ಸೋಮವಾರ, ಏಪ್ರಿಲ್ 28, 2025
HomeCinemaRayan Raj Sarja : ಅಪ್ಪನ ಸ್ನೇಹಕ್ಕೆ ಜೀವ ತುಂಬಿದ ಮಗ ರಾಯನ್‌ ಸರ್ಜಾ :...

Rayan Raj Sarja : ಅಪ್ಪನ ಸ್ನೇಹಕ್ಕೆ ಜೀವ ತುಂಬಿದ ಮಗ ರಾಯನ್‌ ಸರ್ಜಾ : ಮೇಘನಾ ರಾಜ್ ಸರ್ಜಾ ಶೇರ್ ಮಾಡಿದ್ರು ಸ್ಪೆಶಲ್ ಪೋಟೋ

- Advertisement -

ಸ್ಯಾಂಡಲ್ ವುಡ್ ನ ಕ್ಯೂಟ್ ಜೋಡಿ ಎನ್ನಿಸಿದ್ದ ಚಿರು ಮೇಘನಾ ಬದುಕಿನಲ್ಲಿ ವಿಧಿ ವಿಷಾದವೊಂದನ್ನು ತುಂಬಿತ್ತು. ಈ ಕಾಡುವ ವಿಷಾದದ ನಡುವೆ ಮೇಘನಾ ಮುಖದಲ್ಲಿ ನಗು ಅರಳಿಸಿದವನು ರಾಯನ್ ರಾಜ್ ಸರ್ಜಾ (Rayan Raj Sarja). ಸದಾ ಮಗನ ಖುಷಿಯಲ್ಲೇ ಬದುಕಿ‌ನ ಸಾರ್ಥಕತೆ ಕಂಡುಕೊಳ್ಳುತ್ತಿರುವ ಮೇಘನಾಗೆ ಮಗ ಅಪ್ಪನ ಪ್ರತಿರೂಪ ಅಂತಲೇ ಅನ್ನಿಸುತ್ತದೆ. ಈಗ ಮಗನೂ ತಂದೆಯಂತೆ ಸ್ನೇಹಿತರ ಸೇವೆ ಮಾಡೋ ಮೂಲಕ ತಾಯಿ ಅನಿಸಿಕೆಯನ್ನು ನಿಜವಾಗಿಸಿದ್ದು, ಈ ಅಚ್ಚರಿಯ ವಿಚಾರವನ್ನು ಮೇಘನಾ ಹಳೆ ಪೋಟೋ,‌ ಸ್ನೇಹ, ಬಾಂಧವ್ಯದ ಶೇರ್ ಮಾಡಿದ್ದಾರೆ.

ನಟ ಚಿರು ಹಾಗೂ ನಿರ್ದೇಶಕ ನಾಗಾಭರಣ ಪುತ್ರ ಪನ್ನಗಾಭರಣ ಬಾಲ್ಯದ ಸ್ನೇಹಿತರು. ಇವರ ಸ್ನೇಹಕ್ಕೆ ಕೊನೆಯೇ ಇಲ್ಲ. ಚಿರು ತನ್ನ ಬಿಡುವಿನ ವೇಳೆಯನ್ನು ಸ್ನೇಹಿತರ ಜೊತೆ ಕಳೆಯಲು ಇಷ್ಟ ಪಡುತ್ತಿದ್ದರು. ಸ್ನೇಹಿತರಿಗಾಗಿ ಅಡುಗೆ ಮಾಡೋದು, ಪ್ರೆಂಡ್ಸ್ ಜೊತೆ ಟ್ರಿಪ್, ಗೇಮ್ ಹೀಗೆ ಸದಾ ಸ್ನೇಹಕ್ಕಾಗಿ ತುಡಿಯುತ್ತಿದ್ದರು. ಇದಕ್ಕೆ ಸಾಕ್ಷಿ ಎಂದರೇ ಚಿರು ಹಾಗೂ ಸ್ನೇಹಿತರ ನೊರೆಂಟು ಪೋಟೋಗಳು. ಅದರಲ್ಲೂ ಚಿರು ಪನ್ನಗಾಭರಣ ರಿಗೆ ಹೇರ್ ಸ್ಟೈಲ್ ಮಾಡ್ತಿರೋ ಪೋಟೋವೊಂದು ಈ ಹಿಂದೆ ವೈರಲ್ ಆಗಿತ್ತು. ಆ ಪೋಟೋ ಚಿರು ಹಾಗೂ ಪನ್ನಗಾಭರಣ ಬಾಂಧವ್ಯಕ್ಕೆ ಸಾಕ್ಷಿ ಒದಗಿಸುತ್ತದೆ.

ಚಿರು ನಿಧನದ ಬಳಿಕವೂ ಈ ಪೋಟೋಶೇರ್ ಮಾಡಿದ್ದ ಪನ್ನಗ ಹೇಗೆ ನೀನು ಇಲ್ಲದೇ ಬದುಕೋದು ಎಂದು ಪ್ರಶ್ನೆ ಮಾಡಿದ್ದರು. ಇದೀಗ ಮತ್ತೊಮ್ಮೆ ಆ ಪೋಟೋ ಮುನ್ನಲೆಗೆ ಬಂದಿದೆ. ಕಾರಣ ಅಂದು ಪನ್ನಗಾಭರಣನಿಗೆ ಚಿರು ಹೇರ್ ಸ್ಟೈಲ್ ಮಾಡಿದ್ದರೇ ಇಂದು ಪನ್ನಗಾಭರಣ ಪುತ್ರನಿಗೆ ರಾಯನ್ ರಾಜ್ ಸರ್ಜಾ ಹೇರ್ ಸ್ಟೈಲ್ ಮಾಡಿದ್ದಾನೆ. ಈ ಪೋಟೋ ವನ್ನು ಸೋಷಿಯಲ್ ಮಿಡಿಯಾ ದಲ್ಲಿ ಶೇರ್ ಮಾಡಿರೋ ಮೇಘನಾ ಸರ್ಜಾ, ಕೆಲವು ವಿಷಯಗಳು ಕೇವಲ ದೈವಿಕವಾಗಿ ಬಂದಿರುತ್ತದೆ ಎಂಬ ಟ್ಯಾಗ್ ಲೈನ್ ಹಾಕಿದ್ದಾರೆ. ಪೋಟೋದಲ್ಲಿ ಪನ್ನಗಾಭರಣ ಪುತ್ರ ಕುಳಿತುಕೊಂಡಿದ್ದರೇ ರಾಯನ್ ಆತನ ಹೇರ್ ಸ್ಟೈಲ್ ಮಾಡುತ್ತಿದ್ದಾನೆ.

ಬಾಲ್ಯದಿಂದಲೂ ರಾಯನ್ ಹಾಗೂ ಪನ್ನಗಾಭರಣ ಪುತ್ರ ಒಳ್ಳೆಯ ಸ್ನೇಹಿತರಾಗಿದ್ದು ಆಗಾಗ ಒಟ್ಟಿಗೆ ಸಮಯ ಕಳೆಯುತ್ತಾರೆ. ಈಗ ಹಳೆಯ ಪೋಟೋದ ಜೊತೆಗೆ ಮೇಘನಾ ಈಗ ರಾಯನ್ ಪೋಟೋ ಕೋಲಾಜ್ ಮಾಡಿ ಹಳೆ ಸ್ನೇಹ ಇಂದಿಗೂ ಮುಂದುವರೆದಿದೆ ಎಂದಿದ್ದಾರೆ. ಇದಕ್ಕೆ ಅಭಿಮಾನಿಗಳು ಕಮೆಂಟ್ ಮಾಡಿದ್ದು, ಚಿರುವನ್ನು ಮರೆಯಲು ಸಾಧ್ಯವಿಲ್ಲ. ಇಂಥ ಪೋಟೋಗಳೇ ನಮಗೆ ಚಿರು ಸದಾ ಸ್ಮರಿಸಿ ಮುನ್ನಡಲುಸ್ಪೂರ್ತಿ ಎಂದಿದ್ದಾರೆ.

ಇದನ್ನೂ ಓದಿ : ಮದುವೆ ಸಂಭ್ರಮದಲ್ಲಿ ಮೌನಿರಾಯ್ : ಸೂರಜ್ ಕೈಹಿಡಿದ ಕೆಜಿಎಫ್ ಬೆಡಗಿ

ಇದನ್ನೂ ಓದಿ : ಈ ಕಾರಣಕ್ಕೆ ಮಾಧ್ಯಮಗಳ ಮೇಲೆ ಕೆಂಡಾಮಂಡಲರಾದ ಸೂಪರ್​ ಸ್ಟಾರ್​ ನಾಗಾರ್ಜುನ

( Chiranjeevi sarja and son Rayan Raj Sarja same attitude, special Photos shared by Meghna Raj Sarja)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular