ಭಾನುವಾರ, ಏಪ್ರಿಲ್ 27, 2025
HomeCinemaDeepika Padukone : ಚಿಕ್ಕ ಬಟ್ಟೆಗೆ ದೊಡ್ಡ ಬೆಲೆ : ದೀಪಿಕಾ ಹಾಟ್ ಪೋಟೋಶೂಟ್ ವೈರಲ್

Deepika Padukone : ಚಿಕ್ಕ ಬಟ್ಟೆಗೆ ದೊಡ್ಡ ಬೆಲೆ : ದೀಪಿಕಾ ಹಾಟ್ ಪೋಟೋಶೂಟ್ ವೈರಲ್

- Advertisement -

ಸಮಾರಂಭ ಯಾವುದೇ ಇರಲಿ, ಸಂದರ್ಭ ಎಂತಹುದೇ ಇರಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತಮ್ಮ ವಸ್ತ್ರವಿನ್ಯಾಸದಿಂದ ಗಮನ ಸೆಳೆಯೋದನ್ನು ಮರೆಯೋದಿಲ್ಲ. ಈಗ ಮತ್ತೊಮ್ಮೆ ತಮ್ಮ ಬಟ್ಟೆ, ಡ್ರೆಸ್ ವಿನ್ಯಾಸ ಹಾಗೂ ಬೆಲೆಗಾಗಿ ದೀಪಿಕಾ ಪಡುಕೋಣೆ (Deepika Padukone) ಸುದ್ದಿಯಾಗಿದ್ದು, ಚಿಕ್ಕ ಬಟ್ಟೆಯ ದೊಡ್ಡ ಬೆಲೆ ಕೇಳಿ ನೆಟ್ಟಿಗರು‌‌ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ. ಸಿನಿಮಾ ಕಾರ್ಯಕ್ರಮದಿಂದ ಆರಂಭಿಸಿ ಮದುವೆ, ಪಾರ್ಟಿ ವರೆಗೆ ಎಲ್ಲಾ ಒಕೇಶನ್ ನಲ್ಲೂ ದೀಪಿಕಾ ತಮ್ಮ ಡ್ರೆಸ್ ನಿಂದಲೇ ಗಮನ ಸೆಳೆಯುತ್ತಾರೆ. ಈಗಲೂ ತಮ್ಮ ಹೊಸ ಸಿನಿಮಾ ಗೆಹ್ರೈಯಾನ್ ಚಿತ್ರದ ಪ್ರಮೋಶನ್ ನಲ್ಲಿ ದೀಪಿಕಾ ಪಡುಕೋಣೆ ತೊಟ್ಟ ಡ್ರೆಸ್ ಗಮನ ಸೆಳೆದಿದ್ದು ಚರ್ಚೆಗೆ ಗ್ರಾಸವಾಗಿದೆ.

ಶಕುನ್ ಬಾತ್ರಾ ನಿರ್ದೇಶನದ ಗೆಹ್ರೈಯಾನ್ ಸಿನಿಮಾದಲ್ಲಿ ಸಖತ್ ಬೋಲ್ಡ್ ದೃಶ್ಯಗಳಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದು ಯುವನಟನ ತುಟಿಗೆ ತುಟಿ ಬೆಸೆದು ಆಭಿಮಾನಿಗಳು ಹುಬ್ಬೇರಿಸುವಂತೆ ಮಾಡಿದ್ದಾರೆ. ಈ ಸಿನಿಮಾದ ಪ್ರಮೋಶನ್ ಗಾಗಿ ದೀಪಿಕಾ ಬ್ಲ್ಕಾಕ್ ಮಿನಿ ಡ್ರೆಸ್ ತೊಟ್ಟಿದ್ದು ಈ ಡ್ರೆಸ್ ನ ದೀಪಿಕಾ ಪಡುಕೋಣೆ ಪೋಟೋ ಸಖತ್ ವೈರಲ್ ಆಗಿದೆ.

Faux Leather Mini Dress ನಲ್ಲಿ ನೀಳಕಾಯದ ಚೆಲುವೆ ದೀಪಿಕಾ ಸೌಂದರ್ಯ ಅನಾವರಣಗೊಂಡಿದ್ದು, ದೀಪಿಕಾ ಈ ಹಾಟ್ ಪೋಟೋಗಳನ್ನು ಸ್ಟೈಲಿಸ್ಟ್ ಶಲೀನ್ ನಥಾನಿ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಲಂಡನ್ ನಲ್ಲಿ ವಿನ್ಯಾಸಗೊಳಿಸಲಾದ ಈ ಮಿನಿ ಗೌನ್ ನ ಭಾರತೀಯ ಮಾರುಕಟ್ಟೆ ಬೆಲೆ 45 ಸಾವಿರ ರೂಪಾಯಿ ಎನ್ನಲಾಗುತ್ತಿದೆ. ದೀಪಿಕಾ ಪಡುಕೋಣೆ ಈ ಬ್ಲ್ಯಾಕ್ ಡ್ರೆಸ್ ಗೆ ಗೋಲ್ಡನ್ ಕಲರ್ ಇಯರಿಂಗ್ಸ್ ಹಾಗೂ ಬ್ಲ್ಯಾಕ್ ಪಾಯಿಂಟ್ ಹಿಲ್ಸ್ ಹಾಕಿದ್ದಾರೆ. ದೀಪಿಕಾ ಪಡುಕೋಣೆಯ ಈ ಹಾಟ್ ಅವತಾರ ನೋಡಿ ಆಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ.

ಕೆಲದಿನಗಳ ಹಿಂದೆಯಷ್ಟೇ ಬ್ಲ್ಯಾಕ್ ಆಂಡ್ ವೈಟ್ ಕಾಮಿನೇಶನ್ ನ ಉದ್ದನೆಯ ಓವರ್ ಕೋಟ್ ತೊಟ್ಟ ದೀಪಿಕಾ ಟ್ರೋಲ್ ಗೆ ಗುರಿಯಾಗಿದ್ದರು. ದೀಪಿಕಾ ನೀವು ರಣಬೀರ್ ಕಪೂರ್ ಶರ್ಟ್ ತೊಟ್ಟು ಬಂದಂತಿದೆ ಎಂದು ನೆಟ್ಟಿಗರು ದೀಪಿಕಾ ಪಡುಕೋಣೆ ಕಾಲೆಳೆದಿದ್ದರು. ಕೇವಲ ದೀಪಿಕಾ ಪಡುಕೋಣೆ ಮಾತ್ರವಲ್ಲ ಪತಿ ರಣಬೀರ್ ಕಪೂರ್ ಕೂಡ ಹೀಗೆ ವಿಚಿತ್ರ ವಿನ್ಯಾಸದ ಬಟ್ಟೆ ಧರಿಸೋದರಲ್ಲಿ ಎತ್ತಿದ ಕೈ.

ಇದನ್ನೂ ಓದಿ : ಬೇಬಿ ಬಂಪ್ ಜೊತೆ ಹಾಟ್ ಪೋಟೋಶೂಟ್ : ಸೋಷಿಯಲ್ ಮೀಡಿಯಾ ಗಮನ ಸೆಳೆದ ದಿಶಾ ಮದನ್

ಇದನ್ನೂ ಓದಿ : ಥಿಯೇಟರ್ ಗೆ ಇನ್ನೂ ಸಿಕ್ಕಿಲ್ಲ ರಿಲೀಫ್ : ಸರ್ಕಾರದ ನಿರ್ಣಯಕ್ಕೆ ನಟ-ನಟಿಯರ ಆಕ್ರೋಶ

( Deepika Padukone styles ultra-chic black mini dress with Rs 62k pumps for Gehraiyaan promotions)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular