ಭಾನುವಾರ, ಏಪ್ರಿಲ್ 27, 2025
HomeCinemaKGF -2 RECORD : ಬಿಡುಗಡೆಗೂ ಮುನ್ನ ಮತ್ತೊಂದು ದಾಖಲೆ ಬರೆದ ಕೆಜಿಎಫ್-2: ಟೀಸರ್ ವೀವ್ಸ್...

KGF -2 RECORD : ಬಿಡುಗಡೆಗೂ ಮುನ್ನ ಮತ್ತೊಂದು ದಾಖಲೆ ಬರೆದ ಕೆಜಿಎಫ್-2: ಟೀಸರ್ ವೀವ್ಸ್ ಎಷ್ಟು ಗೊತ್ತಾ?

- Advertisement -

ಸಿನಿಮಾ ರಿಲೀಸ್ ಆದ ಮೇಲೆ ಬಾಕ್ಸಾಫೀಸ್ ನಲ್ಲಿ ಗೆದ್ದು ದಾಖಲೆ ಬರೆಯೋದು ಕಾಮನ್. ಆದರೆ ವಿಶ್ವವನ್ನೇ ಸ್ಯಾಂಡಲ್ ವುಡ್ ನತ್ತ ತಿರುಗಿ ನೋಡುವಂತೆ ಮಾಡಿದ ಕೆಜಿಎಫ್ 2 (KGF -2 RECORD) ಸಿನಿಮಾ‌ ಮಾತ್ರ ರಿಲೀಸ್ ಗೂ‌ ಮುನ್ನವೇ ದಾಖಲೆಗಳ ಮೇಲೆ ದಾಖಲೆ ಬರೆಯುತ್ತ ಸಾಗಿದೆ. ರಿಲೀಸ್ ಆಗಿರೋ ಒಂದೇ ಒಂದು ಟೀಸರ್ ವಿಶ್ವದಲ್ಲಿ ಹೊಸ ದಾಖಲೆಗೆ ಸಾಕ್ಷಿಯಾಗಿದೆ. ಕೆಜಿಎಫ್-2 ಸಿನಿ ಜಗತ್ತು ಕಾತುರತೆಯಿಂದ ಕಾಯ್ತಿರೋ ಸಿನಿಮಾ. ಕೊರೋನಾ ಕಾರಣಕ್ಕೆ ರಿಲೀಸ್ ಡೇಟ್ ಮುಂದೂಡಿಕೆಯಾಗುತ್ತಲೇ ಇದ್ದರೂ ಅಭಿಮಾನಿಗಳ ಸಂಭ್ರಮ ಕಡಿಮೆಯಾಗಿಲ್ಲ. ಸದ್ಯ 2022 ರ ಏಪ್ರಿಲ್ 14 ರಂದು ಸಿನಿಮಾ ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ.

ಈ ಮಧ್ಯೆಯೂ ಕೆಜಿಎಫ್ 2 ತನ್ನ ದಾಖಲೆಯ ನಾಗಾಲೋಟ ಮುಂದುವರೆಸಿದೆ. ಈ ವರ್ಷದ ಯಶ್ ಬರ್ತಡೆಗೇ ಕೆಜಿಎಫ್ 2 ಚಿತ್ರತಂಡ ಟೀಸರ್ ವೊಂದನ್ನು ರಿಲೀಸ್ ಮಾಡಿತ್ತು. ಈ ಟೀಸರ್ ಯೂಟ್ಯೂಬ್ ನಲ್ಲಿ ಈಗಾಗಲೇ 226 ಮಿಲಿಯನ್ ವೀವ್ಸ್ ಪಡೆದು ವಿಶ್ವದಲ್ಲೇ ಇಷ್ಟು ವೀಕ್ಷಣೆ ಪಡೆದ ಮೊದಲ ಸಿನಿಮಾ ಟೀಸರ್ ಎಂಬ ದಾಖಲೆಗೆ ಪಾತ್ರವಾಗಿದೆ.

ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು,ತೆಲುಗು ಎಲ್ಲ ಸೇರಿದಂತೆ ಭಾರತೀಯ ಚಲನಚಿತ್ರ ಇತಿಹಾಸದಲ್ಲೇ ಟೀಸರ್ ವೊಂದು ಇಷ್ಟು ಪ್ರಮಾಣದ ವೀಕ್ಷಣೆ ಪಡೆದಿರೋರು ಇದೇ ಮೊದಲು. ಕೆಜಿಎಫ್ 2 ಟೀಸರ್ ರಿಲೀಸ್ ಆದ 325 ದಿನಗಳಲ್ಲೇ 226ಮಿಲಿಯನ್ ಲೈಕ್ಸ್ ಪಡೆದಿದ್ದು ಹೊಸ ದಾಖಲೆ. ಸಿನಿಮಾ ರಿಲೀಸ್ ಲೇಟಾದ್ರೂ ಸಿನಿಮಾ ಟೀಸರ್ ವಿಶ್ವದಲ್ಲೇ ಯಾವ ಸಿನಿಮಾವೂ ಮಾಡದೇ ಇರೋ ದಾಖಲೆ ಮಾಡಿರೋದಿಕ್ಕೆ ಅಭಿಮಾನಿಗಳು ಖುಷಿಯಾಗಿದ್ದಾರೆ.

ಕೊರೋನಾ ಹಿನ್ನೆಲೆಯಲ್ಲಿ ಅದ್ದೂರಿಯಾಗಿ ಬರ್ತಡೇ ಆಚರಿಸಿಕೊಳ್ಳದ ಯಶ್ ಗೆ ಕೆಜಿಎಫ್ 2 ಚಿತ್ರತಂಡ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಸುಂದರವಾದ ಟೀಸರ್ ಗಿಫ್ಟ್ ಮಾಡಿದ್ದರು. ಈ ಟೀಸರ್ ಈಗ 226 ಮಿಲಿಯನ್ ವೀವ್ಸ್ ಜೊತೆ ದಾಖಲೆಯತ್ತ ಮುನ್ನುಗ್ಗುತ್ತಿದೆ. ಟೀಸರ್ ದಾಖಲೆ ಬರೆಯುತ್ತಿದ್ದರೂ ಸಿನಿಮಾ ರಿಲೀಸ್ ಗೆ ಮಾತ್ರ ವಿಘ್ನಗಳು ಎದುರಾಗುತ್ತಲೇ ಇದೆ. ಈಗಾಗಲೇ ರಿಲೀಸ್ ಆಗಬೇಕಿದ್ದ ಸಿನಿಮಾಗೆ ಕೊರೋನಾ ಗೆ ಅಡ್ಡಿಯಾಗಿತ್ತು.

ಕೊನೆಗೂ 2022 ರ ಏಪ್ರಿಲ್ 14 ರಂದು ಸಿನಿಮಾ ರಿಲೀಸ್ ಗೆ‌ ಮುಹೂರ್ತವಂತೂ ಫಿಕ್ಸ್ ಆಗಿದೆ. ಆದರೆ ಅದೇ ದಿನ ಬಾಲಿವುಡ್ ಮಿಸ್ಟರ್ ಫರ್ಪೆಕ್ಟ್ ಅಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಕೂಡ ರಿಲೀಸ್ ಆಗಲಿದ್ದು ಇದು ಕೆಜಿಎಫ್ ಓಟಕ್ಕೆ ಕಡಿವಾಣ ಹಾಕುತ್ತಾ ಅನ್ನೋ ಅನುಮಾನ ಮೂಡಿಸಿದೆ.

ಇದನ್ನೂ ಓದಿ :‌ ಮಾಲ್ಡೀವ್ಸ್ ನಲ್ಲಿ ಮಾನುಷಿ : ಮತ್ತೇರಿಸುವ ಪೋಟೋಗೆ ಫ್ಯಾನ್ಸ್ ಫಿದಾ

ಇದನ್ನೂ ಓದಿ : Yash Bollywood : ಬಾಲಿವುಡ್ ಗೆ ಎಂಟ್ರಿ ಕೊಡ್ತಾರಾ ರಾಕಿಂಗ್ ಸ್ಟಾರ್ : ಸುಳಿವು ಬಿಟ್ಟು ಕೊಟ್ಟ ಡಬ್ಬುರತ್ನಾನಿ

(KGF -2 RECORD even before cinema release,Teaser Received by 226 Million views)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular