುವೆಗೆ ಆಗಮಿಸುವ ಅತಿಥಿಗಳಿಗೆ ಕೆಲ ನಿಯಮಗಳನ್ನೂ ವಿಧಿಸಲಾಗಿತ್ತು. ಯಾರೂ ಫೋಟೋ ಕ್ಲಿಕ್ಕಿಸದಂತೆ ನೋಡಿಕೊಳ್ಳಲು ಮೊಬೈಲ್ ಫೋನ್ಗಳನ್ನು ಬ್ಯಾನ್ ಮಾಡಲಾಗಿತ್ತು. ಮದುವೆ ಕಾರ್ಯಕ್ರಮವನ್ನು ಖಾಸಗಿಯಾಗಿಡಲು ಈ ರೀತಿ ಮಾಡಲಾಗಿದೆ.
ಇದನ್ನು ಓದಿ : IMDb Top 10 Indian Films of 2021 : ಭಾರತದ ಟಾಪ್ 10 ಸಿನಿಮಾ, ವೆಬ್ ಸಿರೀಸ್ ಪಟ್ಟಿ ರಿಲೀಸ್ ಮಾಡಿದ IMDb
ಇದನ್ನೂ ಓದಿ: 83 movie Cheating Complaint : ರಿಲೀಸ್ ಗೂ ಮುನ್ನ83 ಗೇ ಸಂಕಷ್ಟ: ನಿರ್ಮಾಪಕರ ವಿರುದ್ಧ ವಂಚನೆ ಪ್ರಕರಣ ದಾಖಲು
Durex celebrates Katrina Kaif and Vicky Kaushal wedding with epic meme. No kidding!