ಸೋಮವಾರ, ಏಪ್ರಿಲ್ 28, 2025
HomeCinemaRaja Rani : ನೇಹಾ ಗೌಡ ಚಂದನ್‌ ದಂಪತಿ ರಾಜಾ ರಾಣಿ

Raja Rani : ನೇಹಾ ಗೌಡ ಚಂದನ್‌ ದಂಪತಿ ರಾಜಾ ರಾಣಿ

- Advertisement -

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಜಾ ರಾಣಿ (Raja Rani) ರಿಯಾಲಿಟಿ ಶೋ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಗೊಂಬೆ ನೇಹಾ ಗೌಡ ಹಾಗೂ ಚಂದನ್‌ ದಂಪತಿ ಫೈನಲ್‌ ನಲ್ಲಿ ರಾಜಾ -ರಾಣಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಸೃಜನ್‌ ಲೋಕೇಶ್‌ ತಾರಾ ಅವರ ನಿರ್ಣಾಯಕತ್ವದಲ್ಲಿ ನಡೆದ ಶೋ ಕಿರುತೆರೆಯಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿತ್ತು.

ಭಾನುವಾರ ನಡೆದ ರಾಜಾ-ರಾಣಿ ಫಿನಾಲೆಯಲ್ಲಿ ಬಿಗ್‌ಬಾಸ್‌ ವಿನ್ನರ್‌ ಮಂಜು ಪಾವಗಡ, ನಟಿ ಶುಭಾ ಪೂಂಜಾ ಸೇರಿದಂತೆ ಹಲವು ಸೆಲೆಬ್ರಿಟಿಗಳು ಪಾಲ್ಗೊಂಡಿದ್ದರು. ಕಳೆದ ಕೆಲವು ತಿಂಗಳಿನಿಂದಲೂ ಮಹಿಳೆಯ ಮನ ಗೆದ್ದಿದ್ದ ರಾಜಾ ರಾಣಿ ರಿಯಾಲಿಟಿ ಶೋ ಗೆ ಅದ್ದೂರಿ ತೆರೆ ಬಿದ್ದಿದೆ.

ಕಿರುತೆರೆಯಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದ ಲಕ್ಷ್ಮೀ ಬಾರಮ್ಮ ಧಾರವಾಹಿಯ ಮೂಲಕ ಗೊಂಬೆ ಎಂದೇ ಖ್ಯಾತಿಯನ್ನು ಪಡೆದಿದ್ದ ನೇಹಾ ಗೌಡ ಹಾಗೂ ಚಂದನ್‌ ದಂಪತಿ ಶೋನಲ್ಲಿ ಅದ್ಬುತ ಪ್ರದರ್ಶನವನ್ನು ನೀಡಿದ್ದಾರೆ. ಈ ಮೂಲಕ ರಾಜಾ ರಾಣಿಯಾಗಿ ಹೊರಹೊಮ್ಮಿದ್ದಾರೆ.

ಕನ್ನಡ ಕಿರುತೆರೆ ಲೋಕದಲ್ಲಿಯೇ ರಾಜಾ ರಾಣಿ ಶೋ ಹೊಸ ಅಲೆಯನ್ನು ಸೃಷ್ಟಿಸಿತ್ತು. ಅತೀ ಹೆಚ್ಚು ಸಂಖ್ಯೆಯಲ್ಲಿ ಮಹಿಳಾ ವೀಕ್ಷಕರು ಕಾರ್ಯಕ್ರಮಕ್ಕಾಗಿ ಕಾದು ಕುಳಿತಿರುತ್ತಿದ್ದರು. ತಮ್ಮ ವೈವಾಹಿಕ ಜೀವನವನ್ನು ಮೆಲುಕು ಹಾಕುವಷ್ಟರ ಮಟ್ಟಿಗೆ ಶೋ ಪ್ರೇಕ್ಷಕರಿಗೆ ಇಷ್ಟವಾಗಿತ್ತು.

ಇದನ್ನೂ ಓದಿ : Avatara Purusha : ಅವತಾರ ಪುರುಷ ಆಗಮಿಸಲು ಶರಣ್ ಸಿದ್ಧತೆ: ಸಾಥ್‌ ಕೊಡ್ತಿದ್ದಾರೆ ಚುಟು ಚುಟು ಬೆಡಗಿ

ಇದನ್ನೂ ಓದಿ : Suman Ranganath : ಪೆಟ್ರೋಮ್ಯಾಕ್ಸ್ ಗೆ ಸುಮನ್ ರಂಗನಾಥ್ : ಡಿಗ್ಲ್ಯಾಮರ್ ಪಾತ್ರದಲ್ಲಿ ಗ್ಲಾಮರ್ ಬೊಂಬೆ

( Colors Kannada Raja Rani grand finale Gombe Neha Gowda And Chandan won Final )

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular